ನಿಂತೋಯ್ತಾ ಸಲಾರ್​-2? ಪ್ರಭಾಸ್​-ಪ್ರಶಾಂತ್​ ನೀಲ್​ ನಡೆಯಿಂದ ಶುರುವಾಯ್ತು ಹೀಗೊಂದು ಅನುಮಾನ!

Salaar 2

ಹೈದರಾಬಾದ್​: ರೆಬೆಲ್​ ಸ್ಟಾರ್​ ಪ್ರಭಾಸ್ ಹಾಗೂ ಕೆಜಿಎಫ್​ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್​ ಚಿತ್ರದ ಮೊದಲ ಭಾಗ ಕಳೆದ ವರ್ಷ ಬಿಡುಗಡೆಯಾಗಿ ಯಶಸ್ವಿಯಾಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಚಿತ್ರವನ್ನು ಎರಡು ಭಾಗಗಳಲ್ಲಿ ಬಿಡುಗಡೆ ಮಾಡುವುದಾಗಿ ನಿರ್ದೇಶಕರು ಆರಂಭದಲ್ಲೇ ಘೋಷಿಸಿದರು. ಅಲ್ಲದೇ ಮೊದಲ ಭಾಗದ ಕೊನೆಯಲ್ಲಿ ಪಾರ್ಟ್-2 ಬೇಗ ಬರುತ್ತೆ ಅಂತ ಟೈಟಲ್ ಕೊಟ್ಟಿದ್ದಾರೆ. ಆದರೆ ಪರಿಸ್ಥಿತಿ ನೋಡಿದರೆ ಸದ್ಯಕ್ಕೆ ಪಾರ್ಟ್​-2 ಬರುವ ಲಕ್ಷಣಗಳು ಕಾಣುತ್ತಿಲ್ಲ.

ಪ್ರಶಾಂತ್ ನೀಲ್ ಅವರು ಜೂನಿಯರ್​ ಎನ್‌ಟಿಆರ್‌ ಜತೆ ಸಿನಿಮಾ ಮಾಡುವುದಾಗಿ ಈ ಹಿಂದೆಯೇ ಘೋಷಣೆ ಮಾಡಿದ್ದಾರೆ. ಇದೀಗ ಸಿನಿಮಾ ಶೂಟಿಂಗ್​ ಆರಂಭವಾಗುವ ಲಕ್ಷಣಗಳು ಕಾಣುತ್ತಿವೆ. ಮೈತ್ರಿ ಸಂಸ್ಥೆ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗಲಿದ್ದು, ಆಗಸ್ಟ್ 9 ರಂದು ಪೂಜಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಆರ್‌ಆರ್‌ಆರ್‌ ಸಿನಿಮಾದ ಸೂಪರ್​ ಸಕ್ಸಸ್​ನೊಂದಿಗೆ ಜೂ. ಎನ್‌ಟಿಆರ್‌ಗೆ ಜಾಗತಿಕ ಸ್ಟಾರ್ ಇಮೇಜ್ ಸಿಕ್ಕಿತು. ಸದ್ಯ ಎನ್​ಟಿಆರ್​ ‘ದೇವರ’ ಸಿನಿಮಾದಲ್ಲಿ ಬಿಜಿಯಾಗಿದ್ದಾರೆ. ಈ ಸಿನಿಮಾ ಕೂಡ ಎರಡು ಭಾಗಗಳಲ್ಲಿ ತಯಾರಾಗುತ್ತಿದೆ. ಮೊದಲ ಭಾಗದ ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದ್ದು, ಚಿತ್ರದ ಹಾಡುಗಳು ಸಹ ಒಂದೊಂದಾಗಿ ಬಿಡುಗಡೆಯಾಗುತ್ತಿದೆ.

ಇತ್ತ ಸಲಾರ್ 2 ಚಿತ್ರದ ನಿರ್ಮಾಪಕರು ಸಲಾರ್ 2 ಶೂಟಿಂಗ್​ ಆರಂಭಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಸಲಾರ್ ನಿರ್ಮಾಪಕರಿಗೆ ಪ್ರಭಾಸ್ ಅವರ ಡೇಟ್ಸ್ ಸಮಸ್ಯೆಯಾಗಿದೆ. ಸದ್ಯಕ್ಕೆ ಪ್ರಭಾಸ್​ ಅವರ ಡೇಟ್​ ಲಭ್ಯವಿಲ್ಲ. ಡಾರ್ಲಿಂಗ್ ಸದ್ಯ ಮಾರುತಿ ನಿರ್ದೇಶನದ ರಾಜಾಸಾಬ್ ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ.

