More

    ‘ಸಲಾರ್’​ ಹೀರೋ ಕೈಯಲ್ಲಿವೆ ಎರಡು ಹೊಸ ಪ್ರಾಜೆಕ್ಟ್​ಗಳು!

    ಆಂಧ್ರಪ್ರದೇಶ: ‘ಕೆಜಿಎಫ್’ ಖ್ಯಾತಿಯ ಪ್ರಶಾಂತ್​ ನೀಲ್​ ನಿರ್ದೇಶನದ ಬಹುನಿರೀಕ್ಷಿತ ‘ಸಲಾರ್’​ ಮೂಲಕ ಅಭಿಮಾನಿಗಳು ಮತ್ತು ಸಿನಿಪ್ರಿಯರನ್ನು ಮನರಂಜಿಸಲು ಸಜ್ಜಾಗಿರುವ ರೆಬೆಲ್​ ಸ್ಟಾರ್​, ಡಾರ್ಲಿಂಗ್​ ಪ್ರಭಾಸ್​ ಕೈಯಲ್ಲಿ ಇದೀಗ ಎರಡು ದೊಡ್ಡ ಪ್ರಾಜೆಕ್ಟ್​ಗಳು ಸೇರಿವೆ ಎಂದು ಸಿನಿ ವರದಿ ಮಾಹಿತಿ ನೀಡಿದೆ.

    ಇದನ್ನೂ ಓದಿ: ಶ್ರೀರಂಗಪಟ್ಟಣ ದಸರಾ ಆಚರಣೆಗೆ ದಿನಾಂಕ ನಿಗದಿ: ಶಾಸಕರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ

    ಭಾರತೀಯ ಚಿತ್ರರಂಗದ ಸ್ಟಾರ್​ ನಟರ ಪೈಕಿ ಹೆಚ್ಚು ಖ್ಯಾತಿ ಗಳಿಸಿರುವ ನಟ ಪ್ರಭಾಸ್, ಜಾಗತಿಕವಾಗಿ ಸಹಸ್ರಾರು ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. ‘ಬಾಹುಬಲಿ’, ‘ಸಾಹೋ’ ನಂತರದಲ್ಲಿ ‘ಸಲಾರ್’​ ಮುಖೇನ ತೆರೆ ಮೇಲೆ ಮಾಸ್​ ಲುಕ್​ನಲ್ಲಿ ಕಾಣಿಸಿಕೊಳ್ಳಲಿರುವ ಪ್ರಭಾಸ್, ಚಿತ್ರ ಬಿಡುಗಡೆಗೂ ಮುನ್ನವೇ ಎರಡು ದೊಡ್ಡ ಬ್ಯಾನರ್​ನ ಸಿನಿಮಾಗಳಿಗೆ ಸಹಿ ಮಾಡಿದ್ದಾರೆ ಎಂದು ಹೇಳಲಾಗಿದೆ.

    ಹೆಸರಾಂತ ನಿರ್ದೇಶಕರೊಂದಿಗೆ ಪ್ರಭಾಸ್​ ಕೈಜೋಡಿಸಿದ್ದು, ಎರಡು ಚಿತ್ರಗಳಿಗೆ ಒಪ್ಪಿಗೆ ಸೂಚಿಸಿದ್ದಾರೆ. ಶೀಘ್ರವೇ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳಲಿದೆ ಎಂಬ ಸುದ್ದಿ ಇದೀಗ ಟಾಲಿವುಡ್​ ಅಂಗಳದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ.

    ಇದನ್ನೂ ಓದಿ:  ರೈತರ ಕೈಗಳಿಗೆ ತೆಂಗಿನ ಚಿಪ್ಪು ಕೊಟ್ಟ ರಾಜ್ಯಸರ್ಕಾರ: ಮಂಡ್ಯದಲ್ಲಿ ವಿಭಿನ್ನ ಹೋರಾಟ

    ಇತ್ತೀಚೆಗಷ್ಟೇ ‘ಸಲಾರ್’ ಡಿಸೆಂಬರ್ 22 ರಂದು ಜಾಗತಿಕವಾಗಿ ಬಹುತೇಕ ಚಿತ್ರಮಂದಿರಗಳಲ್ಲಿ​ ಬಿಡುಗಡೆಗೊಳ್ಳಲಿದೆ ಎಂದು ಹೊಂಬಾಳೆ ಫಿಲಂಸ್​ ಅಧಿಕೃತವಾಗಿ ಘೋಷಿಸಿದೆ. ಸದ್ಯ ಚಿತ್ರದ ಟ್ರೇಲರ್​ಗಾಗಿ ಪ್ರಭಾಸ್​ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ,(ಏಜೆನ್ಸೀಸ್).

    ಯುವಕರಲ್ಲಿ ಹೃದಯಾಘಾತ ಹೆಚ್ಚಳ; ವಿದ್ಯಾರ್ಥಿಗಳಿಗೆ ಸಿಪಿಆರ್​ ಕಲಿಸಿಕೊಡಲು ಆರೋಗ್ಯ ಇಲಾಖೆ ಚಿಂತನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts