

ಬೆಂಗಳೂರು: ಕೆ.ಪಿ ಅಗ್ರಹಾರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ಪ್ರಕರಣದ ಪ್ರಮುಖ ಆರೋಪಿತೆ ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಆರೋಪಿತೆ ಸರೋಜ ಮತ್ತು ಕುಟುಂಬಸ್ಥರು ಮಂಜುನಾಥ್ ಬಾಳಪ್ಪ ಎಂಬಾತನ ಮೇಲೆ ಕಲ್ಲು ಎತ್ತಿಹಾಕಿ ಕ್ರೂರವಾಗಿ ಹತ್ಯೆ ಮಾಡಿದ್ದರು.
ಕಳೆದ 4ನೇ ತಾರೀಕು ಮಂಜುನಾಥ್ ಎಂಬಾತನನ್ನ ಆರೋಪಿಗಳು ಕೊಲೆ ಮಾಡಿದ್ದರು. ಆಗ ಪ್ರಕರಣ ಸಂಬಂಧ ಆರು ಮಂದಿ ಆರೋಪಿಗಳನ್ಮು ಪೊಲೀಸರು ಬಂಧಿಸಿದ್ದರು. ಆಗ ಪ್ರೇಮವ್ವ, ಅಕ್ಕಮಹಾದೇವಿ, ಮಂಜುನಾಥ್, ಕಿರಣ್, ಚೆನ್ನಪ್ಪ ಹಾಗೂ ಕಾಶಿನಾಥ್ ನನ್ನು ಬಂಧಿಸಿದ್ದರು.
ಆದರೆ ಪ್ರಮುಖ ಆರೋಪಿತೆ ಸರೋಜ ತಲೆರೆಸಿಕೊಂಡಿದ್ದಳು. ಆಕೆಯೇ ಕೊಲೆ ಮಾಡಿದ್ದು ಎನ್ನಲು ಕೊಲೆ ಮಾಡೋ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಆರೋಪಿಗಳು ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದರು. ಮಾತನಾಡೋ ನೆಪದಲ್ಲಿ ಕರೆಸಿ ಕೊಲೆ ಮಾಡಿದ್ದರು.ಕೆ.ಪಿ ಅಗ್ರಹಾರ ಪೊಲೀಸರು ಸದ್ಯ ಆರೋಪಿತೆಯನ್ನ ಬಂಧಿಸಿ ವಿಚಾರಣೆ ಮಾಡುತ್ತಿದ್ದಾರೆ.