ಸೆಪ್ಟೆಂಬರ್‌ನಿಂದ ಹನು ರಾಘವಪುಡಿ ನಿರ್ದೇಶನದ ಮತ್ತು ಮೈತ್ರಿ ಮೂವೀಸ್ ನಿರ್ಮಾಣದ ಚಿತ್ರದ ಶೂಟಿಂಗ್‌ನಲ್ಲಿ ಭಾಗವಹಿಸಲಿದ್ದಾರೆ. ಅನಿಮಲ್​ ಸಿನಿಮಾ ಖ್ಯಾತಿಯ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರ ಸ್ಪಿರಿಟ್ ಸಿನಿಮಾ ಕೂಡ ಮುಂದಿನ ವರ್ಷದ ಆರಂಭದಲ್ಲಿ ಶುರುವಾಗಲಿದೆ. ಅದರ ಬೆನ್ನಲ್ಲೇ ಕಲ್ಕಿ-2 ಸಿನಿಮಾ ತೆರೆಕಾಣಲಿದೆ.

ಇದನೆಲ್ಲ ಪರಿಗಣಿಸಿ ನೋಡಿದರೆ ಸದ್ಯಕ್ಕಂತೂ ಸಲಾರ್​ 2 ಸಿನಿಮಾ ಶೂಟಿಂಗ್​ ಆರಂಭವಾಗುವ ಲಕ್ಷಣಗಳು ಕಾಣುತ್ತಿಲ್ಲ. ಸದ್ಯ ಪ್ರಶಾಂತ್​ ನೀಲ್​ ಜೂ. ಎನ್​ಟಿಆರ್​ ಸಿನಿಮಾ ಕಡೆ ಮುಖ ಮಾಡಿದ್ದಾರೆ. ಈ ಸಿನಿಮಾ ಕೂಡ ಎರಡು ಭಾಗಗಳಲ್ಲಿ ಬರಲಿದ್ದು, ಎನ್​ಟಿಆರ್​ ಜತೆ ಎರಡೂ ಭಾಗಗಳನ್ನು ಮುಗಿಸಿದ ನಂತರ ಸಲಾರ್-2 ಲಭ್ಯವಾಗಲಿದೆ ಎಂದು ಹೇಳಲಾಗುತ್ತಿದೆ. (ಏಜೆನ್ಸೀಸ್​)

ನನ್ನನ್ನು ಬ್ಯಾನ್​ ಮಾಡದಂತೆ ಅಂದು ಪರಿ ಪರಿಯಾಗಿ ಬೇಡಿಕೊಂಡಿದ್ದೆ! ವಿರಾಟ್​ ಕೊಹ್ಲಿ ಶಾಕಿಂಗ್​ ಹೇಳಿಕೆ ವೈರಲ್​

ರೋಹಿತ್​ ಶರ್ಮ, ವಿರಾಟ್​ ಕೊಹ್ಲಿ ಬೇಕಾಗಿಲ್ಲ! ಆಶಿಶ್​ ನೆಹ್ರಾ ಅಚ್ಚರಿ ಹೇಳಿಕೆ ಹಿಂದಿದೆ ಈ ಕಾರಣ…

Share This Article

ಬಿಕ್ಕಳಿಕೆ ಏಕೆ ಬರುತ್ತದೆ? ಕಿರಿಕಿರಿ ಉಂಟುಮಾಡುವ ಅದನ್ನು ನಿಯಂತ್ರಿಸುವುದು ಹೇಗೆ?

 ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…

ಈ ದಿನಾಂಕದಂದು ಜನಿಸಿದವರು ದಾನದಲ್ಲಿ ಕರ್ಣನನ್ನು ಮೀರಿಸುತ್ತಾರೆ! ನೀವೂ ಹುಟ್ಟಿದ್ದು ಇದೇ ದಿನಾನಾ?

ಜ್ಯೋತಿಷ್ಯಶಾಸ್ತ್ರದಲ್ಲಿ ಸಂಖ್ಯಾಶಾಸ್ತ್ರವೂ ಒಂದು. ಇದರ ಪ್ರಕಾರ ವ್ಯಕ್ತಿಯ ಜನ್ಮ ದಿನಾಂಕವು ಅವನ ವ್ಯಕ್ತಿತ್ವದ ಬಗ್ಗೆ ಮತ್ತು…

ಗೋಲ್ಡನ್ ಅವರ್ ರಹಸ್ಯ: ಮುಂಜಾನೆ ಬೇಗ ಏಳುವುದರಿಂದ ಇದೆ 6 ಪ್ರಯೋಜನಗಳು

 ಬೆಂಗಳೂರು: ಮನೆಯಲ್ಲಿ ಕೆಲವರು ಸೂರ್ಯೋದಯಕ್ಕೂ ಮೊದಲೇ ಏಳುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಮುಂಜಾನೆ ಬೇಗ ಏಳುವುದನ್ನು ರೂಢಿ…