Flight merge: ಏರ್ ಇಂಡಿಯಾ-ವಿಸ್ತಾರಾ ವಿಲೀನಕ್ಕೆ ಮುಹೂರ್ತ ಫಿಕ್ಸ್​..ವಿಸ್ತಾರಾ ಕೋಡ್‌ ಬದಲಾವಣೆ?

Air India
Published on

ನವದೆಹಲಿ: ವಿಮಾನಯಾನ ಕ್ಷೇತ್ರದ ಅತಿದೊಡ್ಡ ವಿಲೀನವು(Flight merge) ಶೀಘ್ರ ದಲ್ಲೇ ಸಂಭವಿಸಲಿದೆ. ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾ ಮತ್ತು ಸಿಂಗಾಪುರ್ ವಿಮಾನಯಾನ ಸಂಸ್ಥೆ ವಿಸ್ತಾರಾ ವಿಲೀನಗೊಳ್ಳಲಿದೆ. ಈ ವಿಲೀನದ ನಂತರವೂ ಪ್ರಯಾಣಿಕರಿಗೆ ಎಲ್ಲಾ ಸೌಲಭ್ಯಗಳು ಸುಗಮವಾಗಿ ಸಿಗುತ್ತವೆ. ಅಂದರೆ ಪ್ರಯಾಣಿಕರಿಗೆ ಒದಗಿಸುವ ಸೇವೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.

ಏರ್ ಇಂಡಿಯಾ-ವಿಸ್ತಾರಾ ವಿಲೀನವು ನವೆಂಬರ್ 12 ರಂದು ನಡೆಯಲಿದೆ. ವಿಲೀನದ ನಂತರ ವಿಸ್ತಾರಾ ವಿಮಾನದ ಕೋಡ್ ಬದಲಾಗಲಿದೆ. ಏರ್ ಇಂಡಿಯಾ ಈ ಮಾಹಿತಿ ನೀಡಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವ ಮೂಲಕ ಪ್ರಯಾಣಿಕರಿಗೆ ಮಾಹಿತಿ ನೀಡಿದೆ.

ಇನ್ನು ವಿಮಾನದ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ವಿಲೀನದ ನಂತರ ವಿಸ್ತಾರಾ ವಿಮಾನ ಕೋಡ್‌ನಲ್ಲಿ ಬದಲಾವಣೆಯಾಗಲಿದೆ. ಆಗ ವಿಸ್ತಾರಾರದ ಫ್ಲೈಟ್ ಕೋಡ್ ಏರ್ ಇಂಡಿಯಾ ಫ್ಲೈಟ್ ಕೋಡ್‌ನ ವಿಶೇಷ 4 ಅಂಕಿಗಳೊಂದಿಗೆ ಪ್ರಾರಂಭವಾಗುತ್ತದೆ. ಈ 4 ಅಂಕಿಯ ಸಂಖ್ಯೆಯ ಮೊದಲ ಅಂಕಿಯು '2' ಆಗಿರುತ್ತದೆ.

ಇದಲ್ಲದೆ, ವಿಲೀನದ ನಂತರ ಕ್ಲಬ್ ವಿಸ್ತಾರಾ ಸದಸ್ಯರನ್ನು ಏರ್ ಇಂಡಿಯಾದ 'ಫ್ಲೈಯಿಂಗ್ ರಿಟರ್ನ್ಸ್' ಗೆ ವರ್ಗಾಯಿಸಲಾಗುವುದು. ಅದೇ ಸಮಯದಲ್ಲಿ, ವಿಸ್ತಾರಾ ಅವರ 'ಫ್ಲೈಯಿಂಗ್ ರಿಟರ್ನ್ಸ್' 'ಮಹಾರಾಜ ಕ್ಲಬ್' ಆಗಿ ಬದಲಾಗುತ್ತದೆ ಎಂದು ಏರ್ ಇಂಡಿಯಾ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net