More

    ಒಟಿಟಿಯಲ್ಲಿ ಪ್ರಣೀತಾ ಹಂಗಾಮಾ; ಡಿಸ್ನಿ ಹಾಟ್​ಸ್ಟಾರ್​ನಲ್ಲಿ ಚೊಚ್ಚಲ ಬಾಲಿವುಡ್ ಚಿತ್ರ

    ಬೆಂಗಳೂರು: ಬಹುಭಾಷಾ ನಟಿ, ಕನ್ನಡತಿ ಪ್ರಣೀತಾ ಸುಭಾಷ್ ಬಾಲಿವುಡ್​ಗೆ ಪದಾರ್ಪಣೆ ಮಾಡಿರುವುದು ಗೊತ್ತಿರುವ ವಿಚಾರ. ಈಗಾಗಲೇ ಅಜಯ್ ದೇವಗನ್ ಜತೆಗೆ ‘ಭುಜ್ – ದಿ ಪ್ರೖೆಡ್ ಆಫ್ ಇಂಡಿಯಾ’ ಚಿತ್ರದಲ್ಲಿ ನಟಿಸಿದ್ದಾರವರು. ಅದೇ ರೀತಿ ‘ಹಂಗಾಮಾ 2’ ಚಿತ್ರದಲ್ಲಿಯೂ ಬಣ್ಣ ಹಚ್ಚಿದ್ದಾರೆ. ಇದೀಗ ವಿಷಯ ಏನೆಂದರೆ, ಈ ಎರಡು ಸಿನಿಮಾಗಳ ಪೈಕಿ ‘ಹಂಗಾಮಾ 2’ ಸಿನಿಮಾ ಇನ್ನೇನು ಶೀಘ್ರದಲ್ಲಿ ಒಟಿಟಿ ವೇದಿಕೆಯಲ್ಲಿ ಪ್ರಸಾರವಾಗಲಿದೆ. ಪ್ರಿಯದರ್ಶನ್ ನಿರ್ದೇಶನದಲ್ಲಿ ಮೂಡಿಬಂದಿರುವ ‘ಹಂಗಾಮಾ 2’ ಹಾಸ್ಯಪ್ರಧಾನ ಸಿನಿಮಾ. ಈ ಚಿತ್ರದಲ್ಲಿ ಪರೇಶ್ ರಾವಲ್, ಶಿಲ್ಪಾ ಶೆಟ್ಟಿ, ಪ್ರಣೀತಾ, ಮಿಜಾನ್ ಜೆಫ್ರಿ ಮುಖ್ಯಭೂಮಿಕೆಯಲ್ಲಿದ್ದಾರೆ. ಮತ್ತೊಂದು ವಿಶೇಷತೆ ಏನೆಂದರೆ, ಶಿಲ್ಪಾ ಶೆಟ್ಟಿಗಿದು ಕಂಬ್ಯಾಕ್ ಚಿತ್ರವಾದರೆ, ಒಟಿಟಿಯಲ್ಲಿ ಬಿಡುಗಡೆ ಆಗುತ್ತಿರುವ ಪ್ರಣೀತಾ ಅವರ ಮೊದಲ ಚಿತ್ರವೂ ಇದೇ. ಇನ್ನೇನು ಡಿಸ್ನಿ ಪ್ಲಸ್ ಹಾಟ್​ಸ್ಟಾರ್​ನಲ್ಲಿ ‘ಹಂಗಾಮಾ 2’ ಚಿತ್ರ ಸ್ಟ್ರೀಮ್ ಆಗಲಿದೆ ಎನ್ನಲಾಗುತ್ತಿದೆ. ಯಾವಾಗ ಎಂಬುದು ಇನ್ನಷ್ಟೇ ಅಧಿಕೃತವಾಗಬೇಕಿದೆ.

    ಡಿಸ್ನಿಯಲ್ಲಿ ಮತ್ತೆ ಸಾಲುಸಾಲು ಸಿನಿಮಾ: ಕಳೆದ ವರ್ಷದ ಕೋವಿಡ್ ಸಂದರ್ಭದಲ್ಲಿ ಸಾಲುಸಾಲು ಚಿತ್ರಗಳನ್ನು ತನ್ನ ವೇದಿಕೆಯಲ್ಲಿ ಬಿಡುಗಡೆ ಮಾಡುವುದಾಗಿ ಡಿಸ್ನಿ ಹಾಟ್​ಸ್ಟಾರ್ ಪ್ಲಸ್ ಹೇಳಿಕೊಂಡಿತ್ತು. ಅದರಂತೆ ‘ದಿಲ್​ಬೇಚಾರ’, ‘ಲಕ್ಷ್ಮೀ ಬಾಂಬ್’, ‘ಸಡಕ್ 2’, ‘ಖುದಾ ಹಫೀಸ್’, ಲೂಟ್ ಕೇಸ್’… ಚಿತ್ರಗಳು ಬಿತ್ತರವಾಗಿದ್ದವು. ಇದೀಗ ಈ ವರ್ಷವೂ ಇನ್ನೇನು ಹಲವು ಸಿನಿಮಾಗಳನ್ನು ಘೋಷಿಸಿಕೊಳ್ಳಲಿದೆ. ಆ ಪೈಕಿ ‘ಹಂಗಾಮಾ 2’, ‘ಭೂತ್ ಪೊಲೀಸ್’, ‘ಮಿಮಿ’, ‘ಶಿದ್ದತ್’ ಸೇರಿ ಹಲವು ಚಿತ್ರಗಳು ಡಿಸ್ನಿಯಲ್ಲಿ ಸ್ಟ್ರೀಮ್ ಆಗಲಿವೆ.

    ಕರೊನಾ ಲಸಿಕೆ ಹಾಕಿಸಿಕೊಳ್ಳುವ ಕುರಿತು ನಿಮ್ಮಲ್ಲಿ ಈ ಗೊಂದಲಗಳಿವೆಯೇ? ಹಾಗಿದ್ದರೆ ಇಲ್ಲಿವೆ ನೋಡಿ ಸ್ಪಷ್ಟೀಕರಣ…

    ಎಟಿಎಂಗೆ ತುಂಬಬೇಕಿದ್ದ 75 ಲಕ್ಷ ರೂ. ದೋಚಿದ ದುರುಳರು; ಹೆದರಿದ ವ್ಯಾನ್ ಚಾಲಕನನ್ನು ಕೊಂದೇ ಬಿಟ್ಟರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts