ಪ್ರಭುದೇವ-ಪುನೀತ್ ಡಾನ್ಸ್ ಡಾನ್ಸ್; ಲಕ್ಕಿ ಮ್ಯಾನ್ ಚಿತ್ರದ ವಿಶೇಷ ಹಾಡಿನಲ್ಲಿ..

Puneeth Prabhudeva
Published on

‘ಡಾರ್ಲಿಂಗ್’ ಕೃಷ್ಣ ಅಭಿನಯದ ಹೊಸ ಚಿತ್ರದಲ್ಲಿ ಪುನೀತ್ ರಾಜಕುಮಾರ್ ಮತ್ತು ಭಾರತದ ಮೈಕಲ್ ಜಾಕ್ಸನ್ ಎಂದೇ ಜನಪ್ರಿಯರಾಗಿರುವ ಪ್ರಭುದೇವ ಒಂದು ಹಾಡಿಗೆ ಜತೆಯಾಗಿ ಹೆಜ್ಜೆ ಹಾಕುತ್ತಿದ್ದಾರೆ ಎಂಬ ಸುದ್ದಿಯೊಂದು ಬಂದಿತ್ತು. ಈಗ ಗುರುವಾರ ಸ್ವತಃ ಪುನೀತ್ ಸೋಷಿಯಲ್ ಮೀಡಿಯಾದಲ್ಲಿ ಪ್ರಭುದೇವ ಜತೆಗೆ ಡಾನ್ಸ್ ಮಾಡುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ, ಅದೊಂದು ಮರೆಯಲಾಗದ ಅನುಭವ ಅಂತಲೂ ಹೇಳಿಕೊಂಡಿದ್ದಾರೆ. ಅಂದಹಾಗೆ, ಪುನೀತ್ ಮತ್ತು ಪ್ರಭುದೇವ ಒಟ್ಟಾಗಿ ಕಾಣಿಸಿಕೊಂಡಿರುವುದು, ‘ಲಕ್ಕಿ ಮ್ಯಾನ್’ ಎಂಬ ಚಿತ್ರಕ್ಕಾಗಿ.

ಈ ಚಿತ್ರವು ತಮಿಳಿನ ‘ಓ ಮೈ ಕಡುವುಳೇ’ ರಿಮೇಕ್ ಆಗಿದ್ದು, ಮೂಲ ಚಿತ್ರದಲ್ಲಿ ವಿಜಯ್ ಸೇತುಪತಿ ಮಾಡಿದ್ದ ಅತಿಥಿ ಪಾತ್ರವನ್ನು ಕನ್ನಡದಲ್ಲಿ ಪುನೀತ್ ಮಾಡುತ್ತಿದ್ದಾರೆ. ಈ ಚಿತ್ರವನ್ನು ಪ್ರಭುದೇವ ಸಹೋದರ ನಾಗೇಂದ್ರ ಪ್ರಸಾದ್ ನಿರ್ದೇಶಿಸಿದ್ದು, ಕೃಷ್ಣ ಜತೆಗೆ ರೋಶನಿ ಪ್ರಕಾಶ್, ಸಂಗೀತ ಶೃಂಗೇರಿ ಮುಂತಾದವರು ನಟಿಸಿದ್ದಾರೆ. ಈ ಹಾಡಿನ ಮೂಲಕ ಚಿತ್ರೀಕರಣ ಮುಕ್ತಾಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net