

ಕೋಟ: ಪ್ರಕೃತಿ ಸಂಜೀವಿನಿ ಒಕ್ಕೂಟಕ್ಕೆ ತಾಲೂಕಿನ ವಾದರಿ ಒಕ್ಕೂಟ ಎಂಬ ಗೌರವ ಸಿಕ್ಕಿದೆ ಎಂದು ಪ್ರಕೃತಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ವಾಲತಿ ಶೇಖರ್ ಹರ್ಷ ವ್ಯಕ್ತಪಡಿಸಿದರು.
ಕೋಟ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಕೋಟ ಗ್ರಾಪಂ ಪ್ರಕೃತಿ ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾಸಭೆಯ ಮಾತನಾಡಿದರು.
ಕೋಟ ಗ್ರಾಪಂ ಉಪಾಧ್ಯಕ್ಷ ಪಾಂಡು ಪೂಜಾರಿ ಉದ್ಘಾಟಿಸಿದರು. ಪ್ರಕೃತಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ವಾಲತಿ ಶೇಖರ್ ಅಧ್ಯಕ್ಷತೆ ವಹಿಸಿದ್ದರು. ಸೇವೆಯಿಂದ ನಿವೃತ್ತರಾಗಲಿರುವ ಕೋಟ ಗ್ರಾಪಂ ಅಭಿವೃದ್ಧಿ ಅಧಿಕಾರಿ ಸುರೇಶ್ ಬಂಗೇರ ಅವರನ್ನು ಸನ್ಮಾನಿಸಲಾಯಿತು. ಕೃಷಿ ಹಾಗೂ ಹೈನುಗಾರಿಕಾ ಕ್ಷೇತ್ರದಲ್ಲಿ ಸಾಧನೆಗೈದ ಒಕ್ಕೂಟದ ಜಯಲಕ್ಷ್ಮೀ ಗಿಳಿಯಾರು ಅವರಿಗೆ ಸಾಧಕ ಮಹಿಳಾ ಗೌರವ ನೀಡಿ ಪುರಸ್ಕರಿಸಲಾಯಿತು.
ಕೋಟ ಸಮುದಾಯ ಆರೋಗ್ಯ ಕೇಂದ್ರದ ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ.ವಾಧವ ಪೈ ಮಹಿಳೆಯರ ಆರೋಗ್ಯ ಸಂಬಂಧಿತ ವಿಷಯಗಳ ಬಗ್ಗೆ ಮಾಹಿತಿ ನೀಡಿದರು. ಕೋಟ ಪಶು ಆಸ್ಪತ್ರೆ ವೈದ್ಯಾಧಿಕಾರಿ ಅನಿಲ್ ಕುವಾರ್ ನೋಡಲ್ ಅಧಿಕಾರಿಯಾಗಿದ್ದರು.
ಸಂಜೀವಿನಿ ಒಕ್ಕೂಟಗಳ ತಾಲೂಕು ಸಮಿತಿ ಅಧ್ಯಕ್ಷೆ ಕಲಾವತಿ ಅಶೋಕ್, ಪಂಚಾಯಿತಿ ಕಾರ್ಯದರ್ಶಿ ಶೇಖರ್, ಬ್ರಹ್ಮಾವರ ತಾಲೂಕು ಪಂಚಾಯಿತಿ ನರೇಗಾ ಯೋಜನೆ ಸಂಯೋಜಕ ಅಕ್ಷಯ ಕೃಷ್ಣ, ಕೋಟ ಠಾಣೆ ಎಎಸ್‌ಐ ರವಿ ಕುವಾರ್ ಉಪಸ್ಥಿತರಿದ್ದರು. ಪಶು ಸಖಿ ರೇಷ್ಮಾ ಸ್ವಾಗತಿಸಿ, ಕೃಷಿ ಸಖಿ ಮಮತಾ ವಂದಿಸಿದರು. ಸಂದ ಎಲ್‌ಸಿಆರ್‌ಪಿ ಭಾರತಿ ನಿರೂಪಿಸಿದರು.