More

    ದೇಶದ ಜನತೆ ಮೇಲೆ ಪ್ರಧಾನಿ ಮೋದಿ ಅಸಮಾಧಾನ: ದಯವಿಟ್ಟು ಗಂಭೀರವಾಗಿ ಪರಿಗಣಿಸಿ ಎಂದು ಮನವಿ

    ನವದೆಹಲಿ: ಕರೊನಾ ವೈರಸ್​ ಸೋಂಕು ಮತ್ತಷ್ಟು ಹರಡದಿರಲೆಂದು ಕೇಂದ್ರ ಸರ್ಕಾರ ಗಂಭೀರವಾದ ಕ್ರಮಗಳನ್ನು ತೆಗೆದುಕೊಂಡಿದೆ. ಈಗಾಗಲೇ ಅನೇಕ ನಗರಗಳನ್ನು ಲಾಕ್​ಡೌನ್ ಮಾಡಲಾಗಿದೆ. ಹೀಗಿದ್ದರೂ ಜನರು ಎಂದಿನಂತೆಯೇ ಓಡಾಡುತ್ತಿರುವುದನ್ನು ಮನಗಂಡಿರುವ ಪ್ರಧಾನಿ ಮೋದಿ ಟ್ವೀಟ್​ ಮೂಲಕ ಅಸಮಾಧಾನ ಹೊರಹಾಕಿದ್ದಾರೆ.

    ಹಿಂದಿಯಲ್ಲಿ ಪ್ರಧಾನಿ ಮೋದಿ ಟ್ವೀಟ್​ ಮಾಡಿದ್ದು, ಅದರ ಸಾರಾ ಹೀಗಿದೆ… ಲಾಕ್​ಡೌನ್ ಅನ್ನು ಅನೇಕ ಜನರು ಗಂಭೀರವಾಗಿ ಪರಿಗಣಿಸಿಲ್ಲ. ದಯವಿಟ್ಟು ನಿಮ್ಮನ್ನು ನೀವು ಕಾಪಾಡಿಕೊಂಡು, ನಿಮ್ಮ ಕುಟುಂಬವನ್ನು ಉಳಿಸಿಕೊಳ್ಳಿ. ಇದಕ್ಕಾಗಿ ಸರ್ಕಾರದ ನಿರ್ದೇಶನಗಳನ್ನು ಗಂಭೀರವಾಗಿ ಪಾಲಿಸಿ. ಕಾನೂನು ಮತ್ತು ನಿಯಮಗಳನ್ನು ಪಾಲಿಸುವುದನ್ನು ಜನತೆಗೆ ರಾಜ್ಯ ಸರ್ಕಾರಗಳು ಖಚಿತಪಡಿಸಿ ಎಂದು ಪ್ರಧಾನಿ ವಿನಂತಿ ಮಾಡಿದ್ದಾರೆ.

    ಭಾರತದಾದ್ಯಂತ ದೆಹಲಿ, ಮುಂಬೈ, ಚೆನ್ನೈ, ಕೊಲ್ಕತ ಮತ್ತು ಬೆಂಗಳೂರು ಸೇರಿದಂತೆ ಸುಮಾರು 80 ಜಿಲ್ಲೆಗಳು ಸ್ತಬ್ಧವಾಗಿವೆ. ಅಗತ್ಯ ಸೇವೆಗಳನ್ನು ಬಿಟ್ಟು ಉಳಿದೆಲ್ಲವನ್ನು ನಿರ್ಬಂಧಿಸಲಾಗಿದೆ. ರೈಲ್ವೆ, ಮೆಟ್ರೋ ಮತ್ತು ಅಂತಾರಾಜ್ಯ ಬಸ್​ ಸೇವೆಗಳು ಕೂಡ ರದ್ದಾಗಿವೆ. ಪಂಜಾಬ್​, ರಾಜಸ್ಥಾನ, ಪಶ್ಚಿಮ ಬಂಗಾಳ ಮತ್ತು ಹರಿಯಾಣದಲ್ಲಿ ಸಾರ್ವಜನಿಕ ಸಾರಿಗೆಯನ್ನು ನಿಲ್ಲಿಸಲಾಗಿದೆ.

    ದೇಶದಲ್ಲಿ ಈವರೆಗೆ 400ಕ್ಕೂ ಅಧಿಕ ಮಂದಿಗೆ ಕರೊನಾ ಸೋಂಕು ತಗುಲಿದ್ದು, ಓರ್ವ ಇಟಲಿ ಪ್ರಜೆ ಸೇರಿ ಒಟ್ಟು 8 ಮಂದಿ ಬಲಿಯಾಗಿದ್ದಾರೆ. (ಏಜೆನ್ಸೀಸ್​)

    ಚೀನಾ ಸರ್ಕಾರದ ಮಾಹಿತಿಯಲ್ಲಿದೆ ಕರೊನಾ ಸೋಂಕು ಕುರಿತಾದ ಬೆಚ್ಚಿಬೀಳಿಸೋ ಅಂಶ: ಎಚ್ಚರ ತಪ್ಪಿದರೆ ಅನಾಹುತ ಖಂಡಿತ

    ಯಾಕಿಂತಹ ಅವೈಜ್ಞಾನಿಕ ಸಿದ್ಧಾಂತಗಳನ್ನು ಹೇಳುತ್ತೀರಿ… ಜನರಿಗೆ ತಪ್ಪು ಮಾಹಿತಿ ನೀಡಬೇಡಿ…; ನಟ ಸುದೀಪ್​ಗೆ ಚೇತನ್​ಕುಮಾರ್​ ಬುದ್ಧಿಮಾತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts