

ಬೆಂಗಳೂರಿನಲ್ಲಿ ಇಂದು (26) ಮಾತನಾಡಿದ ಸಚಿವ ಕೆ ಎನ್ ರಾಜಣ್ಣ, ಆಗಸ್ಟ್ ತಿಂಗಳಲ್ಲಿ ಕ್ರಾಂತಿ ನಡೆಯಲಿದೆ ಎಂದು ಈ ಬಗ್ಗೆ ಮಹತ್ವದ ಸುಳಿವನ್ನು ನೀಡಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ ಪವರ್ ಸೆಂಟರ್‌ಗಳು ಹೆಚ್ಚಾಗಿವೆ. ಹಾಗಾಗಿ ರಾಜ್ಯ ರಾಜಕಾರಣದಲ್ಲಿ ಸೆಪ್ಟೆಂಬರ್ ಬಳಿಕ ಭಾರೀ ಬದಲಾವಣೆ ಆಗಲಿದೆ ಎಂದು ಸಹಕಾರ ಇಲಾಖೆ ಸಚಿವ ಕೆ. ಎನ್. ರಾಜಣ್ಣ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಆಗಸ್ಟ್ ತಿಂಗಳಲ್ಲಿ ಕ್ರಾಂತಿ ನಡೆಯಲಿದೆ ಎಂದು ಹೇಳಿದ್ದೇನೆ. ಯಾವ ಕ್ರಾಂತಿ ಅಂತ ಮೊದಲೇ ಹೇಳಿದ್ರೆ ಇರುವ ಆಸಕ್ತಿ ಹೋಗಿ ಬಿಡುತ್ತದೆ ಎಂದು ಹೇಳುವ ಮೂಲಕ ಕುತೂಹಲ ಮೂಡಿಸಿದ್ದಾರೆ. ಸರ್ಕಾರದ ಮಟ್ಟದ ಕ್ರಾಂತಿನಾ ಎಂಬ ವಿಚಾರಕ್ಕೆ, ಯಾವ ರೀತಿ ಬೇಕಾದ್ರೂ ಯೋಚನೆ ಮಾಡಬಹುದು. ರಾಜಕಾರಣ ಅನ್ನೋದು ನಿಂತ ನೀರಲ್ಲ. ಅದು ಸದಾ ಕಾಲ ಹರಿಯುವ ನೀರು. ಹಳ್ಳ ಹೇಗೆ ಇರುತ್ತೋ ಹಾಗೇ ನೀರು ಹಾಗೇ ಹೋಗುತ್ತೆ. ರಾಜಕಾರಣ ಅನ್ನೋದು ಅಷ್ಟೇ. ಘಟನೆಗಳು ಸಂದರ್ಭಕ್ಕೆ ತಕ್ಕಂತೆ ಆಧಾರಿಸುತ್ತವೆ. ಅದರ ಆಧಾರರ ಮೇಲೆ ಮುಂದಿನ ಚಟುವಟಿಕೆ ಆಗುತ್ತವೆ ಎಂದು ಮಾರ್ಮಿಕವಾಗಿ ಉತ್ತರ ನೀಡಿದ್ದಾರೆ.
2013ರಲ್ಲಿ ಇದ್ದ ಹಾಗೆ ಸಿಎಂ ಸಿದ್ದರಾಮಯ್ಯ ಈ ಬಾರಿ ಇಲ್ಲ ಎಂಬ ಶಾಸಕರ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಏನ್ ಮಾಡೋದು ಪವರ್ ಸೆಂಟರ್‌ಗಳು ಜಾಸ್ತಿಯಾಗಿವೆ. ಒಂದು ಎರಡು ಮೂರು ಲೆಕ್ಕಕ್ಕೆ ಇಲ್ಲದಷ್ಟು ಆಗಿವೆ. 2013 ರಿಂದ 2018ವರೆಗೆ ಒಂದೇ ಪವರ್ ಸೆಂಟರ್ ಇತ್ತು. ಹೀಗಾಗಿ ಅವರಿಗೆ ಯಾವುದೇ ಒತ್ತಡ ಇರಲಿಲ್ಲ. ಆದರೆ ಈಗ ಪವರ್ ಸೆಂಟರ್ ಜಾಸ್ತಿ ಆಗಿ ಜಂಜಾಟ ಹೆಚ್ಚಾಗಿದೆ ಎಂದಿದ್ದಾರೆ.
(ಏಜೆನ್ಸೀಸ್)
ಗ್ಯಾರಂಟಿ ಕೊಟ್ಟಿದ್ದರಿಂದ ರಾಜ್ಯ ಸರ್ಕಾರದ ಮೇಲೆ ಆರ್ಥಿಕ ಹೊರೆ ಇದೆ' ಎಂದು ರಾಜಣ್ಣ ಹೇಳಿದರು. 'ರಾಜ್ಯದಾದ್ಯಂತ ವಿವಿಧ ಕಾಮಗಾರಿಗಳಿಗೆ ಮುಖ್ಯಮಂತ್ರಿ ಚಾಲನೆ ಕೊಡುತ್ತಿದ್ದಾರೆ. ಹಣ ಇಲ್ಲದೇ ಇದ್ದರೆ ಕಾಮಗಾರಿಗಳಿಗೆ ಚಾಲನೆ ನೀಡಲು ಆಗುತ್ತಿತ್ತೆ' ಎಂದು ಪ್ರಶ್ನಿಸಿದರು. ಬೇಡಿಕೆ ತಕ್ಕಂತೆ ಅನುದಾನ ಸಿಕ್ಕಿಲ್ಲವೆಂದು ಶಾಸಕರಿಗೆ ಬೇಸರ ಇರಬಹುದು. ಆರ್ಥಿಕ ಲಭ್ಯತೆಗೆ ಅನುಗುಣವಾಗಿ ಯಾವುದೇ ತಾರತಮ್ಯ ಇಲ್ಲದೆ ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನ ಸಿಗುತ್ತಿದೆ. ಕ್ಷೇತ್ರಕ್ಕೆ ಅನುದಾನ ಕೊಟ್ಟಿಲ್ಲ ಎನ್ನುವುದು ಸತ್ಯಕ್ಕೆ ದೂರವಾದ ಮಾತು ಎಂದಿದ್ದಾರೆ.