ಇದು ನನಗೆ ಸ್ಫೂರ್ತಿ ನೀಡಿದ ಸಂಗತಿ; ವಿಡಿಯೋ ಹಂಚಿಕೊಂಡ ನಟಿ ಪ್ರಿಯಾಂಕಾ ಚೋಪ್ರಾ | Priyanka Chopra

blank

ಮುಂಬೈ: ನಟಿ ಪ್ರಿಯಾಂಕಾ ಚೋಪ್ರಾ(Priyanka Chopra) ಇತ್ತೀಚಿನ ದಿನಗಳಲ್ಲಿ ಸಿನಿಮಾ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಅವರು ಎಸ್.ಎಸ್. ರಾಜಮೌಳಿ ಅವರ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ನಟಿ ಇನ್​​ಸ್ಟಾಗ್ರಾಮ್​ ಖಾಯೆಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಇದು ಒಂದು ಸ್ಪೂರ್ತಿದಾಯಕ ಕಥೆ ಎಂದು ಹೇಳಿದ್ದಾರೆ.

ಇದನ್ನು ಓದಿ: ತಿರುಪತಿ ವೆಂಕಟೇಶ್ವರನ ದರ್ಶನ ಪಡೆದ ಪ್ರಭುದೇವ​​; ಅಭಿಮಾನಿಗಳೊಂದಿಗೆ ಸೆಲ್ಫಿ ಕ್ಲಿಕ್ಕಿಸಿದ India’s Michael Jackson | Prabhu Deva

ಪ್ರಿಯಾಂಕಾ ಚೋಪ್ರಾ ವಿಡಿಯೋದಲ್ಲಿ, ನಾನು ಇದನ್ನು ಹೆಚ್ಚಾಗಿ ಮಾಡುವುದಿಲ್ಲ ಆದರೆ ಇಂದು ನನಗೆ ಸ್ಫೂರ್ತಿ ಸಿಕ್ಕಿತು ಎಂದು ಹೇಳಿದ್ದಾರೆ. ನಾನು ಮುಂಬೈಗೆ ಹೋಗಲು ವಿಶಾಖಪಟ್ಟಣಂ ವಿಮಾನ ನಿಲ್ದಾಣದ ಕಡೆಗೆ ಹೋಗುತ್ತಿದ್ದೆ. ಆಗ ನಾನು ಸೀಬೆಹಣ್ಣು ಮಾರುವ ಮಹಿಳೆಯೊಬ್ಬಳನ್ನು ನೋಡಿದೆ. ನನಗೆ ಹಸಿ ಸೀಬೆಹಣ್ಣು ಎಂದರೆ ಇಷ್ಟ. ಹಾಗಾಗಿ ನಾನು ನಿಲ್ಲಿಸಿ ನಿಮ್ಮ ಎಲ್ಲಾ ಸೀಬೆಹಣ್ಣಿಗೆ ಎಷ್ಟು?’ ಎಂದು ಕೇಳಿದೆ. ಆಕೆ 150 ರೂಪಾಯಿ ಎಂದು ಹೇಳಿದಳು. ಹಾಗಾಗಿ ನಾನು ಅವಳಿಗೆ 200 ರೂಪಾಯಿ ನೋಟು ಕೊಟ್ಟೆ ಮತ್ತು ಅವಳು ನನಗೆ ಚಿಲ್ಲರೆ ನೀಡಲು ಪ್ರಯತ್ನಿಸುತ್ತಿದ್ದಳು. ನಾನು, ‘ಇಲ್ಲ, ದಯವಿಟ್ಟು ಅದನ್ನು ಇಟ್ಟುಕೊಳ್ಳಿ’ ಎಂದು ಹೇಳಿದೆ.

ಜೀವನೋಪಾಯಕ್ಕಾಗಿ ಅವರು ಸ್ಪಷ್ಟವಾಗಿ ಸೀಬೆಹಣ್ಣು ಮಾರುತ್ತಿದ್ದಳು. ಅವಳು ಸ್ವಲ್ಪ ಮುಂದೆ ಹೋದಳು, ಆದರೆ ಸಿಗ್ನಲ್​ನಲ್ಲಿ ಕೆಂಪು ಬಣ್ಣದಿಂದ ಹಸಿರು ಬಣ್ಣಕ್ಕೆ ಬದಲಾಗುವ ಮೊದಲು ಅವಳು ಹಿಂತಿರುಗಿ ನನಗೆ ಎರಡು ಸೀಬೆಹಣ್ಣನ್ನು ನೀಡದಳು. ಕೆಲಸ ಮಾಡುವ ಮಹಿಳೆ ದಾನವನ್ನು ಬಯಸಲಿಲ್ಲ! ನಿಜವಾಗಿಯೂ ಇದು ನನ್ ಮನಸ್ಸಿಗೆ ಹತ್ತಿರವಾಯಿತು ಎಂದು ಹೇಳಿದ್ದಾರೆ.

