ರಾಷ್ಟ್ರಪ್ರಶಸ್ತಿ ವಿಜೇತ ನಟ, ನಿರ್ದೇಶಕ ರಿಷಬ್ ಶೆಟ್ಟಿ ಸದ್ಯ “ಕಾಂತಾರ’ ಪ್ರೀಕ್ವೆಲ್ “ಕಾಂತಾರ : ಭಾಗ 1′ ಚಿತ್ರದಲ್ಲಿ ಬಿಜಿಯಾಗಿದ್ದಾರೆ. ಈ ಬಹುನಿರೀತ ಸಿನಿಮಾ ಇದೇ ಅ.2ರಂದು ವಿಶ್ವಾದ್ಯಂತ ರಿಲೀಸ್ ಆಗಲಿದೆ. ಅದರ ನಡುವೆಯೇ ಅವರು ಕಳೆದ ವರ್ಷ ತೆರೆಗೆ ಬಂದ ಪ್ರಶಾಂತ್ ವರ್ಮಾ ನಿರ್ದೇಶನದ “ಹನುಮಾನ್’ ಸೀಕ್ವೆಲ್ “ಜೈ ಹನುಮಾನ್’ ಚಿತ್ರದಲ್ಲಿ ಹನುಮಂತನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಅವರ ಲುಕ್ ಕೂಡ ಈಗಾಗಲೇ ಬಿಡುಗಡೆಯಾಗಿದೆ. ಈ ಎರಡು ಚಿತ್ರಗಳ ಜತೆಗೆ ರಿಷಬ್ ಶೆಟ್ಟಿ “ಪಿಎಂ ನರೇಂದ್ರ ಮೋದಿ’, “ಮೈ ಅಟಲ್ ಹೂ’ ಖ್ಯಾತಿಯ ನಿರ್ಮಾಪಕ, “ಸಫೇದ್’ ಚಿತ್ರದ ನಿರ್ದೇಶಕ ಸಂದೀಪ್ ಸಿಂಗ್ ಆ್ಯಕ್ಷನ್-ಕಟ್ ಹೇಳಲಿರುವ “ಛತ್ರಪತಿ ಶಿವಾಜಿ ಮಹಾರಾಜ್ : ದ ಪ್ರೈಡ್ ಆಫ್ ಭಾರತ್’ ಚಿತ್ರದಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಕಳೆದ ಡಿಸೆಂಬರ್ನಲ್ಲಿ ಸಿನಿಮಾ ಅಧಿಕೃತವಾಗಿ ಘೋಷಣೆಯಾಗಿದ್ದು, ಸದ್ಯ ಚಿತ್ರತಂಡ ಪ್ರಿ&ಪ್ರೊಡಕ್ಷನ್ ಕೆಲಸಗಳಲ್ಲಿ ಬಿಜಿಯಾಗಿದೆ. ವಿಶೇಷ ಅಂದರೆ ಈ ಚಿತ್ರದ ಮೂಲಕ ಬಾಲಿವುಡ್ನ ಇಬ್ಬರು ಖ್ಯಾತನಾಮರು ಮೊದಲ ಬಾರಿಗೆ ಒಟ್ಟಿಗೆ ಕೆಲಸ ಮಾಡಲಿದ್ದಾರೆ. “ತಾರೇ ಜಮೀನ್ ಪರ್’, “ಚಿಟ್ಟಗಾಂಗ್’ ಚಿತ್ರಗಳ ಖ್ಯಾತಿಯ ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರಸಾಹಿತಿ ಪ್ರಸೂನ್ ಜೋಶಿ ಮತ್ತು “ಬ್ರಹ್ಮಾಸ್ತ್ರ ಪಾರ್ಟ್ 1: ಶಿವ’ ಖ್ಯಾತಿಯ ರಾಷ್ಟ್ರಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಪ್ರೀತಂರನ್ನು ಸಂದೀಪ್ ಸಿಂಗ್ “ಛತ್ರಪತಿ ಶಿವಾಜಿ ಮಹಾರಾಜ್’ ಬಯೋಪಿಕ್ಗಾಗಿ ಒಂದೆಡೆ ಸೇರಿಸಿದ್ದಾರೆ. ಮೊದಲ ಬಾರಿಗೆ ರಾಷ್ಟ್ರಪ್ರಶಸ್ತಿ ವಿಜೇತ ನಟ, ಸಂಗೀತ ನಿರ್ದೇಶಕ, ಸಾಹಿತಿ ಒಂದಾಗಿರುವುದು ಈ ಚಿತ್ರದ ಬಗ್ಗೆ ಕುತೂಹಲ, ನಿರೀೆ ಹೆಚ್ಚಿಸಿದೆ. ಸಿನಿಮಾ 2027ರ ಜ.27ರಂದು ವಿಶ್ವಾದ್ಯಂತ ರಿಲೀಸ್ ಆಗಲಿದೆ.
ಛತ್ರಪತಿ ಶಿವಾಜಿ ಮಹಾರಾಜರ ಜೀವನಾಧಾರಿತ ಚಿತ್ರಕ್ಕೆ ಹಾಡುಗಳನ್ನು ಬರೆಯುವುದು ಒಂದು ಅನನ್ಯ ಅನುಭವ. ಈ ಸಿನಿಮಾ ಮೂಲಕ ಅವರ ಶೌರ್ಯ, ನಾಯಕತ್ವ ಮತ್ತು ಪರಂಪರೆಯನ್ನು ಸಾರುವ ಕಥೆಯನ್ನು ಜನರ ಮುಂದೆ ತರಲು ನಾನೂ ಉತ್ಸುಕನಾಗಿದ್ದೇನೆ.
– ಪ್ರಸೂನ್ ಜೋಶಿ, ಚಿತ್ರಸಾಹಿತಿ
ಶಕ್ತಿಯುತ ಮತ್ತು ಭಾವನಾತ್ಮಕ ಸಂಗೀತ ಕೇಳುವ ಚಿತ್ರವಿದು. ಮೊದಲ ಬಾರಿಗೆ ಐತಿಹಾಸಿಕ ಸಿನಿಮಾ ಸಂಗೀತ ಸಂಯೋಜಿಸಲು ನನ್ನನ್ನು ಆಯ್ಕೆ ಮಾಡಿಕೊಂಡಿರುವುದು ಅತೀವ ಖುಷಿ ನೀಡಿದೆ. ಛತ್ರಪತಿ ಶಿವಾಜಿ ಮಹಾರಾಜರ ಜೀವನದ ಸಾರವನ್ನು ಸಂಗೀತದ ಮೂಲಕ ಪ್ರಸ್ತುತಪಡಿಸಲು ನಾನು ಕೂಡ ಎದುರು ನೋಡುತ್ತಿದ್ದೇನೆ.
– ಪ್ರೀತಂ, ಸಂಗೀತ ನಿರ್ದೇಶಕ