

ಹೈದರಾಬಾದ್: ಟಾಲಿವುಡ್ ಸೂಪರ್ ಸ್ಟಾರ್ ಪ್ರಭಾಸ್ ಮೂರ್ನಾಲ್ಕು ಚಿತ್ರ(Cinema)ಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಬಹು ನಿರೀಕ್ಷಿತ 'ಫೌಜಿ' ಸಿನಿಮಾದ ಶೂಟಿಂಗ್ ಕೂಡ ಶುರುವಾಗಿದೆ.
ಪ್ರಭಾಸ್ ನಾಯಕನಾಗಿ ಹನು ರಾಘವಪುಡಿ ನಿರ್ದೇಶನದಲ್ಲಿ ತಯಾರಾಗಲಿರುವ ಚಿತ್ರಕ್ಕೆ ‘ಫೌಜಿ’ ಎಂದು ಶೀರ್ಷಿಕೆ ಇಡಲಾಗಿದೆ. ಫೌಜಿ ಎಂದರೆ ಸೈನಿಕ. ಈ ಚಿತ್ರದಲ್ಲಿ ಪ್ರಭಾಸ್ ಸೈನಿಕನಾಗಿ ನಟಿಸುತ್ತಿದ್ದಾರೆ. ಹಾಗಾಗಿ ಈ ಟೈಟಲ್ ಸರಿಯೊಂದುತ್ತದೆ ಎಂಬುದು ಚಿತ್ರತಂಡದ ಅಭಿಪ್ರಾಯ.
ಪ್ರಸ್ತುತ ಇದು ಈ ಚಿತ್ರದ ವರ್ಕಿಂಗ್ ಶೀರ್ಷಿಕೆಯಾಗಿದೆ. ಆದರೆ ಇನ್ನೂ ಉತ್ತಮ ಶೀರ್ಷಿಕೆ ಬಂದರೆ, ಅದನ್ನು ಸರಿಪಡಿಸುವ ಸಾಧ್ಯತೆ ಇದೆ. ಇಲ್ಲವಾದರೆ ‘ಫೌಜಿ’ ಶೀರ್ಷಿಕೆ ಅಂತಿಮಗೊಳಿಸಬಹುದು.
ಇದು 1947ಕ್ಕಿಂತ ಮೊದಲು ನಡೆಯುವ ಕಥೆ. ಪ್ರಭಾಸ್ ಬ್ರಿಟಿಷ್ ಸೇನೆಯ ಸೈನಿಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಆದರೆ ಪ್ರಭಾಸ್ ಈಗಾಗಲೇ ಸತತ ಮೂರ್ನಾಲ್ಕು ಚಿತ್ರಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಮತ್ತೊಂದೆಡೆ ಫೌಜಿ ಸಿನಿಮಾದ ಶೂಟಿಂಗ್ ಕೂಡ ಶುರುವಾಗಿರುವುದರಿಂದ ಈ ಸಿನಿಮಾದಿಂದ ಒಂದು ಅಪ್ಡೇಟ್ ಸಿಕ್ಕಿದೆ. ಪ್ರಭಾಸ್ ಹುಟ್ಟುಹಬ್ಬದ ಸಂದರ್ಭದಲ್ಲಿ ಟ್ರೀಟ್ ರಿವೀಲ್ ಆಗಲಿದೆ.
ಪ್ರಭಾಸ್ ಸದ್ಯ 'ರಾಜಾ ಸಾಬ್', 'ಫೌಜಿ', 'ಸಲಾರ್ 2', 'ಕಲ್ಕಿ 2' ಮತ್ತು 'ಸ್ಪಿರಿಟ್' ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಮುಂದಿನ ವರ್ಷದ ಬೇಸಿಗೆಯಲ್ಲಿ ಬಿಡುಗಡೆಯಾಗಲಿರುವ ಮಾರುತಿ ನಿರ್ದೇಶನದ ‘ದಿ ರಾಜಾ ಸಾಬ್’ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ಅವರು ‘ಫೌಜಿ’ ಚಿತ್ರೀಕರಣವೂ ಆರಂಭವಾಗಿರುವುದರಿಂದ ಸದ್ಯಕ್ಕೆ ಪ್ರಭಾಸ್ ಗೆ ಡೇಟ್ಸ್ ಇಲ್ಲದ ಕಾರಣ ಮೊದಲ ಶೆಡ್ಯೂಲ್ ನಲ್ಲೇ ಬೇರೆ ದೃಶ್ಯಗಳನ್ನು ಚಿತ್ರೀಕರಿಸುತ್ತಿದ್ದಾರೆ ನಿರ್ದೇಶಕರು. ಆದರೆ ಇದೇ ತಿಂಗಳ 23ರಂದು ತಮ್ಮ ಹುಟ್ಟುಹಬ್ಬದ ನಂತರ ಪ್ರಭಾಸ್ ಫೌಜಿ ಶೂಟಿಂಗ್ ಗೆ ಎಂಟ್ರಿ ಕೊಡಲಿದ್ದಾರೆ ಎಂದು ವರದಿಯಾಗಿದೆ. ಅಲ್ಲದೇ ಫೌಜಿ ಚಿತ್ರಕ್ಕೆ 2, 3 ವಾರ ಕಾಲಾವಕಾಶ ಸಿಗಲಿದೆಯಂತೆ.