PHOTOS: ಬೆಂಗಳೂರಿನಲ್ಲಿ ಮಿನುಗಿದ ಏಕದಿನ ವಿಶ್ವಕಪ್​ ಟ್ರೋಫಿ; ಸಂಭ್ರಮಿಸಿದ ಕ್ರಿಕೆಟ್​ ಪ್ರೇಮಿಗಳು…

wc web
Published on

ಚಿತ್ರಗಳು: ರಾಘವೇಂದ್ರ ಸಿ.

ಬೆಂಗಳೂರು: ಮುಂಬರುವ ಏಕದಿನ ವಿಶ್ವಕಪ್​ ಟೂರ್ನಿಗೆ ಇನ್ನು ಸುಮಾರು ಒಂದು ತಿಂಗಳಷ್ಟೇ ಬಾಕಿ ಉಳಿದಿದ್ದು, ಕ್ರಿಕೆಟ್​ ಜ್ವರ ಏರಲಾರಂಭಿಸಿದೆ. ಭಾನುವಾರ ಬೆಂಗಳೂರಿನ ಪ್ರತ್ಯಕ್ಷಗೊಂಡ ವಿಶ್ವಕಪ್​ ಟೂರ್ನಿಯ ವಿಜೇತರಿಗೆ ನೀಡಲಾಗುವ ಮಿರುಗುವ ಚಿನ್ನದ ಟ್ರೋಫಿ, ಕ್ರಿಕೆಟ್​ ಪ್ರೇಮಿಗಳ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.

ಮಲ್ಲೇಶ್ವರದ ಮಂತ್ರಿ ಮಾಲ್​ನಲ್ಲಿ ವಿಶ್ವಕಪ್​ ಟ್ರೋಫಿಯನ್ನು ಭಾನುವಾರ ಪ್ರದರ್ಶನಕ್ಕೆ ಇಡಲಾಗಿತ್ತು. ಈ ವೇಳೆ ಕ್ರಿಕೆಟ್​ ಪ್ರೇಮಿಗಳು ಮತ್ತು ಚಿಣ್ಣರು ಟ್ರೋಫಿಯೊಂದಿಗೆ ಛಾಯಾಚಿತ್ರಗಳನ್ನು ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.

ಏಕದಿನ ವಿಶ್ವಕಪ್​ ಟೂರ್ನಿ ಭಾರತದಲ್ಲಿ ಅಕ್ಟೋಬರ್​ 5ರಿಂದ ನವೆಂಬರ್​ 17ರವರೆಗೆ ನಡೆಯಲಿದೆ. ಅಹಮದಾಬಾದ್​ನಲ್ಲಿ ಹಾಲಿ ಚಾಂಪಿಯನ್​ ಇಂಗ್ಲೆಂಡ್​ ಮತ್ತು ಹಾಲಿ ರನ್ನರ್​ ಅಪ್​ ನ್ಯೂಜಿಲೆಂಡ್​ ತಂಡಗಳ ನಡುವೆ ಉದ್ಘಾಟನಾ ಪಂದ್ಯ ನಡೆಯಲಿದೆ. ಅದಕ್ಕೆ ಹಿಂದಿನ ದಿನ ಅಂದರೆ ಅಕ್ಟೋಬರ್​ 4ರಂದು ಅಲ್ಲೇ ಉದ್ಘಾಟನಾ ಸಮಾರಂಭವೂ ಆಯೋಜನೆಗೊಂಡಿದೆ. ಬೆಂಗಳೂರು ಸಹಿತ ದೇಶದ 10 ತಾಣಗಳಲ್ಲಿ ವಿಶ್ವಕಪ್​ ಪಂದ್ಯಗಳು ನಡೆಯಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net