ಮುಂಬೈ: ನಟಿ ಪ್ರಿಯಾಮಣಿ ( priyamani ) ಕನ್ನಡ, ತೆಲುಗು ಮತ್ತು ತಮಿಳು ಮತ್ತು ಹಿಂದಿಯಲ್ಲಿ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ಇತ್ತೀಚಿಗೆ ಸಂದರ್ಶನವೊಂದರಲ್ಲಿ ಕುತೂಹಲಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ.
2016ರಲ್ಲಿ ನಿಶ್ಚಿತಾರ್ಥವಾದಾಗಿನಿಂದ ಸಾಕಷ್ಟು ಟೀಕೆಗಳು ಎದುರಾಗುತ್ತಿದ್ದವು. ಹಿರಿಯರ ಅಭಿಪ್ರಾಯ, ಒಪ್ಪಿಗೆ ಪಡೆದು ಮದುವೆಯಾದೆ. ಮುಸ್ತಫರಾಜ್ ಜೊತೆಗಿನ ಮದುವೆಯ ನಂತರ ನಾನು ಸಾಕಷ್ಟು ಟೀಕೆಗಳನ್ನು ಎದುರಿಸಿದ್ದೇನೆ ಎಂದಿದ್ದಾರೆ.
ಬೇರೆ ಧರ್ಮದ ವ್ಯಕ್ತಿಯನ್ನು ಮದುವೆಯಾಗಿದ್ದಕ್ಕೆ ಅನೇಕರು ತನ್ನನ್ನು ಟ್ರೋಲ್ ಮಾಡಿದರು ಮತ್ತು ಟೀಕಿಸಿದರು. ಕೆಲವೊಮ್ಮೆ ಅವರ ಮಾತಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುವುದಿಲ್ಲ. ಆದರೆ ಅವರ ಮಾತುಗಳು ನನ್ನನ್ನು ನೋಯಿಸುತ್ತವೆ ಎಂದು ಹೇಳಿ ನಟಿ ಬೇಸರ ವ್ಯಕ್ತಪಡಿಸಿದ್ದಾರೆ.
ಜಾತಿ, ಧರ್ಮವನ್ನು ಲೆಕ್ಕಿಸದೆ ಹಲವು ತಾರೆಯರು ಮದುವೆಯಾದರು, ಆದರೆ ಈ ಮದುವೆ ವಿಚಾರದಲ್ಲಿ ಟ್ರೋಲ್ ಆಗಿದ್ದೇ ಹೆಚ್ಚು. ಎರಡು ಮನಸ್ಸುಗಳು ಭೇಟಿಯಾದ ನಂತರ ಪ್ರೀತಿಗೆ ಆರ್ಥಿಕ ಸ್ಥಿರತೆ, ಪ್ರದೇಶ, ಭಾಷೆಯಂತಹ ಅಡ್ಡಿ ಆಗುವುದಿಲ್ಲ ಎಂದು ತಮ್ಮ ಮದುವೆ ಕುರಿತಾಗಿ ಮಾತನಾಡಿದ್ದಾರೆ.