ಪ್ರಿಯದರ್ಶಿನಿ ಸೊಸೈಟಿ ಶೇ.8ಡಿವಿಡೆಂಡ್ : ಎಚ್.ವಸಂತ್ ಬೆರ್ನಾಡ್ ಮಾಹಿತಿ : ಸಾಧಕರಿಗೆ ಗೌರವಾರ್ಪಣೆ

New Project (18)
Published on

ಹಳೆಯಂಗಡಿ: ಸಂಘದ ಅಭಿವೃದ್ಧಿಗೆ ಗ್ರಾಹಕರು, ನಿರ್ದೇಶಕರ ಮತ್ತು ಸಿಬ್ಬಂದಿಗಳ ಸಹಕಾರ ಕಾರಣವಾಗಿದ್ದು, ಲಾಭದಲ್ಲಿ ಶೇ.8ರ ಡಿವಿಡೆಂಡ್ ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ಶಾಖೆ ಅಭಿವೃದ್ಧಿಗೆ ಮತ್ತಷ್ಟು ಸಹಕಾರ ಅಗತ್ಯ ಎಂದು ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಎಚ್.ವಸಂತ್ ಬೆರ್ನಾಡ್ ಹೇಳಿದರು.

ಹಳೆಯಂಗಡಿಯಲ್ಲಿ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ 2024-25ನೇ ಸಾಲಿನ ಸರ್ವ ಸದಸ್ಯರ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

2024-25ನೇ ಸಾಲಿನ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ರಾಜ್ಯ ಹಿಂದುಳಿದ ಆಯೋಗದ ಸದಸ್ಯರಾಗಿ ನೇಮಕಗೊಂಡಿರುವ ಪ್ರತಿಭಾ ಕುಳಾಯಿ, ಅಂತಾರಾಷ್ಟ್ರೀಯ ಅಥ್ಲೆಟಿಕ್ ಚಾಂಪಿಯನ್‌ಷಿಪ್ ಪ್ರಶಸ್ತಿ ಪಡೆದ ಸುಷ್ಮಾ ತಾರಾನಾಥ್, ಗೌರವ ಡಾಕ್ಟರೇಟ್ ಪದವಿ ಪಡೆದ ಡಾ.ಶೃತಿ ಅವರನ್ನು ಗೌರವಿಸಲಾಯಿತು. ಸೊಸೈಟಿ ಸಾಧನೆಗೆ ಕಾರಣಕರ್ತರಾದ ಮಹಿಳಾ ಸ್ವಸಹಾಯ ಗುಂಪುಗಳನ್ನು ಅಭಿನಂದಿಸಲಾಯಿತು. ಸಂಘದ ಸದಸ್ಯರಿಗೆ ಶೇ.8ಡಿವಿಡೆಂಡ್ ವಿತರಿಸಲಾಯಿತು.

ಸಂಸ್ಥೆ ಉಪಾಧ್ಯಕ್ಷೆ ಪ್ರತಿಭಾ ಕುಳಾಯಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಪಂಜ, ನಿರ್ದೇಶಕರಾದ ಡಾ.ಗಣೇಶ್ ಅಮೀನ್ ಸಂಕಮಾರ್, ಧನಂಜಯ ಮಟ್ಟು, ಗೌತಮ್ ಜೈನ್, ಶರತ್ ಶೆಟ್ಟಿ ಪಂಚವಟಿ, ಉಮಾನಾಥ್ ಜೆ.ಶೆಟ್ಟಿಗಾರ್, ಜೈ ಕೃಷ್ಣ ಕೋಟ್ಯಾನ್, ಗಣೇಶ್ ಪ್ರಸಾದ್ ದೇವಾಡಿಗ, ಧನರಾಜ್ ಕೋಟ್ಯಾನ್, ಮಿರ್ಜಾ ಅಹ್ಮದ್, ಶೆರಿಲ್ ಆಯೋನ ಐಮನ್, ಹರೀಶ್ ಎನ್. ಪುತ್ರನ್, ನವೀನ್ ಸಾಲ್ಯಾನ್ ಪಂಜ, ಸಂದೀಪ್, ವಿಜಯಕುಮಾರ್ ಸನಿಲ್, ತನುಜಾ ಶೆಟ್ಟಿ ಉಪಸ್ಥಿತರಿದ್ದರು.

ಕಿನ್ನಿಗೋಳಿ ಶಾಖಾ ಪ್ರಬಂಧಕರಾದ ಮೋಹನ್ ದಾಸ್ ಮತ್ತು ಹಳೆಯಂಗಡಿ ಪ್ರಜ್ಞಶ್ರೀ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಗೌರವ ಹಾಗೂ ಮೂಡುಬಿದಿರೆ ಶಾಖಾ ಪ್ರಬಂಧಕರಾದ ಅಬಿಷ್ಟ ಜೈನ್ ಸಾಧನೆಗೈದ ಸದಸ್ಯರಿಗೆ ಅಭಿನಂದನೆ, ಪಡುಬಿದ್ರೆ ಶಾಖಾ ಪ್ರಬಂಧಕರಾದ ಅಂಜಲಿ ಉಳ್ಳಾಲ್ ಎಸ್.ಉತ್ತಮ ಸ್ವಸಹಾಯ ಗುಂಪುಗಳ ಗೌರವ ಕಾರ್ಯಕ್ರಮ ನಡೆಸಿಕೊಟ್ಟರು.

ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಸ್ವಾಗತಿಸಿ. ಸಾಲ ವಿಭಾಗದ ಪ್ರಬಂಧಕ ಅಕ್ಷತಾ ಶೆಟ್ಟಿ ನಿರೂಪಿಸಿ, ಲೆಕ್ಕಿಗರಾದ ಲೋಲಾಕ್ಷಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net