'ರಾಕ್ಷಸ' ನಾದ ಪ್ರಜ್ವಲ್ ದೇವರಾಜ್​: ಸಿನಿಮಾದ ಫಸ್ಟ್ ಲುಕ್ ರಿಲೀಸ್

rakshasa
Published on

Prajwal Devaraj And Director Lohit S New Movie Titled Rakshasa Announced

ಬೆಂಗಳೂರು: ಕನ್ನಡ ಚಿತ್ರರಂಗದ ಬ್ಯುಸಿ ನಿರ್ದೇಶಕರಲ್ಲಿ ಒಬ್ಬರಾಗಿರುವ ಲೋಹಿತ್ ಇದೀಗ ಮತ್ತೊಂದು ಹೊಸ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಮಾಡಿದ್ದಾರೆ. 'ರಾಕ್ಷಸ' ಹೆಸರಿನ ಈ ಸಿನಿಮಾದಲ್ಲಿ ಪ್ರಜ್ವಲ್‌ ದೇವರಾಜ್‌ ನಾಯಕನಾಗಿ ನಟಿಸಲಿದ್ದಾರೆ.

'ಮಮ್ಮಿ' ಸಿನಿಮಾ ಖ್ಯಾತಿಯ ನಿರ್ದೇಶಕ ಲೋಹಿತ್ ಒಂದರ ಹಿಂದೆ ಒಂದರಂತೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಕ್ಯಾಪ್ಚರ್, ಮಾಫಿಯಾ ಸಿನಿಮಾ ಮೂಲಕ ಸದ್ದು ಮಾಡುತ್ತಿರುವ ಲೋಹಿತ್, ಈ ಎರಡು ಸಿನಿಮಗಳ ರಿಲೀಸ್‌ಗೂ ಮೊದಲೇ ಮತ್ತೊಂದು ಸಿನಿಮಾ ಘೋಷಣೆ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಹೊಸ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಮಾಡುವ ಮೂಲಕ ಅಭಿಮಾನಿಗಳ ಕುತೂಹಲ ಹೆಚ್ಚಿಸಿದ್ದಾರೆ. ಲೋಹಿತ್ ಹೊಸ ಸಿನಿಮಾಗೆ 'ರಾಕ್ಷಸ' ಎಂದು ಹೆಸರಿಡಲಾಗಿದೆ. ಸಂಕ್ರಾಂತಿಯ ಮುನ್ನ ದಿನ 'ರಾಕ್ಷಸ' ಸಿನಿಮಾದ ಫಸ್ಟ್ ಲುಕ್ ರಿವೀಲ್ ಮಾಡಿದ್ದಾರೆ.

ಅಮ್ಮ ಲೀಲಾವತಿ ನೆನಪಿಗಾಗಿ 55 ಲಕ್ಷ ಖರ್ಚು ಮಾಡಲು ಹೊರಟ ವಿನೋದ್‌ ರಾಜ್‌! ಹೀಗಿದೆ ಮೆಚ್ಚುವ ಕೆಲಸದ ಹಿಂದಿರುವ ಅಸಲಿ ಕಾರಣ

ಇನ್ನು 'ರಾಕ್ಷಸ'ನಾಗಿ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಕಾಣಿಸಿಕೊಂಡಿದ್ದಾರೆ. ಸದ್ಯ ರಿಲೀಸ್ ಆಗಿರುವ ಪೋಸ್ಟರ್‌ನಲ್ಲಿ ಪ್ರಜ್ವಲ್ ಗನ್ ಹಿಡಿದಿದ್ದಾರೆ. ಪುಟ್ಟ ಮಗು ಪ್ರಜ್ವಲ್ ಕೈ ಬೆರಳನ್ನು ಹಿಡಿದಿದೆ. ಕೈಯಲ್ಲಿ ಇರುವ ಟ್ಯಾಟೂ ಸಹ ಗಮನ ಸೆಳೆಯುತ್ತಿದೆ.

ಈಗಾಗಲೇ ಪ್ರಜ್ವಲ್ ಜೊತೆ 'ಮಾಫಿಯಾ' ಸಿನಿಮಾ ಮಾಡಿರುವ ಲೋಹಿತ್ ಆ ಸಿನಿಮಾ ರಿಲೀಸ್‌ಗೂ ಮೊದಲೇ 'ರಾಕ್ಷಸ' ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ರಾಕ್ಷಸ ದ ಫಸ್ಟ್ ಲುಕ್ ಅನ್ನು ಬರೋಬ್ಬರಿ 40 ನಿರ್ದೇಶಕರು ಬಿಡುಗಡೆ ಮಾಡಿರುವುದು ವಿಶೇಷ.

ಈ ಸಿನಿಮಾದಲ್ಲಿ ಪ್ರಜ್ವಲ್ ಜೊತೆ ಯಾರೆಲ್ಲ ಅಭಿನಯಿಸಿದ್ದಾರೆ, ಇದು ಯಾವ ರೀತಿಯ ಸಿನಿಮಾ ಎನ್ನುವ ಹೆಚ್ಚಿನ ಮಾಹಿತಿಯನ್ನು ನಿರ್ದೇಶಕರು ಬಿಟ್ಟುಕೊಟ್ಟಿಲ್ಲ. ನೊಬಿನ್ ಪೌಲ್‌ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net