ಹೆಬ್ರಿ ತಾಲೂಕು ಜನ ಜಾಗೃತಿ ಪದಾಧಿಕಾರಿಗಳ ಸಭೆ

hbr (8)
Published on

ಹೆಬ್ರಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾವಾಭಿವೃದ್ಧಿ ಯೋಜನೆ, ಹೆಬ್ರಿ ತಾಲೂಕು ಜನಜಾಗೃತಿ ವೇದಿಕೆ ಆಶ್ರಯದಲ್ಲಿ ತಾಲೂಕು ಜನಜಾಗೃತಿ ವೇದಿಕೆ ಪದಾಧಿಕಾರಿಗಳ ಸಭೆ ಹೆಬ್ರಿಯಲ್ಲಿ ಶುಕ್ರವಾರ ನಡೆಯಿತು.

ಹೆಬ್ರಿ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ನೀರೇ ಕೃಷ್ಣ ಶೆಟ್ಟಿ ವಾತನಾಡಿ, ಜನಜಾಗೃತಿ ವೇದಿಕೆಯ ಕಾರ್ಯಕ್ರಮಗಳನ್ನು ಸರಿಯಾದ ಸಮಯದಲ್ಲಿ ಅನುಷ್ಠಾನ ವಾಡುವಲ್ಲಿ ಸಂಬಂಧಪಟ್ಟವರು ಕ್ರಮ ವಹಿಸಬೇಕು. ಜುಲೈನಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಸೂಕ್ತ ತಯಾರಿ ನಡೆಸುವಂತೆ ಹೇಳಿದರು.

ಧರ್ಮಸ್ಥಳ ಗ್ರಾವಾಭಿವೃದ್ಧಿ ಯೋಜನೆಯ ಜಿಲ್ಲಾ ಯೋಜನೆ ನಿರ್ದೇಶಕ ನಾಗರಾಜ್ ಶೆಟ್ಟಿ ವಾತನಾಡಿ, ಮದ್ಯವರ್ಜನ ಶಿಬಿರದಿಂದ ಅನೇಕರ ಜೀವನ ಲೋಕಕಲ್ಯಾಣ ಆಗಿದೆ. ಕಾಡುಪ್ರಾಣಿಗಳಿಗೆ ಆಹಾರವಾಗುವ ನಿಟ್ಟಿನಲ್ಲಿ ಯೋಜನೆಯ ಪ್ರಮುಖ ಕಾರ್ಯಕ್ರಮವಾದ ಅರಣ್ಯೀಕರಣ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಎಲ್ಲರೂ ಕೈ ಜೋಡಿಸಿ ಎಂದರು.

ಉಡುಪಿ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಅಂಡಾರು ಮಹಾವೀರ ಹೆಗ್ಡೆ, ವಿವಿಧ ವಲಯದ ಜನಜಾಗೃತಿ ವೇದಿಕೆ ಸದಸ್ಯರಾದ ವಸಂತಕುವಾರ ಶೆಟ್ಟಿ, ವಾದಿರಾಜ ಶೆಟ್ಟಿ, ಮನೋಜ್ ಕುವಾರ್ ಶೆಟ್ಟಿ, ನರೇಂದ್ರ ನಾಯಕ್, ದೇವೇಂದ್ರ ಕಾಮತ್, ಯಶೋದಾ ಶೆಟ್ಟಿ, ಯೋಜನಾಧಿಕಾರಿ ಲೀಲಾವತಿ, ಕೃಷಿ ಅಧಿಕಾರಿ ಉಮೇಶ್ ಬಿ.ಕೆ., ಕಚೇರಿ ಪ್ರಬಂಧಕಿ ಪ್ರಮೀಳಾ, ಸಹಾಯಕಿ ಭಾನುಶ್ರೀ ಇದ್ದರು. ಯೋಜನಾಧಿಕಾರಿ ಲೀಲಾವತಿ ಸ್ವಾಗತಿಸಿ, ವಂದಿಸಿದರು. ಮೇಲ್ವಿಚಾರಕ ಉಮೇಶ್ ಬಿ.ಕೆ. ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net