ಕುಂದಾಪುರ: ಕುಂದಾಪುರದ ಭಂಡಾರ್‌ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕೌಶಲ ಕೇಂದ್ರ ಆರಂಭಿಸಲು ಅನುಮತಿ ದೊರೆತಿದೆ. ಪ್ರಧಾನ ಮಂತ್ರಿ ಕೌಶಲ ಕೇಂದ್ರ ಸ್ಥಾಪನೆಗೆ ಅನುಮತಿ ದೊರೆತ ಕರ್ನಾಟಕದ ಮೂರು ಪ್ರಮುಖ ಕಾಲೇಜುಗಳಲ್ಲಿ ಕುಂದಾಪುರದ ಭಂಡಾರ್ಕಾಸ್ ಕಾಲೇಜು ಒಂದಾಗಿದೆ.
ಈ ಕೇಂದ್ರ ಭಾರತ ಸರ್ಕಾರದ ಸ್ಕಿಲ್ ಇಂಡಿಯಾ ಯೋಜನೆಯಡಿ, ದೇಶಾದ್ಯಾಂತ ಯುವ ಜನತೆಗಾಗಿ ಉಚಿತವಾಗಿ ಕೌಶಲ ತರಬೇತಿ ನೀಡಲಿದೆ. ಕೇಂದ್ರ ಸರ್ಕಾರದ ಮಹತ್ವದ ಯೋಜನೆ ಇದಾಗಿದ್ದು 300ಕ್ಕೂ ಹೆಚ್ಚು ಕೌಶಲ ಕೋರ್ಸ್‌ಗಳನ್ನು ಯುವಕರಿಗೆ ಲಭ್ಯವಾಗುವಂತೆ ಮಾಡುವ ಮೂಲಕ, ಉದ್ಯೋಗಕ್ಕೆ ಬೇಕಾದ ಕೌಶಲಗಳನ್ನು ನೀಡಲಾಗುತ್ತದೆ.
ಪಿಎಂಕೆವಿವೈ ಯೋಜನೆ ರಾಷ್ಟ್ರದ ಯುವಕರ ಕೌಶಲಾಭಿವೃದ್ಧಿಗೆ ಹತ್ತಿರದಲ್ಲಿರುವ ಅಗತ್ಯಗಳನ್ನು ಪೂರೈಸುವುದರೊಂದಿಗೆ ಅವರ ವ್ಯಾವಹಾರಿಕ ಕೌಶಲಗಳನ್ನು ಅಭಿವೃದ್ಧಿ ಪಡಿಸುವ ಮೂಲಕ ಉದ್ಯೋಗ ಕ್ಷೇತ್ರದಲ್ಲಿ ಅವರನ್ನು ಯಶಸ್ವಿಯಾಗಿ ಪೂರೈಸಲು ಸಹಾಯ ಮಾಡುತ್ತದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಪ್ರಧಾನ ಮಂತ್ರಿ ಕೌಶಲ ವಿಕಾಸ ಯೋಜನೆ ಸದುಪಯೋಗ ಪಡೆದುಕೊಳ್ಳುವಂತೆ ಕಾಲೇಜಿನ ಪ್ರಾಂಶುಪಾಲ ಡಾ.ಶುಭಕರ ಆಚಾರಿ ತಿಳಿಸಿದ್ದಾರೆ.