

ಧಾರವಾಡ: ರೈಲು ನಿಲ್ದಾಣದ ನೂತನ ಕಟ್ಟದ ಉದ್ಘಾಟನೆ ಹಿನ್ನೆಲೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಭೇಟಿ ನೀಡಿ, ಸಿದ್ಧತೆಗಳ ಬಗ್ಗೆ ಪರಿಶೀಲಿಸಿದ್ದಾರೆ.
ಧಾರವಾಡ ರೈಲು ನಿಲ್ದಾಣ ದಶಕಗಳ ಅಭಿವೃದ್ಧಿಯ ಬೇಡಿಕೆಯಾಗಿತ್ತು. ಇಲ್ಲಿ ಸಣ್ಣ ನಿಲ್ದಾಣಗಳ ಅಭಿವೃದ್ಧಿಗೆ ಬಹಳ ಆಗ್ರಹ ಇತ್ತು. ಹಿಂದಿನ ಸರ್ಕಾರವಿದ್ದಾಗ ಜಗಳ ಮಾಡಿ ಹುಬ್ಬಳ್ಳಿಯ ರೈಲು ನಿಲ್ದಾಣ ಮಂಜೂರಿ ಮಾಡಿಸಿದ್ದೇವು. ಇದೀಗ ಧಾರವಾಡದಲ್ಲಿ ಸ್ಥಳೀಯರ ಜತೆ ಸೇರಿ ಉತ್ತಮ ರೈಲು ನಿಲ್ದಾಣ ಮಾಡಿದ್ದೇವೆ ಎಂದು ಹೇಳಿದರು.
ಬಹಳ ವರ್ಷಗಳ ನಂತರ ರೇಲ್ವೆ ಮಂತ್ರಿ ಧಾರವಾಡಕ್ಕೆ ಬರುತ್ತಿದ್ದಾರೆ. ರಾಜ್ಯದ ಪರವಾಗಿ ಅನೇಕ ಬೇಡಿಕೆಗಳನ್ನು ಸಚಿವರಿಗೆ ಈಗಾಗಲೇ ಮನವರಿಕೆ ಮಾಡಿದ್ದೇನೆ. ಬೇಡಿಕೆ ಪಟ್ಟಿಯಲ್ಲಿರುವ ಅಗತ್ಯ ಯೋಜನೆಗಳ ಬಗ್ಗೆ ಘೋಷಣೆ ಮಾಡಲಿದ್ದಾರೆ ಎಂದರು.
ಧಾರವಾಡ ರೈಲ್ವೇ ನಿಲ್ದಾಣ ಸುಸಜ್ಜಿತವಾಗಿ ಸಿದ್ಧವಾಗಿದೆ. ದೆಹಲಿಗೆ ಹುಬ್ಬಳ್ಳಿಯಿಂದ ವಾರಕ್ಕೆ ಒಂದು ರೈಲು ಬಿಡಲಾಗುತ್ತಿದೆ. ಬೇಡಿಕೆ ನೋಡಿಕೊಂಡು ಮುಂದೆ ಮತ್ತೇ ರೈಲಿನ ಸಂಖ್ಯೆ ಹೆಚ್ಚಿಸುತ್ತೇವೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.