ನವದಹೆಲಿ: ವೈದ್ಯಕೀಯ ಕಾಲೇಜಿನಲ್ಲಿನ ಮಹಿಳಾ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣ ರಾಷ್ಟ್ರವ್ಯಾಪಿ ಆಕ್ರೋಶವನ್ನು ಹುಟ್ಟುಹಾಕಿದೆ. ಇದು ದೇಶಾದ್ಯಂತ ವ್ಯಾಪಕ ಪ್ರತಿಭಟನೆಗಳು ಮತ್ತು ಮುಷ್ಕರಗಳಿಗೆ ಕಾರಣವಾಗಿದೆ. ಈ ಕುರಿತು ಸೌರವ್ ಗಂಗೂಲಿ ಅವರು ನೀಡಿದ್ದ ಪ್ರತಿಕ್ರಿಯೆಗೆ ನೆಟ್ಟಿಗರು ಹಾಗೂ ಸಮಾಜದ ಹಲವು ವರ್ಗಗಳು ವಿರೋಧ ವ್ಯಕ್ತಪಡಿಸಿದರು.
ಇದನ್ನು ಓದಿ: ನಡುರಸ್ತೆಯಲ್ಲೇ ಪುಂಡರಿಂದ ಮಹಿಳೆಗೆ ಕಿರುಕುಳ; ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ಮಾಡಿದ್ದೇನು ಗೊತ್ತಾ?
ಈ ಘಟನೆ ಭೀಕರವಾಗಿದೆ ನಿಜವಾಗಿಯೂ ಭಯಾನಕವಾಗಿದೆ. ಎಲ್ಲೆಡೆಯೂ ಎಲ್ಲ ಸಾಧ್ಯ. ಹಾಗಾಗಿ ಅದಕ್ಕೆ ತಕ್ಕಂತೆ ಭದ್ರತಾ ವ್ಯವಸ್ಥೆ, ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಈ ಘಟನೆ ಎಲ್ಲಿಬೇಕಾದರೂ ನಡೆಯಬಹುದು ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು. ಎಲ್ಲವನ್ನೂ ಪ್ರತ್ಯೇಕ ಘಟನೆಯ ಮೇಲೆ ನಿರ್ಣಯಿಸಬೇಕು ಎಂದು ನಾನು ಭಾವಿಸುವುದಿಲ್ಲ. ಇದಕ್ಕಾಗಿ ಎಲ್ಲವೂ ಅಥವಾ ಎಲ್ಲರೂ ಸುರಕ್ಷಿತವಲ್ಲ ಎಂದು ಯೋಚಿಸಲು ಸಾಧ್ಯವಿಲ್ಲ ಎಂದರು.
ಇಂತಹ ಅಪಘಾತಗಳು ಪ್ರಪಂಚದಾದ್ಯಂತ ನಡೆಯುತ್ತವೆ. ಹಾಗಾಗಿ ಹೆಣ್ಣುಮಕ್ಕಳು ಸುರಕ್ಷಿತರಲ್ಲ ಎಂದು ಭಾವಿಸುವುದು ತಪ್ಪು. ಪಶ್ಚಿಮ ಬಂಗಾಳ ಮಾತ್ರವಲ್ಲ ಭಾರತದ ಎಲ್ಲೆಡೆ ಮಹಿಳೆಯರು ಸುರಕ್ಷಿತವಾಗಿದ್ದಾರೆ. ನಾವು ವಾಸಿಸುವ ಸ್ಥಳವು ಅತ್ಯುತ್ತಮ ಸ್ಥಳವಾಗಿದೆ. ಒಂದು ಘಟನೆಯಿಂದ ಇಡೀ ವ್ಯವಸ್ಥೆಯನ್ನು ನಿರ್ಣಯಿಸಬಾರದು ಎಂದು ಹೇಳಿದರು.
ಸೌರವ್ ಅವರ ಹೇಳಿಕೆ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ವ್ಯತಿರಿಕ್ತವಾ ಪ್ರತಿಕ್ರಿಯಿಸಿದ್ದಾರೆ. ಕಳೆದ ವಾರ ನಾನು ಮಾತನಾಡಿದ್ದೆ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಸೌರವ್ ಗಂಗೂಲಿ ಸ್ಪಷ್ಟನೆ ನೀಡಿದ್ದಾರೆ. ಇದೊಂದು ಭಯಾನಕ ಘಟನೆ. ಮುಂದಿನ ದಿನಗಳಲ್ಲಿ ಯಾರೂ ಈ ರೀತಿ ಮಾಡದ ರೀತಿಯಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ತನಿಖೆ ನಡೆಯುತ್ತಿದ್ದು ತಪ್ಪಿತಸ್ಥರನ್ನು ಗುರುತಿಸಿ ಶಿಕ್ಷೆ ವಿಧಿಸುತ್ತಾರೆ ಎಂದು ಭಾವಿಸುತ್ತೇನೆ. ಈ ಘಟನೆ ಜಗತ್ತಿನಲ್ಲಿ ಎಲ್ಲಿಯೆ ನಡೆದಿದ್ದರೂ ಜನರು ಹೀಗೆಯೇ ಪ್ರತಿಭಟಿಸುತ್ತಿದ್ದರು ಎಂದು ಹೇಳಿದರು. (ಏಜೆನ್ಸೀಸ್)
ಮುಡಾ ಹಗರಣ: ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮುಂದೂಡಿದ ಹೈಕೋರ್ಟ್