ಪ್ರಿಯಾಂಕಾ ಚೋಪ್ರಾ ಯಾರನ್ನು ಮದುವೆಯಾಗಬೇಕಿತ್ತು ಗೊತ್ತಾ?

Priyanka-Chopra-Final
Published on

ಮುಂಬೈ: ಬಾಲಿವುಡ್​ ನಟಿ ಪ್ರಿಯಾಂಕಾ ಕೆಲವು ವರ್ಷಗಳ ಹಿಂದೆ ಹಾಲಿವುಡ್​ಗೆ ಹೋಗಿದ್ದು, ಪ್ಯಾನ್​ವರ್ಲ್ಡ್​​ ನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದು, ಜನಪ್ರಿಯ ಗಾಯಕ ನಿಕ್​ ಜೋನಾಸ್ ಅವರನ್ನು ಮದುವೆಯಾಗಿದ್ದು … ಎಲ್ಲವೂ ಗೊತ್ತೇ ಇದೆ. ಆದರೆ, ನಿಕ್​ಗೂ ಮುನ್ನ ಪ್ರಿಯಾಂಕಾ ಬೇರೆಯವರನ್ನು ಮದುವೆಯಾಗಬೇಕಿತ್ತಂತೆ.

ಹೌದು, ಮನೆಯವರು ಪ್ರಿಯಾಂಕಾಗೆ ಬೇರೆ ಹುಡುಗನನ್ನು ಹುಡುಕಿದ್ದರಂತೆ. ಅದಲ್ಲೂ ಪ್ರಿಯಾಂಕಾ ಅತ್ತೆ, ಒಬ್ಬ ಹುಡುಗನನ್ನು ಆಯ್ಕೆ ಮಾಡಿ, ಅವನನ್ನೇ ಮದುವೆಯಾಗಬೇಕೆಂದು ಹೇಳಿದ್ದರಂತೆ. ಆದರೆ, ಆಗಿದ್ದೇ ಬೇರೆ. ಇಷ್ಟಕ್ಕೂ ಪ್ರಿಯಾಂಕಾ ಅವರ ಅತ್ತೆ ತೋರಿಸಿದ ಹುಡುಗ ಯಾರು ಗೊತ್ತಾ? ಕಿರುತೆರೆ ನಟ ಮೋಹಿತ್​ ರೈನಾ.

ಹೆಸರು ಎಲ್ಲೋ ಕೇಳಿದ ಹಾಗಿದೆಯಲ್ಲ, ಯಾರು ಈ ಮೋಹಿತ್​ ರೈನಾ ಎಂಬ ಪ್ರಶ್ನೆ ಬರಬಹುದು. ಕೆಲವು ವರ್ಷಗಳ ಹಿಂದೆ ಕಿರುತೆರೆಯಲ್ಲಿ ಪ್ರಸಾರವಾದ ದೇವೋಂ ಕೇ ದೇವ್​ ಮಹಾದೇವ್​  ಧಾರಾವಾಹಿಯಲ್ಲಿ ಈಶ್ವರನ ಪಾತ್ರ ಮಾಡಿದ್ದರು ಮೋಹಿತ್​. ಸಾಕಷ್ಟು ಜನಪ್ರಿಯರೂ ಆಗಿದ್ದರು. ಅವರ ನಡೆ-ನುಡಿ, ಹಾವ-ಭಾವ ನೋಡಿ ಬಹಳ ಇಂಪ್ರೆಸ್​ ಆಗಿದ್ದ ಪ್ರಿಯಾಂಕಾ ಅತ್ತೆ, ಅವರಿಬ್ಬರೂ ಮದುವೆಯಾದರೆ ಚೆನ್ನ ಎಂದು ಪ್ರಯತ್ನ ನಡೆಸಿದ್ದರಂತೆ.

ಆದರೆ, ಪ್ರಿಯಾಂಕಾ ಮತ್ತು ಮೋಹಿತ್​ ಮದುವೆ ಸಾಧ್ಯವಾಗಲಿಲ್ಲ. ಕೆಲವೇ ಸಮಯದಲ್ಲಿ ಪ್ರಿಯಾಂಕಾ ಹಾಲಿವುಡ್​ಗೆ ಹೋಗಿ ನೆಲೆಸಿದರು. ಇತ್ತ ಮೋಹಿತ್​, ನಟನೆಯಲ್ಲಿ ಬಿಜಿಯಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net