PHOTOS| ಮಾದಕ ಫೋಟೋಗಳನ್ನು ಹರಿಬಿಟ್ಟು ಪಡ್ಡೆ ಹುಡುಗರ ನಿದ್ದೆಗೆಡಿಸಿದ ಕಣ್ಸನ್ನೆ ಬೆಡಗಿ!

123633713_187757926257940_7336288914279361524_n
Published on

ನವದೆಹಲಿ: ಕೇವಲ ಕಣ್ಸನ್ನೆಯಿಂದಲೇ ರಾತ್ರೋರಾತ್ರಿ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿ ಅಪಾರ ಅಭಿಮಾನಿ ಬಳಗವನ್ನೇ ತನ್ನತ್ತ ಸೆಳೆದಿರುವ ಕಣ್ಸನ್ನೆ ಬೆಡಗಿ ಪ್ರಿಯಾ ಪ್ರಕಾಶ್​ ವಾರಿಯರ್​ ಜಾಲತಾಣದಲ್ಲಿ ಸದಾ ಸಕ್ರೀಯರಾಗಿರುತ್ತಾರೆ. ಆಗಾಗ ತಮ್ಮ ಮಾದಕ ಫೋಟೋಗಳನ್ನು ಹರಿಬಿಟ್ಟು ಪಡ್ಡೆ ಹುಡುಗರ ನಿದ್ದೆಗೆಡಿಸುವ ಪ್ರಿಯಾ ಇದೀಗ ಮತ್ತೊಮ್ಮೆ ತಮ್ಮ ಸೆಕ್ಸಿ ಲುಕ್​ ಅನಾವರಣ ಮಾಡಿದ್ದಾರೆ.

ಎದೆ ಸೀಳು ಕಾಣುವಂತೆ ಓವರ್​ ಶೋಲ್ಡರ್ ಸಿಲ್ವರ್​ ಗೌನ್​ ಧರಿಸಿ ಕ್ಯಾಮೆರಾಗೆ ಫೋಸ್​ ನೀಡಿರುವ ಫೋಟೋಗಳನ್ನು ಇನ್​ಸ್ಟಾಗ್ರಾಂನಲ್ಲಿ ಹರಿಬಿಟ್ಟಿರುವ ಪ್ರಿಯಾ, ಹುಡುಗರ ಹೃದಯಕ್ಕೆ ಕಿಚ್ಚು ಹಚ್ಚಿದ್ದಾರೆ. ಫೋಟೋಗಳು ಸಿಕ್ಕಾಪಟ್ಟೆ ವೈರಲ್​​ ಆಗಿದ್ದು, 3 ಲಕ್ಷಕ್ಕೂ ಅಧಿಕ ಲೈಕ್ಸ್​ಗಳು ಗಿಟ್ಟಿಸಿಕೊಂಡಿವೆ. ಪ್ರಿಯಾರ ಮಾದಕ ಫೋಟೋಗಳನ್ನು ನೋಡಿದ ಅಭಿಮಾನಿಗಳು ಅವರ ಸೌಂದರ್ಯವನ್ನು ಹೊಗಳಿ ಕಾಮೆಂಟ್​ಗಳ ಸುರಿಮಳೆಗೈಯುತ್ತಿದ್ದಾರೆ.

ಅಂದಹಾಗೆ ಪ್ರಿಯಾ ಅವರು ಇನ್​ಸ್ಟಾಗ್ರಾಂನಲ್ಲಿ ಬರೋಬ್ಬರಿ 7 ಮಿಲಿಯನ್ಸ್​ ಫಾಲೋವರ್ಸ್​ ಹೊಂದಿದ್ದು, ಘಟಾನುಘಟಿ ನಾಯಕರನ್ನೇ ಹಿಂದಿಕ್ಕಿದ್ದಾರೆ. ಹೀಗಿರುವಾಗ ಕರೊನಾ ಲಾಕ್​ಡೌನ್​ ಸಮಯದಲ್ಲಿ ಅಂದರೆ ಜೂನ್​ನಲ್ಲಿ ಇನ್​ಸ್ಟಾಗ್ರಾಂಗೆ ಗುಡ್​ಬೈ ಹೇಳುವ ಮೂಲಕ ಅಭಿಮಾನಿಗಳಿಗೆ ಶಾಕ್​ ನೀಡಿದ್ದರು. ಕೆಲ ದಿನಗಳ ಬಳಿಕ ಮತ್ತೆ ಜಾಲತಾಣಕ್ಕೆ ಪ್ರವೇಶ ಪಡೆದ ಪ್ರಿಯಾ, ಮಾನಸಿಕ ಆರೋಗ್ಯ ದೃಷ್ಟಿಯಿಂದ ಕೊಂಚ ವಿರಾಮ ಪಡೆದುಕೊಂಡಿದ್ದಾಗಿ ಹೇಳಿದ್ದರು.

ಇನ್ನು ಸಿನಿಮಾ ವಿಚಾರಕ್ಕೆ ಬಂದರೆ ಪ್ರಿಯಾ, ತೆಲುಗು ನಟ ನಿತಿನ್​ ಅಭಿನಯದ ಚೆಕ್​ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ರಾಕುಲ್​ ಪ್ರೀತ್​ ಸಿಂಗ್​ ಸಹ ಇರಲಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net