

ಮುಂಬೈ: ಬಾಲಿವುಡ್ ನಟ ಸೋನು ಸೂದ್ ಸಿನಿಮಾದಲ್ಲಿ ಮಾತ್ರವಲ್ಲ ನಿಜ ಜೀವನದಲ್ಲೂ ಹೀರೋ. ತಮ್ಮ ನಟನ ಶೈಲಿಯಿಂದಾಗಿ ಬಾಲಿವುಡ್ನಲ್ಲಿ ಮಾತ್ರವಲ್ಲ ಸೌತ್ ಇಂಡಸ್ಟ್ರಿಯಲ್ಲಿಯೂ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ ಸೋನು ಸೂದ್. ಬಚ್ಚನ್ ಕುಟುಂಬದ ಮೂವರು ಸದಸ್ಯರೊಂದಿಗೆ ತೆರೆ ಹಂಚಿಕೊಂಡಿರುವ ನಟ ಸೋನು ಸೂದ್ ಅವರ ಕುರಿತ ಆಸಕ್ತಿದಾಯಕ ಘಟನೆಯನ್ನು ಇತ್ತೀಚಿನ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.(Aishwarya Rai)
ಅಮಿತಾಭ್ ಬಚ್ಚನ್ ಜತೆ 'ಬುದ್ಧ ಹೋಗಾ ತೇರಾ ಬಾಪ್' ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ಅವರು ಅಭಿಷೇಕ್ ಬಚ್ಚನ್ ಅವರೊಂದಿಗೆ 'ಯುವ' ಚಿತ್ರದಲ್ಲಿ ಕಾಣಿಸಿಕೊಂಡರು ಮತ್ತು 'ಜೋಧಾ ಅಕ್ಬರ್' ಚಿತ್ರದಲ್ಲಿ ಐಶ್ವರ್ಯಾ ರೈ ಅವರ ಸಹೋದರನ ಪಾತ್ರದಲ್ಲಿ ಸೋನು ಸೂದ್ ನಟಿಸಿದ್ದಾರೆ. ಸೋನು ಪಾತ್ರವನ್ನು ನಿರ್ವಹಿಸಿದರು.
ಸೋನು ಸೂದ್ ಬಚ್ಚನ್ ಕುಟುಂಬದ ಈ ಮೂವರು ಸದಸ್ಯರ ವಿಶೇಷತೆಗಳನ್ನು ಹಂಚಿಕೊಂಡಿದ್ದಾರೆ. ಅಮಿತಾಭ್ ಅವರೊಂದಿಗೆ ಕೆಲಸ ಮಾಡಿದ ಅನುಭವವನ್ನು ಹಂಚಿಕೊಂಡ ಸೋನು, ಚಿತ್ರದ ಸಮಯದಲ್ಲಿ ಬಿಗ್ ಬಿ ಯಾವಾಗಲೂ ಸೆಟ್‌ನಲ್ಲಿ ಇರುತ್ತಾರೆ. ವ್ಯಾನಿಟಿ ವ್ಯಾನ್‌ನಲ್ಲಿ ಕುಳಿತುಕೊಳ್ಳುವ ಬದಲು ಅವರ ಪಾತ್ರವನ್ನು ಅಭ್ಯಾಸ ಮಾಡುತ್ತಲೇ ಇರುತ್ತಾರೆ. ನಾನು ಕೂಡ ಅವರಂತೆ ಅಭ್ಯಾಸ ಮಾಡುತ್ತಲೇ ಇದ್ದೆ. ಇದನ್ನು ನೋಡಿ ಅವರಿಗೆ ಬಹಳ ಸಂತೋಷವಾಯಿತು. ಅಮಿತಾಭ್ ಅವರಂತೆ ನಾನು ಪ್ರತಿ ಚಿತ್ರವನ್ನೂ ನನ್ನ ಮೊದಲ ಚಿತ್ರ ಎಂದು ಪರಿಗಣಿಸಿ ಕೆಲಸ ಮಾಡುತ್ತೇನೆ. ಅಮಿತಾಭ್ ರನ್ನು ಕೇವಲ ಕ್ಯಾಮೆರಾಗಾಗಿಯೇ ಮಾಡಲಾಗಿದೆ ಎಂದು ಹೇಳಿದ್ದಾರೆ.
ಇನ್ನು ಅಭಿಷೇಕ್ ಬಚ್ಚನ್ ಕುರಿತು ಮಾತನಾಡಿದ ಅವರು, ಅವರು ಮನಸ್ಸಿನಲ್ಲಿ ಒಂದು ಹೊರಗೊಂದು ಎಂಬಂತಿಲ್ಲ. ಅವರು ಹೊರಗಿನಿಂದ ಮತ್ತು ಒಳಗಿನಿಂದ ಒಂದೇ ಆಗಿದ್ದಾರೆ ಎಂದು ಶ್ಲಾಘಿಸಿದರು. ಇನ್ನು ಐಶ್ವರ್ಯಾ ರೈ ಬಚ್ಚನ್ ಕುರಿತು ಮಾತನಾಡಿದ ಸೋನು ಸೂದ್ ಜೋಧಾ ಅಕ್ಬರ್ ಸಿನಿಮಾದಲ್ಲಿ ಐಶ್ವರ್ಯಾ ಅವರ ಸಹೋದರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ಚಿತ್ರೀಕರಣದ ಆರಂಭದಲ್ಲಿ ಶೂಟಿಂಗ್ ಮುಗಿಸಿ ಸೈಲೆಂಟಾಗಿ ಕುಳಿತುಕೊಳ್ಳುತ್ತಿದ್ದರು, ಬಳಿಕ ಮಾತನಾಡಲು ಆರಂಭಿಸಿದರು. ಒಮ್ಮೆ ಐಶ್ವರ್ಯಾ ನೀವು ನನಗೆ ಪಾ(ಅಮಿತಾಭ್ ಬಚ್ಚನ್)ರನ್ನು ನೆನಪಿಸುತ್ತೀರಾ ಎಂದು ಹೇಳಿದರು. ಅವರು ಈಗಲೂ ನನ್ನನ್ನು ಭಾಯ್ ಸಾಹೇಬ್ ಎಂದು ಕರೆಯುತ್ತಾರೆ.(ಏಜೆನ್ಸೀಸ್)