More

    ಈ ಹಿಂದೆ ಜೋಡಿಯಾಗಿ ನಟಿಸಿದ್ದ ಪ್ರಿಯಾಮಣಿ ಈಗ ಜೂನಿಯರ್​ ಎನ್‌ಟಿಆರ್‌ ತಾಯಿ ಪಾತ್ರ ಮಾಡ್ತಾರಾ?

    ಬೆಂಗಳೂರು: ಸ್ಟಾರ್ ಹೀರೋಯಿನ್ ಆಗಿ ಗುರುತಿಸಿಕೊಂಡಿರುವ ಪ್ರಿಯಾಮಣಿ, ವೈಯಕ್ತಿಕ ಜೀವನದಲ್ಲಿ ಮಾತ್ರವಲ್ಲದೆ ಸಿನಿಮಾಗಳಲ್ಲಿಯೂ ವದಂತಿಗಳು ಬರುತ್ತಲೇ ಇರುತ್ತವೆ. ನಾಯಕನ ತಾಯಿಯಾಗಿ ಪ್ರಿಯಾಮಣಿ ನಟಿಸಲಿದ್ದಾರೆ ಎಂಬ ಗುಸುಗುಸು ಕೇಳಿಬರು ಬಂದಿದ್ದು, ಅಭಿಮಾನಿಗಳನ್ನು ಬೆಚ್ಚಿ ಬೀಳಿಸಿದೆ.

    ಒಂದು ಕಾಲದಲ್ಲಿ ಸತತ ಚಿತ್ರಗಳನ್ನು ಮಾಡಿ ನಾಯಕಿ ಪ್ರಿಯಾಮಣಿ ಒಳ್ಳೆಯ ಹೆಸರು ಗಳಿಸಿದ್ದರು. ಯಂಗ್ ಟೈಗರ್ ಎನ್ ಟಿಆರ್ ಅಭಿನಯದ ಯಮದೊಂಗ ಸಿನಿಮಾದಲ್ಲಿ ಜೋಡಿಯಾಗಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಒಳ್ಳೆಯ ಹೆಸರನ್ನು ಮಾಡಿತ್ತು. ಅದರೆ ಇದೀಗ  ಜೂನಿಯರ್​ ಎನ್‌ಟಿಆರ್‌ ತಾಯಿಯಾಗಿ ಪ್ರಿಯಾಮಣಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ದೇವರ ಚಿತ್ರದಲ್ಲಿ ಎನ್‌ಟಿಆರ್​​ಗೆ  ತಾಯಿಯಾಗಿ ಪ್ರಿಯಾಮಣಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

    ಎನ್‌ಟಿಆರ್-ಕೊರಟಾಲ ಶಿವ ಕಾಂಬಿನೇಷನ್‌ನ ಪ್ಯಾನ್ ಇಂಡಿಯಾ ಸಿನಿಮಾ ‘ದೇವರ’ ತಯಾರಾಗುತ್ತಿರುವುದು ಗೊತ್ತೇ ಇದೆ. ಇದರಲ್ಲಿ ಯಂಗ್ ಟೈಗರ್ ಎನ್ ಟಿಆರ್ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಈಗಾಗಲೇ ಬಂದಿದೆ. ನಿರ್ಮಾಪಕರು ಕೂಡ ಅದನ್ನು ನಿರಾಕರಿಸಲಿಲ್ಲ. ಬಹುತೇಕ ಅಭಿಮಾನಿಗಳು ಕೂಡ ಇದೇ ಸತ್ಯ ಎಂದು ಫಿಕ್ಸ್ ಆಗಿದ್ದಾರೆ.

    ಜ್ಯೂನಿಯರ್​ ಎನ್ ಟಿಆರ್ ತಾಯಿ ಪಾತ್ರದಲ್ಲಿ ಪ್ರಿಯಾಮಣಿ ನಟಿಸುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಇದರಿಂದ ಅವರ ಅಭಿಮಾನಿಗಳೂ ಅಚ್ಚರಿಗೊಂಡಿದ್ದಾರೆ. ಈ ಹಿಂದೆ ಜೋಡಿಯಾಗಿ ನಟಿಸಿದ್ದ ಈ ಜೋಡಿ ಈಗ ‘ದೇವರ’ ಚಿತ್ರದಲ್ಲಿ ತಾಯಿ–ಮಗನಾಗಿ ನಟಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿರುವಂತೆಯೇ ಇದು ನಿಜವೇ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಸಿನಿಮಾ ತಂಡದಿಂದ ಇನ್ನೂ ಯಾವುದೇ ಅಧಿಕೃತ ಬಂದಿಲ್ಲ. ಪ್ರಿಯಾಮಣಿ ಅಥವಾ ಸಿನಿಮಾ ತಂಡವೇ ಈ ಕುರಿತಾಗಿ ಅಧಿಕೃತವಾದ ಮಾಹಿತಿ ನೀಡಬೇಕಾಗಿದೆ.

    ಈ ಹಿಂದೆಯೂ ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ-2’ ಚಿತ್ರದಲ್ಲಿ ಪ್ರಿಯಾಮಣಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ ಇದು ಸುಳ್ಳು ಸುದ್ದಿ, ಆದರೆ ಬನ್ನಿ ಜತೆ ಸಿನಿಮಾ ಮಾಡುವ ಅವಕಾಶ ಸಿಕ್ಕರೆ ಖಂಡಿತ ಮಾಡುತ್ತೇನೆ ಎಂದು ನಟಿ ಹೇಳಿದ್ದರು.  ಪ್ರಿಯಾಮಣಿ ತೆಲುಗು ಮಾತ್ರವಲ್ಲದೆ ತಮಿಳು ಮತ್ತು ಕನ್ನಡ ಭಾಷೆಯಲ್ಲೂ ಸಿನಿಮಾ ಮಾಡಿದ್ದಾರೆ.

    ರಾಖಿ ಸಾವಂತ್​ ಬಯೋಪಿಕ್​ ನಿರ್ದೇಶನ ಮಾಡ್ತಾರಾ ರಿಷಬ್​ ಶೆಟ್ಟಿ?

    ರಾಜ್ಯೋತ್ಸವ ರಸಪ್ರಶ್ನೆ - 21

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts