ಬೆಂಗಳೂರಿನಲ್ಲಿ ಉಡುಗೊರೆಯಾಗಿ ಸಿಕ್ಕಿದ್ದ ಪ್ಲಾಸ್ಟಿಕ್ ತ್ಯಾಜ್ಯದಿಂದ ತಯಾರಿಸಿದ ಹಾಫ್ ಕೋಟ್ ಧರಿಸಿ ಕಲಾಪದಲ್ಲಿ ಪಾಲ್ಗೊಂಡ ಮೋದಿ!

PM Modi
Published on

ಬೆಂಗಳೂರು: ನೆಲಮಂಗಲ ಹತ್ತಿರದ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಭಾರತ ಸರ್ಕಾರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಆಯೋಜಿಸಿದ್ದ ‘ಭಾರತ ಇಂಧನ ಸಪ್ತಾಹ-2023’ಕ್ಕೆ ಫೆಬ್ರುವರಿ 06ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು. ಈ ವೇಳೆ ನರೇಂದ್ರ ಮೋದಿಯವರಿಗೆ ಇಂಡಿಯನ್ ಆಯಿಲ್​ನ ಅಧ್ಯಕ್ಷ ತ್ಯಾಜ್ಯ ಪೆಟ್​ ಬಾಟಲಿಗಳಿಂದ ತಯಾರಿಸಿದ ಪೇಟ ಮತ್ತು ಹಾಫ್ ಕೋಟ್ ಉಡುಗೊರೆಯಾಗಿ ನೀಡಿದರು. 

ಇದೀಗ ಪ್ರಧಾನಿ ನರೇಂದ್ರ ಮೋದಿ ಪ್ಲಾಸ್ಟಿಕ್ ಬಾಟಲಿಗಳಿಂದ ಮರುಬಳಕೆ ಮಾಡಿದ ವಸ್ತುಗಳಿಂದ ತಯಾರಿಸಿದ ಹಾಫ್ ಕೋಟ್ ಧರಿಸಿ ಸಂಸತ್ತಿನ ಕಲಾಪದಲ್ಲಿ ಪಾಲ್ಗೊಂಡಿದ್ದಾರೆ.

ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ಲಾಸ್ಟಿಕ್ ತ್ಯಾಜ್ಯದಿಂದ ತಯಾರಿಸಲ್ಪಟ್ಟ ಹಾಫ್ ಕೋಟ್ ಉಡುಗೊರೆಯಾಗಿ ನೀಡಿರುವುದನ್ನು ಪ್ರಧಾನಿ ಧರಿಸಿ ಲೋಕಸಭೆಗೆ ಆಗಮಿಸುವ ಮೂಲಕ ಪರಿಸರಸ್ನೇಹಿ ಕ್ರಮಕ್ಕೆ ಉದಾಹರಣೆಯಾಗಿದ್ದಾರೆ ಎಂದು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net