More

    ರಸ್ತೆ ಮೇಲೆ ತುಂಡಾಗಿ ಬಿದ್ದ ವಿದ್ಯುತ್ ತಂತಿ

    ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಸೀಗೆಕೊರೆ ಕಾವಲು ಗ್ರಾಮದ ಬಳಿ ಶುಕ್ರವಾರ ವಿದ್ಯುತ್ ತಂತಿ ಬಿದ್ದು ಸ್ಥಳದಲ್ಲಿದ್ದವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.


    ಬೆಕ್ಕರೆ ಗ್ರಾಮದಿಂದ ಈಚೂರು ಗ್ರಾಮಕ್ಕೆ ತೆರಳುವ ಮಾರ್ಗಮಧ್ಯೆ ಸೀಗೆಕೊರೆ ಕಾವಲು ಗ್ರಾಮದ ರಸ್ತೆಯಲ್ಲಿ ಹಾದು ಹೋಗಿದ್ದ ವಿದ್ಯುತ್ ತಂತಿ ತುಂಡಾಗಿ ಬಿದಿದ್ದೆ. ಇದೇ ವೇಳೆ ಟ್ರ್ಯಾಕ್ಟರ್ ಮೂಲಕ ಬರುತ್ತಿದ್ದ ಸ್ಥಳೀಯ ನಿವಾಸಿ ಭುಜಂಗರಾಧ್ಯ ತಕ್ಷಣ ಸೆಸ್ಕ್‌ಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಅಧಿಕಾರಿಗಳು ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ. ಮೈಸೂರಿಗೆ ಕಾರಿನಲ್ಲಿ ತೆರಳುತ್ತಿದ್ದ ಕುಟುಂಬವೊಂದು ಪ್ರಾಣಾಪಾಯದಿಂದ ಪಾರಾಗಿದೆ. ಸ್ಥಳಕ್ಕೆ ಸೀಗೂರು ವಿಭಾಗದ ಜೆಇ ರವಿ, ಪವರ್‌ಮೆನ್‌ಗಳಾದ ದರ್ಶನ್, ಕುಬೇರ, ಟಿ.ಮಂಜು ಆಗಮಿಸಿ ತುಂಡಾದ ವಿದ್ಯುತ್ ತಂತಿ ಬದಲಾಯಿಸಿದರು.


    ಸ್ಥಳೀಯ ನಿವಾಸಿಗಳಾದ ರಾಮೇಗೌಡ, ಅಯ್ಯಣ್ಣ, ಮಲ್ಲಿಕಾ, ನಾರಾಯಣಶೆಟ್ಟಿ, ಸಂತೋಷ್, ಹೇಮಂತ್, ತಮ್ಮೇಗೌಡ ಸೇರಿದಂತೆ ಹಲವರು ಮಾತನಾಡಿ, ಈ ಭಾಗದಲ್ಲಿ ವಿದ್ಯುತ್ ತಂತಿ ತುಂಡಾಗಿ ಬೀಳುವ ಸಮಸ್ಯೆ ಹೆಚ್ಚಾಗಿದೆ. ಕೂಡಲೇ ಈ ಮಾರ್ಗದ ಹಳೆಯ ವಿದ್ಯುತ್ ತಂತಿಗಳನ್ನು ಬದಲಾಯಿಸಬೇಕು ಎಂದು ಮನವಿ ಮಾಡಿದರು. ಈ ಮಾರ್ಗಕ್ಕೆ ಹೊಸ ಸಂಪರ್ಕ ನೀಡಲು ಅನುಮೋದನೆ ದೊರೆತಿದ್ದು ಗುತ್ತಿಗೆದಾರ ಶೀಘ್ರ ಕಾಮಗಾರಿ ಆರಂಭಿಸಲಿದ್ದಾರೆ ಎಂದು ಬೆಟ್ಟದಪುರ ಉಪವಿಭಾಗದ ಎಇಇ ಪ್ರಶಾಂತ್ ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts