ಕಲ್ಕಿಯಲ್ಲಿ ಪ್ರಭಾಸ್​ ಜೋಕರ್​ನಂತೆ ಕಾಣ್ತಾರೆ; ಅರ್ಷದ್​ ವಾರ್ಸಿ ಹೇಳಿಕೆಗೆ ನೆಟ್ಟಿಗರು ಗರಂ

Untitled-design-2024-08-19T193513.704
Published on

ಮುಂಬೈ: ನಾಗ್ ಅಶ್ವಿನ್​​ ನಿರ್ದೇಶನದ ಕಲ್ಕಿ 2898 ಎಡಿ ಸಿನಿಮಾ ಜೂನ್​ 27ರಂದು ಬಿಡುಗಡೆಯಾಯಿತು. ಪ್ರಭಾಸ್​​, ಅಮಿತಾಭ್​ಬಚ್ಚನ್​, ಕಮಲ್​ಹಾಸನ್​, ದೀಪಿಕಾ ಪಡುಕೋಣೆ ಸೇರಿದಂತೆ ಪ್ರಮುಖ ಪಾತ್ರಗಳಲ್ಲಿ ದಿಶಾ ಪಟಾನಿ, ಸಾಸ್ವತ್ ಚಟರ್ಜಿ ಮತ್ತು ಶೋಭನಾ ನಟಿಸಿದ್ದಾರೆ. ಸಿನಿಮಾ ರಿಲೀಸ್​ ಆದ ಬಳಿಕ ಸೃಷ್ಟಿಸಿದ ದಾಖಲೆ ಬಗ್ಗೆ ಹೇಳಬೇಕಿಲ್ಲ ಎಲ್ಲರಿಗೂ ಗೊತ್ತೆ ಇದೆ.

ಈ ಸಿನಿಮಾವನ್ನು ಇಷ್ಟಪಡುವವರ ಪಟ್ಟಿ ಹೇಗಿದೆಯೋ ಅದೆ ಮಾದರಿಯಲ್ಲಿ ಕಲ್ಕಿ 2898 ಎಡಿ ಚಿತ್ರವನ್ನು ಇಷ್ಟಪಡದವರ ಪಟ್ಟಿಯೂ ಇದೆ. ಆ ಪಟ್ಟಿಯಲ್ಲಿ ಗೋಲ್​ಮಾಲ್​ ಸಿನಿಮಾದ ನಟ ಅರ್ಷದ್​ ವಾರ್ಸಿ ಕೂಡ ಇದ್ದಾರೆ. ಇತ್ತೀಚಿಗಿನ ಸಂದರ್ಶನವೊಂದರಲ್ಲಿ ಅವರಿಗೆ ನೀವು ಕೊನೆಯದಾಗಿ ನೋಡಿದ ಸಿನಿಮಾ ಯಾವುದು ಎಂದು ಕೇಳಲಾಗಿದೆ. ಅದಕ್ಕೆ ಉತ್ತರಿಸಿದ ಅವರು ಸೌತ್​ ಸಿನಿಮಾ ಬಗ್ಗೆ ಕಾಮೆಂಟ್​ ಮಾಡಿದ್ದಾರೆ.

ನನಗೆ ಇಷ್ಟವಾಗದ ಕಲ್ಕಿ ಸಿನಿಮಾವನ್ನು ನಾನು ನೋಡಿದೆ. ಸಿನಿಮಾದಲ್ಲಿ ಅಮಿತ್​ ಜೀ ಅವರ ನಟನೆ ಅದ್ಭುತವಾಗಿದೆ. ಅವರಲ್ಲಿರುವ ಶಕ್ತಿಯಲ್ಲಿ ಸ್ವಲ್ಪವಾದರೂ ನಮಗೆ ಸಿಕ್ಕಿದರೆ ಜೀವನವು ಉತ್ತಮವಾಗಿರುತ್ತದೆ. ಆದರೆ ಪ್ರಭಾಸ್​​ ನಟನೆಯನ್ನು ನೋಡಿ ನನಗೆ ನಿಜವಾಗಿಯೂ ಬೇಜರಾಗಿದೆ. ಪ್ರಭಾಸ್​ ಜೋಕರ್​ನಂತೆ ಕಾಣುತ್ತಿದ್ದಾರೆ. ನಾನು ಮ್ಯಾಡ್​ಮ್ಯಾಕ್ಸ್​​​, ಗಿಬ್ಸನ್​​​ ಅವರಂತೆ ನೋಡಲು ಇಷ್ಟಪಡುತ್ತೇನೆ. ಅವರು ಏಕೆ ಹೀಗೆ ನಟಿಸಿದ್ದಾರೆ ಎಂದು ನನಗೆ ಅರ್ಥವಾಗುತಿಲ್ಲ ಎಂದು ಹೇಳಿದ್ದಾರೆ.

ಅರ್ಷದ್​ ವಾರ್ಸಿ ಈ ಅಭಿಪ್ರಾಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆ ನೆಟ್ಟಿಗರು ಮತ್ತು ಅಭಿಮಾನಿಗಳು ಪ್ರಭಾಸ್​ ಅವರ ಬಳಿ ಅರ್ಷದ್​ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net