ಪ್ರಣಬ್​ ಮುಖರ್ಜಿ ಆರೋಗ್ಯದಲ್ಲಿಲ್ಲ ಸುಧಾರಣೆ; ಗಂಭೀರ ಸ್ಥಿತಿ

Pranab Mukharjee
Published on

ಮಾಜಿ ರಾಷ್ಟ್ರಪತಿ ಪ್ರಣಬ್​ ಮುಖರ್ಜಿ ಅವರ ಆರೋಗ್ಯ ಗಂಭೀರ ಸ್ಥಿತಿಯಲ್ಲೇ ಮುಂದುವರಿದೆ. ಅವರು ದೆಹಲಿ ಆರ್ಮಿ ಹಾಸ್ಪಿಟಲ್​​ನಲ್ಲಿ ದಾಖಲಾಗಿದ್ದು, ಚಿಕಿತ್ಸೆ ಮುಂದುವರಿಯುತ್ತಿದೆ.

ತಜ್ಞ ವೈದ್ಯರ ತಂಡ ಪ್ರಣಬ್​ ಮುಖರ್ಜಿ ಅವರಿಗೆ ಚಿಕಿತ್ಸೆ ನೀಡುತ್ತಿದೆ. ಅವರಿನ್ನೂ ವೆಂಟಿಲೇಟರ್​​ ಸಹಾಯದಲ್ಲೇ ಇದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಪ್ರಣಬ್​ ಮುಖರ್ಜಿ ಅವರು ಕೊವಿಡ್​​-19 ಸೋಂಕಿತರಾಗಿದ್ದರು. ಅದರೊಂದಿಗೆ ಮಿದುಳು ಸರ್ಜರಿ ಮಾಡಲಾಗಿತ್ತು. ಮಿದುಳುನ ಶಸ್ತ್ರಕ್ರಿಯೆ ಬಳಿಕ ಅವರ ಆರೋಗ್ಯ ತೀವ್ರ ಹದಗೆಟ್ಟಿತ್ತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net