

ಕಾರವಾರ: ಮೊಬೈಲ್ ಚಾರ್ಜರ್ ಬಾಯಿಯಲ್ಲಿ ಹಾಕಿ 8 ತಿಂಗಳ ಮಗು ಮೃತಪಟ್ಟ ಘಟನೆ ಬುಧವಾರ ತಾಲೂಕಿನ ಸಿದ್ದರದಲ್ಲಿ ನಡೆದಿದೆ.
ಹೆಸ್ಕಾಂ ಗುತ್ತಿಗೆ ಆಧಾರದ ಉದ್ಯೋಗಿ ಸಂತೋಷ ಕಲ್ಗುಟಕರ್ ಹಾಗೂ ಸಂಜನಾ ಅವರ 8 ತಿಂಗಳ ಹೆಣ್ಣು ಮಗು ಸಾನ್ನಿಧ್ಯ ಮೃತಪಟ್ಟಿದೆ.
ಮೊಬೈಲ್ ಚಾರ್ಜ್ ಹಾಕಿ ತೆಗೆದಿಟ್ಟ ನಂತರ ಪಾಲಕರು ಸ್ವಿಚ್ ಬಂದ್ ಮಾಡಿರಲಿಲ್ಲ. ಚಾರ್ಜರ್ ಪಿನ್ ಬಾಯಲ್ಲಿ ಹಾಕಿದಾಗ ಮಗುವಿಗೆ ಶಾಕ್ ತಗುಲಿಸೆ.
ತಕ್ಷಣ ಬೈಕ್ ನಲ್ಲಿ ಮಗುವನ್ನು ಕ್ರಿಮ್ಸ್ ಆಸ್ಪತ್ರೆಗೆ ಕರೆತರುವಾಗ ಮಗು ಮೃತಪಟ್ಟಿದೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .