PHOTOS|ಮನಾಲಿಯಲ್ಲಿ ಪ್ರಣೀತಾ ಹಂಗಾಮಾ

Praneetha Subhash4
Published on

ಬೆಂಗಳೂರು : ಲಾಕ್​ಡೌನ್ ತೆರವಾಗಿದೆ. ಸಿನಿಮಾ ಶೂಟಿಂಗ್ ಶುರುವಾಗಿದೆ. ಚಿತ್ರಮಂದಿರ ತೆರೆಯುವುದಕ್ಕೂ ದಿನಾಂಕ ನಿಗದಿಯಾಗಿದೆ. ಇಷ್ಟು ದಿನ, ಸಂಕಷ್ಟದಲ್ಲಿದ್ದ ಹಲವರಿಗೆ ಸಹಾಯ ಮಾಡುವುದರಲ್ಲಿ ತೊಡಗಿಸಿಕೊಂಡಿದ್ದ ಪ್ರಣೀತಾ ಸುಭಾಷ್ ಸಹ ಶೂಟಿಂಗ್​ನಲ್ಲಿ ಭಾಗಿಯಾಗಿದ್ದಾರೆ.

ಇತ್ತೀಚೆಗೆ, ಪ್ರಣೀತಾ ಯಾವ ಹೊಸ ಚಿತ್ರವನ್ನೂ ಒಪ್ಪಿಕೊಂಡಿದ್ದು ನೆನಪಿಲ್ಲವಲ್ಲ ಎಂಬ ಪ್ರಶ್ನೆ ಬರಬಹುದು. ಲಾಕ್​ಡೌನ್ ಪ್ರಾರಂಭವಾಗುವುದಕ್ಕೆ ಮುನ್ನವೇ ಅವರು ಪ್ರಿಯದರ್ಶನ್ ನಿರ್ದೇಶನದ ‘ಹಂಗಾಮಾ 2’ ಎಂಬ ಹಿಂದಿ ಚಿತ್ರವನ್ನು ಒಪ್ಪಿಕೊಂಡಿದ್ದರು. ಚಿತ್ರದ ಚಿತ್ರೀಕರಣ ಪ್ರಾರಂಭವಾಗಿತ್ತಾದರೂ, ಲಾಕ್​ಡೌನ್​ನಿಂದ ನಿಂತಿತ್ತು. ಇದೀಗ ಚಿತ್ರೀಕರಣ ಪುನಃ ಪ್ರಾರಂಭವಾಗಿದ್ದು, ಮನಾಲಿಯಲ್ಲಿ ಮುಂದುವರೆದಿದೆ. ಈ ಚಿತ್ರೀಕರಣದಲ್ಲಿ ಪ್ರಣೀತಾ ಪಾಲ್ಗೊಂಡಿದ್ದು, ಬಿಡುವಿನ ಸಮಯದಲ್ಲಿ ಇತ್ತೀಚೆಗಷ್ಟೇ ಲೋಕಾರ್ಪಣೆಗೊಂಡ ಅಟಲ್ ಟನಲ್​ಗೂ ಭೇಟಿ ನೀಡಿ ಬಂದಿದ್ದಾರೆ.

ಇತ್ತೀಚೆಗಷ್ಟೇ ಪ್ರಧಾನಿ ಮೋದಿ ಅವರಿಂದ ಅಟಲ್ ಟನಲ್ ಲೋಕಾರ್ಪಣೆಗೊಂಡ ಹಿನ್ನೆಲೆಯಲ್ಲಿ ಅದರ ವೀಕ್ಷಣೆಗೆ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಅದೇ ರೀತಿ ಪ್ರಣೀತಾ ಸಹ ಆ ಟನಲ್​ಗೆ ಭೇಟಿ ನೀಡಿ ಒಂದಷ್ಟು ಫೋಟೋ ಕ್ಲಿಕ್ಕಿಸಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಸದ್ಯ ಮನಾಲಿಯಲ್ಲಿಯೇ ಇರುವ ಪ್ರಣೀತಾ, ಆ ಭೇಟಿಯ ಕ್ಷಣ ಮತ್ತು ಸಿನಿಮಾ ಶೂಟಿಂಗ್ ಬಗ್ಗೆ ‘ವಿಜಯವಾಣಿ’ ಜತೆಗೆ ಮಾತನಾಡಿದ್ದಾರೆ.

‘‘ಹಂಗಮಾ 2’ ಚಿತ್ರದ ಶೂಟಿಂಗ್ ಮನಾಲಿಯಲ್ಲಿ ಶುರುವಾಗಿದೆ. ಶಿಲ್ಪಾ ಶೆಟ್ಟಿ, ಪರೇಶ್ ರಾವಲ್, ಮಿಜಾನ್ ಜೆಫ್ರಿ ಮತ್ತು ನಾನು ಭಾಗವಹಿಸಿದ್ದೇವೆ. ನಮ್ಮ ಶೂಟಿಂಗ್ ಸ್ಥಳದಿಂದ ಅಟಲ್ ಟನಲ್ ಸಮೀಪ ಇದ್ದ ಹಿನ್ನೆಲೆಯಲ್ಲಿ ಹೋಗಿ ಬಂದಿದ್ದೇವೆ. ನಿಜಕ್ಕೂ ಅಚ್ಚರಿ ಮೂಡಿಸುವ ಟನಲ್ ಅದು’ ಎಂದು ಮಾಹಿತಿ ನೀಡುತ್ತಾರೆ ಪ್ರಣೀತಾ.

6F1B9255
6F1B9235
6F1B9180
6F1B9061

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net