

ಉಳ್ಳಾಲ: ಗ್ರಾಮದ ವಿದ್ಯಾರ್ಥಿಗಳು ಶೈಕ್ಷಣಿಕ ಜೀವನದಲ್ಲಿ ಅತ್ಯಧಿಕ ಅಂಕ ಗಳಿಸಿ ಅಥವಾ ಇನ್ಯಾವುದೇ ರೀತಿಯಲ್ಲಿ ಸಾಧನೆ ಮಾಡಿದಾಗ ಅಂಥವರನ್ನು ಗೌರವಿಸಿ ಇತರರಿಗೆ ಪ್ರೇರಣೆ ನೀಡುವುದು ಪಂಚಾಯಿತಿ ಜವಾಬ್ದಾರಿ ಎಂದು ಪಜೀರ್ ಗ್ರಾಪಂ ಅಧ್ಯಕ್ಷ ಮೊಹಮ್ಮದ್ ರಫೀಕ್ ಹೇಳಿದರು.
ಪಜೀರ್ ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ಗ್ರಾಪಂನ ರಾಜೀವ ಗಾಂಧಿ ಸೇವಾ ಕೇಂದ್ರದ ಕಟ್ಟಡದಲ್ಲಿ ಗುರುವಾರ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ.80ಕ್ಕಿಂತ ಅಧಿಕ ಗಳಿಸಿದ ಗ್ರಾಮದ ವಿದ್ಯಾರ್ಥಿಗಳಿಗೆ ನಗದು ಸಹಿತ ಸನ್ಮಾನ ನಡೆಯಿತು. ಗ್ರಾಮದ ಸಂಘ ಸಂಸ್ಥೆಗಳಿಗೆ ಕ್ರೀಡೆಯಲ್ಲಿ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸಹಾಯಧನ ವಿತರಿಸಲಾಯಿತು.
ಶ್ರೀಕೃಷ್ಣ ಭಜನಾ ಮಂಡಳಿ ಅಧ್ಯಕ್ಷ ವಿಜೇತ್ ಪಜೀರ್, ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಭರತ್ರಾಜ್ ಶೆಟ್ಟಿ, ಮೇರಿ ಫರ್ನಾಂಡಿಸ್, ಸೀತಾರಾಮ ಶೆಟ್ಟಿ, ಇಮ್ತಿಯಾಝ್, ಸದಸ್ಯರಾದ ಸಫೀಕ್, ಸಿರಾಜ್, ಮಹಮ್ಮದ್, ಮೀನಾಕ್ಷಿ, ಸೆವ್ರರಿನ್ ಡಿಸೋಜ, ಶ್ರೀಕೃಷ್ಣ ಭಜನಾ ಮಂಡಳಿಯ ಅಧ್ಯಕ್ಷ ವಿಜೇತ್ ಪಜೀರ್, ರಹ್ಮಾನಿಯಾ ಪಜೀರ್ ಜುಮಾ ಮಸೀದಿಯ ಉಪಾಧ್ಯಕ್ಷ ಸಿ.ಎಚ್.ಮೊಯಿದ್ದೀನ್ ಕುಂಞಿ, ಸರ್ವೋದಯ ಯುವಕ ಮಂಡಲದ ಅಧ್ಯಕ್ಷ ಮನೋಜ್ ಸುದರ್ಶನ ನಗರ, ಅರ್ಕಾನ ಜುಮಾ ಮಸೀದಿಯ ಅಧ್ಯಕ್ಷ ಅಬೂಬಕ್ಕರ್, ಜೆಎಫ್ಎ ಅಧ್ಯಕ್ಷ ನಾಸಿರ್ ಬಳಕ, ವಿಸ್ಡಮ್ ವೆಲ್ಫೇರ್ ಅಸೋಸಿಯೇಷನ್ ತಪ್ಸೀರ್ ಸಾಂಬಾರ್ ತೋಟ ಮೊದಲಾದವರಿದ್ದರು.