

ಕಾರವಾರ: ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಉತ್ತರ ಕನ್ನಡ ಜಿಲ್ಲಾ ಸಮಿತಿಯ ಅಧ್ಯಕ್ಷರಾಗಿ ಕಾರವಾರದ ಗುನಗಿ ಇಲೆಕ್ಟ್ರೀಶಿಯನ್‌ನ ಪ್ರದೀಪ ಗುನಗಿ ಆಯ್ಕೆಯಾಗಿದ್ದಾರೆ.
ಮುಂದಿನ ಮೂರು ವರ್ಷಗಳ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಕೇಂದ್ರ ಸಮಿತಿಯ ಅಧ್ಯಕ್ಷ ಸಿ.ರಮೇಶ ಅವರ ನೇತ್ರತ್ವದಲ್ಲಿ ಇತ್ತೀಚೆಗೆ ಶಿರಸಿಯ ಐಎಂಎ ಸಭಾಂಗಣದಲ್ಲಿ ಜರುಗಿದ ಸಂಘದ ಸರ್ವಸಾಧಾರಣ ಸಭೆಯಲ್ಲಾಯಿತು.
ಇದನ್ನೂ ಓದಿ: ಚಾರ್ಜರ್ ಪಿನ್ ನಿಂದ ಶಾಕ್ ತಗುಲಿ ಮಗು ಸಾವು
ಭಟ್ಕಳದ ತಿರುಮಲ ಎಚ್.ನಾಯ್ಕ ಕಾರ್ಯಾಧ್ಯಕ್ಷರಾಗಿ, ಸಿದ್ದಾಪುರದ ಸುಬ್ರಾಯ ಜಿ.ನಾಯ್ಕ, ಮಂಡಗೋಡಿನ ಚೆನ್ನವೀರ ಜೆ.ಹೀರೂರು ಅವರು ಉಪಾಧ್ಯಕ್ಷರಾಗಿ, ಶಿರಸಿ ಗುಡ್ನಾಪುರದ ರಾಘವೇಂದ್ರ ಟಿ.ನಾಯ್ಕ ಪ್ರಧಾನ ಕಾರ್ಯದರ್ಶಿಯಾಗಿ, ಯಲ್ಲಾಪುರದ ಅನಂತ ಎಂ.ಹೆಗಡೆ ಸಹ ಕಾರ್ಯದರ್ಶಿಯಾಗಿ, ಹಳಿಯಾಳದ ವಿಶ್ವನಾಥ ಬೂದಪ್ಪನವರ್ ಸಂಘಟನಾ ಕಾರ್ಯದರ್ಶಿಯಾಗಿ, ಶಿರಸಿಯ ರವೀಂದ್ರ ಭಟ್ ಕೋಶಾಧ್ಯಕ್ಷರಾಗಿ ಆಯ್ಕೆಯಾದರು.