ಈ ವಿಡಿಯೋ ಜತೆಗೆ ಚಿತ್ರೀಕರಣಕ್ಕೆ ಸಿದ್ಧರಾಗುತ್ತಿರುವುದು, ಸೆಟ್‌ನಲ್ಲಿ ಕೆಲವು ಸಿಬ್ಬಂದಿಯೊಂದಿಗೆ ವಿಶ್ರಾಂತಿ ಪಡೆಯುತ್ತಿರುವುದು ಮತ್ತು ಐಸ್ ಕ್ರೀಮ್ ಸೇವಿಸುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

 

View this post on Instagram

 

A post shared by Priyanka (@priyankachopra)

ಪ್ರಿಯಾಂಕಾ ಚೋಪ್ರಾ ಇತ್ತೀಚೆಗೆ ಸಿಟಾಡೆಲ್‌ನ ಎರಡನೇ ಸೀಸನ್‌ನ ಚಿತ್ರೀಕರಣವನ್ನು ಮುಗಿಸಿದರು. ಅವರ ಕೊನೆಯ ಭಾರತೀಯ ಸಿನಿಮಾ ದಿ ಸ್ಕೈ ಈಸ್ ಪಿಂಕ್. ಇದು 2019ರಲ್ಲಿ ಬಿಡುಗಡೆಯಾಯಿತು. ಸದ್ಯ ಪ್ರಿಯಾಂಕಾ ಚೋಪ್ರಾ ಹೆಡ್ಸ್ ಆಫ್ ಸ್ಟೇಟ್, ದಿ ಬ್ಲಫ್, SSMB29 ನಂತಹ ಚಿತ್ರಗಳನ್ನು ಮಾಡುತ್ತಿದ್ದಾರೆ. ರಾಜಮೌಳಿ ಸಿನಿಮಾ SSMB29 ಭಾಗವಾಗಿರುವುದಾಗಿ ಪ್ರಿಯಾಂಕಾ ಭಾಗವಾಗಿರುವುದಾಗಿ ಇನ್ನೂ ದೃಢಪಡಿಸಿಲ್ಲ. ಆದರೆ ಅಭಿಮಾನಿಗಳು ಶೀಘ್ರದಲ್ಲೇ ಘೋಷಣೆ ಮಾಡಬಹುದೆಂದು ಕಾಯುತ್ತಿದ್ದಾರೆ.(ಏಜೆನ್ಸೀಸ್​)

ಜನಪ್ರಿಯತೆ ಹೊಂದಿರುವ ಏಕೈಕ ರಾಜಕಾರಣಿ ಪ್ರಧಾನಿ ಮೋದಿ; ಜಯಾ ಬಚ್ಚನ್ ಹೀಗೇಳಿದ್ದೇಕೆ? | Jaya Bachchan

Share This Article

ಬೆಳಗ್ಗೆ ಎದ್ದ ತಕ್ಷಣ ಮಾಡುವ ಸಣ್ಣ ತಪ್ಪಿಂದಾಗಿ ಗಂಭೀರ ಕಾಯಿಲೆಗಳು ಎದುರಿಸಬೇಕಾಗುತ್ತಂತೆ!; ಅದು ಏನು ಗೊತ್ತೆ? | Morning

Morning : ನೀವು ಬೆಳ್ಳಿಗ್ಗೆ ಮತ್ತುಮ ರಾತ್ರಿ ಹಲ್ಲುಜ್ಜದೆ ಮಲಗಿದ್ರೆ ಏನೆಲ್ಲಾ ಆರೋಗ್ಯ ಸಮಸ್ಯೆಗಳು ಎದುರಾಗಿತ್ತವೆ…

ಬೇಸಿಗೆಯಲ್ಲಿ ತಾಳೆ ಹಣ್ಣು ತಿನ್ನುವುದರಿಂದ ಸಿಗುವ ಆರೋಗ್ಯ ಲಾಭಗಳ ಬಗ್ಗೆ ತಿಳಿದ್ರೆ ನೀವು ಅಚ್ಚರಿಪಡ್ತೀರಾ! Ice apple

Ice apple : ಸದ್ಯ ದೇಶದೆಲ್ಲಡೆ ರಣ ಬಿಸಿಲು ಸುಡುತ್ತಿದೆ. ಮಳೆಯಿಲ್ಲದೆ, ಬಿಸಿಲಿನ ಶಾಖಕ್ಕೆ ಜನರು…

ಈ 3 ರಾಶಿಯವರು ಯಾವುದೇ ಕಷ್ಟಕರ ಪರಿಸ್ಥಿತಿಯನ್ನು ಬಹಳ ಸುಲಭವಾಗಿ ಎದುರಿಸುತ್ತಾರಂತೆ! Zodiac Signs

Zodiac Signs : ಹುಟ್ಟಿದ ತಕ್ಷಣ ಜನ್ಮ ದಿನಾಂಕ ಹಾಗೂ ಹುಟ್ಟಿದ ಗಳಿಗೆಯನ್ನು ಬರೆದಿಡಲಾಗುತ್ತದೆ. ಹಿಂದು…