'ರಸ್ತೆ ಮೇಲೆ ಗುಂಡಿಕ್ಕಿ ಹತ್ಯೆ ಮಾಡಲು ಸಂಚು': ಸಚಿವ ಭಗವಂತ ಖೂಬಾ ವಿರುದ್ಧ ಪ್ರಭು ಚವ್ಹಾಣ್ ಗಂಭೀರ ಆರೋಪ

bhagwanth (1)
Published on

ಬೀದರ್: ಕೇಂದ್ರ ಸಚಿವ ಭಗವಂತ ಖೂಬಾ ವಿರುದ್ಧ ಪ್ರಭು ಚವ್ಹಾಣ್ ಗಂಭೀರ ಆರೋಪ ಮಾಡಿದ್ದಾರೆ.

ಔರಾದ್ ಬಿಜೆಪಿ ಕಾರ್ಯಕಾರಣಿ ಸಭೆಯಲ್ಲಿ ಭಗವಂತ ಖೂಬಾ ವಿರುದ್ಧ ಪ್ರಭು ಚವ್ಹಾಣ್ ಗಂಭೀರ ಆರೋಪ ಮಾಡಿದ್ದು, ಖೂಬಾ ನನಗೆ ಸೋಲಿಸಲು ಸಾಕಷ್ಟು ಪ್ರಯತ್ನ ಮಾಡಿದರು. ಈಗ ಅವರ ಪ್ರಯತ್ನ ವಿಫಲವಾಗಿ ತಾನು ಸಾಕಿದ ಗುಂಡಾಗಳಿಂದ ಹತ್ಯೆಗೆ ಸಂಚು ಮಾಡುತ್ತಿದ್ದಾರೆ ಎಂದು ಚವ್ಹಾಣ್ ದೂರಿದ್ದಾರೆ.

ಇತ್ತೀಚೆಗೆ ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಚವ್ಹಾಣ್ ವಿರುದ್ಧ ವಾಕ್ಸಮರ ಸಾರಿದ್ದರು ಖೂಬಾ. ಆದರೆ ನಿನ್ನೆ ಔರಾದ್​​​​ನಲ್ಲಿ ನಡೆದ ಬಿಜೆಪಿ ಕಾರ್ಯಕಾರಣಿಯಲ್ಲಿ ಖೂಬಾ ವಿರುದ್ಧ ಚವ್ಹಾಣ್ ಕಿಡಿಕಾರಿದ್ದಾರೆ. ಇಡೀ ಭಾಷಣದಲ್ಲಿ ಖೂಬಾ ವಿರುದ್ಧ ಪ್ರಭು ಚವ್ಹಾಣ್ ವಾಗ್ದಾಳಿ ನಡೆಸಿದ್ದಾರೆ.

ನನ್ನ ಕೊಲೆ ಮಾಡಿ 6 ತಿಂಗಳಲ್ಲಿ ಉಪಚುನಾವಣೆಗೆ ಕುತಂತ್ರ ನಡೆಸಲಾಗುತ್ತಿದೆ. ರಸ್ತೆ ಮಧ್ಯ ನನಗೆ ಗುಂಡು ಹಾರಿಸಿ ಕೊಲೆ ಮಾಡಿಸಲು ಸಂಚು ರೂಪಿಸಲಾಗಿದೆ. ಕೇಂದ್ರ ಸಚಿವ ಭಗವಂತ ಖೂಬಾ ಬೆಂಬಲಿಗರಿಂದ ಈ ವಿಷಯ ಗೊತ್ತಾಗಿದೆ ಎಂದು ಸ್ವಪಕ್ಷೀಯ ಕೇಂದ್ರ ಸಚಿವ ಖೂಬಾ ವಿರುದ್ಧ ಚವ್ಹಾಣ್ ಕೆಂಡಾಮಂಡಲವಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net