ಅಮೆರಿಕದಲ್ಲೇ ನಡೆಯಿತು ಬಾಲಿವುಡ್​ ಸೆಲೆಬ್ರಿಟಿಯ ಜನತಾ ಕರ್ಫ್ಯೂ; ವಿದೇಶದಿಂದಲೇ ದೇಶದ ವೈದ್ಯರಿಗೆ ನಮನ ಸಲ್ಲಿಸಿದ ನಟಿ

priyanka
Published on

ವಾಷಿಂಗ್ಟನ್​: ಕರೊನಾ ವೈರಸ್​ ನಿಯಂತ್ರಣಕ್ಕೆಂದು ಪ್ರಧಾನಿ ನರೇಂದ್ರ ಮೋದಿ ಕರೆಕೊಟ್ಟಿದ್ದ ಜನತಾ ಕರ್ಫ್ಯೂಗೆ ಪೂರ್ತಿ ದೇಶ ಬೆಂಬಲ ಸೂಚಿಸಿದೆ. ವಿಶೇಷವೆಂದರೆ ದೇಶ ಮಾತ್ರವಲ್ಲದೆ ವಿದೇಶದಲ್ಲಿರುವ ಬಾಲಿವುಡ್​ ಸ್ಟಾರ್​ಗಳೂ ಕೂಡ ಚಪ್ಪಾಳೆ ತಟ್ಟುವ ಮೂಲಕ ಈ ದೇಶದ ವೈದ್ಯರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಬಾಲಿವುಡ್​ನ ನಟಿ ಪ್ರಿಯಾಂಕ ಛೋಪ್ರಾ ಸದ್ಯ ಅಮೆರಿಕದ ಲಾಸ್​ ಏಂಜಲೀಸ್​ನಲ್ಲಿ ಇದ್ದಾರೆ. ದೇಶದಲ್ಲೆಲೆಡೆ 14 ಗಂಟೆಗಳ ಕಾಲ ಜನತಾ ಕರ್ಫ್ಯೂ ಆಚರಿಸಲಾಗಿದೆ, ಅದರಲ್ಲಿ ನಾನು ದೇಶದಲ್ಲಿದ್ದು ಭಾಗವಹಿಸಲು ಆಗಲಿಲ್ಲ. ಇಲ್ಲಿ ಅಮೆರಿಕದಲ್ಲಿದ್ದೇ ನಾನು ನನ್ನ ದೇಶದಲ್ಲಿ ಕರೊನಾ ವೈರಸ್​ ತಡೆಗೆ ಹಗಲಿರುಳು ದುಡಿಯುತ್ತಿರುವ ವೈದ್ಯರಿಗೆ ಮತ್ತು ಅಗತ್ಯ ಕ್ಷೇತ್ರದ ಕೆಲಸಗಾರರಿಗೆ ಧನ್ಯವಾದಗಳು ಸಲ್ಲಿಸುತ್ತೇನೆ ಎಂದು ಆಕೆ ಹೇಳಿದ್ದಾರೆ.

ನಿನ್ನೆ (ಮಾ.22) ದೇಶದಾದ್ಯಂತ ಒಟ್ಟು 14 ಗಂಟೆಗಳ ಕಾಲ ಜನತಾ ಕರ್ಫ್ಯೂ ಆಚರಿಸಲಾಗಿದ್ದು, ಜನರು ಸ್ವ ಇಚ್ಛೆಯಿಂದ ಮನೆಯಿಂದ ಹೊರಗೆ ಬರದೆ ಜನತಾ ಕರ್ಫ್ಯೂ ಅನ್ನು ಯಶಸ್ವಿಗೊಳಿಸಿದ್ದಾರೆ. ಸಂಜೆ ಐದು ಗಂಟೆ ಸರಿಯಾಗಿ ಪ್ರತಿಯೊಬ್ಬರು ಮನೆಯಿಂದ ಹೊರಗೆ ಬಂದು ಚಪ್ಪಾಳೆ, ಗಂಟೆ, ಜಾಗಟೆಗಳ ಮೂಲಕ ವೈದ್ಯರಿಗೆ ಮತ್ತು ಅಗತ್ಯ ಕ್ಷೇತ್ರಗಳ ಕೆಲಸಗಾರರಿಗೆ ಗೌರವ ಸಲ್ಲಿಸಿದ್ದಾರೆ. ಬಾಲಿವುಡ್​ನ ಸ್ಟಾರ್​ಗಳೂ ಸಹ ಚಪ್ಪಾಳೆ ತಟ್ಟಿ ಗೌರವ ಸಲ್ಲಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net