ಎಸ್‌ಡಿಎಂಸಿಗೆ ಪ್ರಭಾಕರ ಆಚಾರ್ಯ ಅಧ್ಯಕ್ಷ

byn
Published on

ಬೈಂದೂರು: ಮೆಟ್ಟಿನಹೊಳೆ ಸರ್ಕಾರಿ ಪ್ರೌಢಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರಾಗಿ ಪ್ರಭಾಕರ ಆಚಾರ್ಯ ಗೋರ್ಕಲ್ ಆಯ್ಕೆಯಾಗಿದ್ದಾರೆ. ಕಾಲ್ತೋಡು ಗ್ರಾಪಂ ಸದಸ್ಯೆ ಶಾರದಾ ಸೀತಾರಾಮ ಕುಲಾಲ್ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಸದಸ್ಯರಾಗಿ ಶ್ಯಾಮಲಾ ಮೆಟ್ಟಿನಹೊಳೆ, ಪಾರ್ವತಿ ಹರವರಿ, ವಾಲತಿ ಆಚಾರ್ ಅಲ್ಸಾಡಿ, ಬೇಬಿ ಮೊಗವೀರ ರಾಗಿಹಕ್ಲು, ಮುತ್ತು ಬೇಲಾರಿ ಬೋಳಂಬಳ್ಳಿ, ನಾಗೇಂದ್ರ ಕೊಠಾರಿ ರಾಗಿಹಕ್ಲು, ಚಂದ್ರ ದೇವಾಡಿಗ ಹೇರಂಜಾಲು, ದಿನೇಶ ಪೂಜಾರಿ ಕಾಲ್ತೋಡು ಆಯ್ಕೆಯಾದರು.

ಪ್ರಭಾರ ಮುಖ್ಯ ಶಿಕ್ಷಕ ಕರುಣಾಕರ ಶೆಟ್ಟಿ, ಪ್ರಾಥಮಿಕ ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಉವಾ ಬಿ ಎನ್., ಶಿಕ್ಷಕ ತಾಜುದ್ದೀನ್, ದೈಹಿಕ ಶಿಕ್ಷಣ ಶಿಕ್ಷಕ ರಾಜೀವ ಶೆಟ್ಟಿ ಮತ್ತು ಗೌರವ ಶಿಕ್ಷಕಿಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net