ಪ್ರಧಾನಿ ನರೇಂದ್ರ ಮೋದಿಯವರಿಂದ ಅಚ್ಚರಿಯ ನಿರ್ಧಾರ; ತೀವ್ರ ಕುತೂಹಲಕ್ಕೆ ಕಾರಣವಾಗಿದೆ ಅವರ ಈ ಒಂದು ಟ್ವೀಟ್​

PM modi
Published on

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಈಗ ಕೆಲವೇ ಕ್ಷಣಗಳ ಮೊದಲು ತಮ್ಮ ಟ್ವಿಟರ್​ ಅಕೌಂಟ್​ ಮೂಲಕ ಒಂದು ಪ್ರಮುಖ ಘೋಷಣೆ ಮಾಡಿದ್ದಾರೆ.

ನರೇಂದ್ರ ಮೋದಿ ಸಾಮಾಜಿಕ ಜಾಲತಾಣಗಳಲ್ಲಿ ತುಂಬ ಸಕ್ರಿಯರಾಗಿದ್ದಾರೆ. ಟ್ವಿಟರ್ ಖಾತೆಯೊಂದರಲ್ಲೇ 53.3 ಮಿಲಿಯನ್​ ಫಾಲೋವರ್ಸ್​ನ್ನು ಹೊಂದಿದ್ದಾರೆ. ಸಾಮಾನ್ಯರಿಗೂ ಪ್ರತಿಕ್ರಿಯಿಸುತ್ತಾರೆ. ತಾವು ಹೋದ ಜಾಗಗಳ ಅಪ್ಡೇಟ್​ನ್ನು ಸಾಮಾಜಿಕ ಜಾಲತಾಣಗಳ ಮೂಲಕ ದೇಶದ ಜನರಿಗೆ ಕೊಡುತ್ತಿರುತ್ತಾರೆ. ಒಟ್ಟಿನಲ್ಲಿ ಸೋಷಿಯಲ್​ ಮೀಡಿಯಾ ಮೂಲಕವೇ ದೇಶದ ಜನರನ್ನು ತಲುಪುತ್ತಿದ್ದರು.

ಆದರೆ ನರೇಂದ್ರ ಮೋದಿಯವರು ಬರುವ ಭಾನುವಾರ ತಮ್ಮ ಯಾವ ಸೋಷಿಯಲ್ ಮೀಡಿಯಾವನ್ನೂ ಬಳಸುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

ಮುಂದಿನ ಭಾನುವಾರ ನನ್ನ ಫೇಸ್​ಬುಕ್​, ಇನ್ಸ್ಟಾಗ್ರಾಂ, ಟ್ವಿಟರ್​, ಯೂಟ್ಯೂಬ್​ ಸೇರಿ ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಇರುವ ಅಕೌಂಟ್​ ಸ್ಥಗಿತಗೊಳ್ಳಲಿದೆ. ನನಗೆ ಗೊತ್ತು ನನ್ನ ಈ ನಿರ್ಧಾರದ ಪೋಸ್ಟ್​ ನೀವೆಲ್ಲರೂ ಹಲವು ಪೋಸ್ಟ್​ಗಳನ್ನು ಹಾಕುವಂತೆ ಮಾಡುತ್ತದೆ ಎಂದು ಟ್ವೀಟ್​ ಮಾಡಿದ್ದಾರೆ. ಆದರೂ ವಿಲ್​ ಕೀಪ್​ ಯು ಆಲ್​ ಪೋಸ್ಟೆಡ್​ ಎಂಬ ಕೊನೇ ವಾಕ್ಯದ ಅರ್ಥ ಏನಿರಬಹುದು ಎಂದು ನಿಖರವಾಗಿ ಹೇಳಲು ಸಾಧ್ಯವಾಗುತ್ತಿಲ್ಲ.

ಒಟ್ಟಿನಲ್ಲಿ ಈ ಟ್ವೀಟ್​ ಕುತೂಹಲ ಮೂಡಿಸಿದೆ. ಭಾನುವಾರ (ಮಾ.8) ಮಾತ್ರ ಪ್ರಧಾನಿ ಮೋದಿ ಸಾಮಾಜಿಕ ಜಾಲತಾಣದಿಂದ ದೂರ ಇರುತ್ತಾರಾ? ಅಥವಾ ಇನ್ನು ಮುಂದೆ ನರೇಂದ್ರ ಮೋದಿಯವರು ಸೋಷಿಯಲ್ ಮೀಡಿಯಾ ಬಳಕೆ ಮಾಡುವುದೇ ಇಲ್ಲವಾ ಎಂಬಂತಹ ಪ್ರಶ್ನೆಗಳು ಹುಟ್ಟಿವೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net