ಜನ ನಾವು ಹೇಗಿದ್ರೂ ಮಾತನಾಡ್ತಾರೆ; ಬಾಡಿ ಶೇಮಿಂಗ್ ಬಗ್ಗೆ ಪ್ರಿಯಾಮಣಿ ಹೇಳಿದ್ದಿಷ್ಟು!

priyamani-new-photoshoot
Published on

ಬೆಂಗಳೂರು: ಸಿನಿಮಾ ಕಲಾವಿದರಿಗೆ ಬಾಡಿ ಶೇಮಿಂಗ್‌ನಂಥಹ ಕಹಿಘಟನೆಗಳು ಆಗಾಗ ಘಟಿಸುತ್ತಿರುತ್ತವೆ. ಅವುಗಳನ್ನು ಸ್ವತಃ ನಟ, ನಟಿಯರು ಬೇಸರದಿಂದ ಬಿಚ್ಚಿಟ್ಟಿದ್ದ್ದೂ ಉಂಟು. ಅಂಥ ಕಹಿ ಅನುಭವವನ್ನು ಇದೀಗ ನಟಿ ಪ್ರಿಯಾಮಣಿ ಹೇಳಿಕೊಂಡಿದ್ದಾರೆ.

‘ಈ ಮೊದಲು ದೇಹದ ತೂಕ 65 ಕೆಜಿ ಆದಾಗ ಸಾಕಷ್ಟು ಜನ ‘ಏನು ಇಷ್ಟೊಂದು ದಪ್ಪಗಾಗಿದ್ದೀರಿ’ ಎನ್ನುತ್ತಿದ್ದರು. ಇದೀಗ ಮತ್ತೆ ಸಣ್ಣಗಾಗಿದ್ದೇನೆ. ಈಗಲೂ ಟೀಕೆ ಮಾಡುವುದನ್ನು ಬಿಡುತ್ತಿಲ್ಲ. ‘ದಪ್ಪ ಇದ್ದಾಗಲೇ ಚೆನ್ನಾಗಿ ಕಾಣುತ್ತಿದ್ರಿ’ ಎನ್ನುತ್ತಾರೆ. ಒಟ್ಟಿನಲ್ಲಿ ಜನ ಒಂದಲ್ಲ ಒಂದು ಕಾರಣಕ್ಕೆ ಏನಾದರೂ ಮಾತನಾಡುತ್ತಲೇ ಇರುತ್ತಾರೆ’ ಎಂದು ಹೇಳಿಕೊಂಡಿರುವ ಪ್ರಿಯಾಮಣಿ, ಬಣ್ಣದ ವಿಚಾರವಾಗಿಯೂ ಟೀಕೆಗೆ ಒಳಗಾಗಿದ್ದಾರೆ.

‘ನಿಮ್ಮ ಮುಖ ಬೆಳ್ಳಗಿದೆ. ಕಾಲು ಮಾತ್ರ ಕಪ್ಪು ಎಂದು ಹೇಳಿದವರಿಗೆ ಅಲ್ಲಿಯೇ ಉತ್ತರ ಕೊಟ್ಟಿದ್ದೇನೆ. ನನ್ನ ಬಣ್ಣ ಯಾವುದಾದರೆ ನಿಮಗೇನು ಸಮಸ್ಯೆ? ಯಾವುದೇ ಕಾರಣಕ್ಕೆ ಕಪ್ಪು ಎಂದು ಯಾರನ್ನೂ ಕರೆಯಬೇಡಿ. ಚರ್ಮ ಕಪ್ಪಾಗಿದ್ದರೆ ತಪ್ಪೇನಿದೆ? ಶ್ರೀಕೃಷ್ಣನ ಬಣ್ಣವೂ ಅದೇ. ಕಪ್ಪು ಸುಂದರತೆಯ ಪ್ರತೀಕ. ನಿಮ್ಮ ಇಂಥ ಕಮೆಂಟ್‌ಗಳು ಎಷ್ಟರ ಮಟ್ಟಿಗೆ ಪರಿಣಾಮ ಬೀರುತ್ತದೆ ಎಂಬುದನ್ನು ಇನ್ನೊಬ್ಬರನ್ನು ಟೀಕಿಸುವ ಮುನ್ನ ಅರಿತು ಮಾತನಾಡಿ’ ಎಂದು ಹೇಳಿದ್ದಾರೆ. ಮೇಕಪ್ ಇಲ್ಲದ ಫೋಟೋಗಳಿಗೆ ಆಂಟಿ ಎಂಬಂಥ ಕಮೆಂಟ್‌ಗಳನ್ನೂ ಸೋಷಿಯಲ್ ಮೀಡಿಯಾದಲ್ಲಿ ಪ್ರಿಯಾಮಣಿ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net