Remuneration : ಜಾಗತಿಕ ತಾರೆ ಪ್ರಿಯಾಂಕಾ ಚೋಪ್ರಾ ಇದೀಗ ಆರು ವರ್ಷಗಳ ಬಳಿಕ ಬಾಲಿವುಡ್ಗೆ ಮರಳುತ್ತಿದ್ದು. ಕ್ರಿಶ್ 4 ಚಿತ್ರದಲ್ಲಿ ನಟಿಸುವುದಕ್ಕೆ ಬರೊಬ್ಬರಿ 30 ಕೋಟಿ ರೂ. ಸಂಭಾವನೆ ಪಡೆದುಕೊಳ್ಳಲಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ:ಮಂಗಳೂರು ರೈಲ್ವೆ ಪ್ರದೇಶ ಒಂದೇ ವಿಭಾಗದ ವ್ಯಾಪ್ತಿಗೆ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಭರವಸೆ
ಬಾಲಿವುಡ್ನಿಂದ ಹಾಲಿವುಡ್ಗೆ ಕಾಲಿಟ್ಟ ಪ್ರಿಯಾಂಕಾಗೆ ಜಾಗತಿಕವಾಗಿ ದೊಡ್ಡ ಮಟ್ಟದಲ್ಲಿ ಕ್ರೇಜ್ ಇದೆ. ಅವರ ವ್ಯಾಪ್ತಿ ಕೂಡ ಅಸಾಧಾರಣ ಮಟ್ಟಕ್ಕೆ ಬೆಳದಿದೆ. ಹೀಗಾಗಿ ದೊಡ್ಡ ಮಟ್ಟದ ಸಂಭಾವನೆ ನೀಡಲಾಗಿದೆ. ಇದು ಈ ಚಿತ್ರಕ್ಕೆಮ ಮಾತ್ರವಲ್ಲ. ಸೌತ್ನ ಸ್ಟಾರ್ ಡೈರಕ್ಟರ್ ಎಸ್.ಎಸ್.ರಾಜಮೌಳಿ ನಿರ್ದೇಶನದ ಮಹೇಶ್ಬಾಬು ನಟನೆಯ SSMB29 ಚಿತ್ರದಲ್ಲಿ 30 ಕೋಟಿ ರೂ.ಗೆ ಸಹಿ ಮಾಡಿದ್ದು, ಇದೀಗ ಹೃತಿಕ್ ರೋಷನ್ ನಟನೆಯ ಕ್ರಿಶ್ 4 ಚಿತ್ರಕ್ಕೂ ಇದೇ ಸಂಭಾವನೆ ಕೇಳಿದ್ದಾರಂತೆ ಎಂದು ವರದಿ ಉಲ್ಲೇಖಿಸಿವೆ.
ಕರೀನಾ ಕಪೂರ್, ಕತ್ರಿನಾ ಕೈಫ್, ಕಿಯಾರಾ ಅಡ್ವಾಣಿ, ನಯನತಾರಾ ಮತ್ತು ಸಮಂತಾ ರುತ್ ಪ್ರಭು ಅವರಂತಹ ನಟರು ಪ್ರತಿ ಚಿತ್ರಕ್ಕೆ 15 ಕೋಟಿ ರೂ. ಪ್ರತಿ ಪ್ರಾಜೆಕ್ಟಿಗೂ 10 ಕೋಟಿ ಅಥವಾ ಅದಕ್ಕಿಂತ ಹೆಚ್ಚು ಸಂಭಾವನೆ ಪಡೆದಿದ್ದಾರೆ.ಆದರೆ, ಪ್ರಿಯಾಂಕ ಚೋಪ್ರಾ 30 ಕೋಟಿ ರೂ. ಸಂಭಾವನೆ ಪಡೆಯುವ ಮೂಲಕ ಭಾರತ ಚಿತ್ರರಂಗದಲ್ಲಿ ಅತ್ಯಧಿಕ ಅತಿದೊಡ್ಡ ಸಂಭಾವನೆ ಪಡೆದ ಮೊದಲ ನಟಿ ಎಂದು ಹೇಳಲಾಗಿದೆ.
ಇದನ್ನೂ ಓದಿ:ಮಂಗಳೂರು ರೈಲ್ವೆ ಪ್ರದೇಶ ಒಂದೇ ವಿಭಾಗದ ವ್ಯಾಪ್ತಿಗೆ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಭರವಸೆ
ಕ್ರಿಶ್ 4 ಚಿತ್ರ ನಿರ್ಮಾಣವು 2026ರ ಆರಂಭದಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ. ಚಿತ್ರಕಥೆಯನ್ನು ಹೆಣೆಯಲು ಹಾಗೂ ಸಂಕೀರ್ಣ ದೃಶ್ಯ ಸನ್ನಿವೇಶಗಳನ್ನು ಯೋಜಿಸಲು ಮತ್ತು ಪೂರ್ಣ ಪಾತ್ರವರ್ಗವನ್ನು ಆಯ್ಕೆ ಮಾಡಲು ತಂಡವು ಸಮಯ ತೆಗೆದುಕೊಳ್ಳುತ್ತಿದೆ ಎಂದು ವರದಿಯಾಗಿದೆ.
ಇನ್ನು ಈ ಚಿತ್ರದಲ್ಲಿ ಹೃತಿಕ್ ರೋಷನ್ ನಾಯಕತ್ವದಲ್ಲಿ ಮತ್ತು ಪ್ರಿಯಾಂಕಾ ಪ್ರಮುಖ ಪಾತ್ರದಲ್ಲಿ ಮರಳಿರುವುದರಿಂದ ಸಿನಿರಸಿಕರಲ್ಲಿ ನಿರೀಕ್ಷೆಗಳು ಗಗನಕ್ಕೇರಿವೆ.(ಏಜೆನ್ಸೀಸ್)
ರೀಲ್ಸ್ ಮಾಡಿದ್ದೇ ಕಂಟಕವಾಯ್ತಾ! ವಿನಯ್ ಗೌಡ, ರಜತ್ ಇಬ್ಬರ ಸ್ನೇಹದ ಮಧ್ಯೆ ಬಿರುಕು | Vinay rajath
ಬ್ರಿಟಿಷ್ ಸರ್ಕಾರ & ಕಿಂಗ್ ಚಾರ್ಲ್ಸ್ ‘ಕೇಸರಿ 2’ ನೋಡಲೇಬೇಕು; ಅಕ್ಷಯ್ ಕುಮಾರ್ ಹೀಗೇಳಿದ್ದೇಕೆ? | Akshay Kumar