ವಾರಿಯರ್ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ; ಮುಂಬರುವ ಚಿತ್ರದ ಪೋಸ್ಟರ್‌ ಬಿಡುಗಡೆ| Rashmika Mandanna

rashmika
Published on

Rashmika Mandanna: ಇತ್ತೀಚೆಗೆ ಧನುಷ್ ಮತ್ತು ನಾಗಾರ್ಜುನ್ ಅವರೊಂದಿಗೆ ಆಕ್ಷನ್ ಕ್ರೈಮ್ ಥ್ರಿಲ್ಲರ್ ಚಿತ್ರ 'ಕುಬೇರಾ'ದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ನಟಿ ರಶ್ಮಿಕಾ ಮಂದಣ್ಣ ಇಂದು (26) ತಮ್ಮ ಅಭಿಮಾನಿಗಳಿಗೆ ಗುಡ್​ನ್ಯೂಸ್​ ನೀಡಿದ್ದಾರೆ. ಇನ್ಸ್ಟಾಗ್ರಾಮ್ ಹ್ಯಾಂಡಲ್ ಮೂಲಕ, ಅನಿಮಲ್ ನಟಿ ತಮ್ಮ ಮುಂಬರುವ ಹೆಸರಿಡದ ಚಿತ್ರದ ಮೊದಲ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ. ಪೋಸ್ಟರ್‌ನಲ್ಲಿ ರಶ್ಮಿಕಾ ಕೈಯಲ್ಲಿ ಆಯುಧವನ್ನು ಹಿಡಿದುಕೊಂಡು ಉಗ್ರ ನೋಟದಲ್ಲಿ ಇರುವುದನ್ನು ಕಾಣಬಹುದಾಗಿದೆ.

ಇತ್ತೀಚೆಗೆ ರಿಲೀಸ್ ಅವರ ನಟನೆಯ ‘ಕುಬೇರ’ ಸಿನಿಮಾ 100 ಕೋಟಿ ರೂಪಾಯಿ ಕ್ಲಬ್ ಸೇರಿದೆ. ಇದೇ ಖುಷಿಯಲ್ಲಿ ಅವರು ಮತ್ತೊಂದು ಸಿನಿಮಾ ಘೋಷಿಸಲು ರೆಡಿ ಆಗಿದ್ದಾರೆ. ಇದೊಂದು ಮಹಿಳಾ ಪ್ರಧಾನ ಚಿತ್ರವಾಗಿದ್ದು, ಅವರು ವಾರಿಯರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಟೈಟಲ್ ಜೂನ್ 27 ರಂದು ರಿವೀಲ್ ಆಗಲಿದೆ.

ರಶ್ಮಿಕಾ ಅಸ್ಪಷ್ಟವಾದ ಪೋಸ್ಟರ್ ಒಂದನ್ನು ರಿಲೀಸ್ ಮಾಡಿದ್ದು, ಈ ಪೋಸ್ಟರ್ ಅಭಿಮಾನಿಗಳಲ್ಲಿ ಸಾಕಷ್ಟು ಗಮನ ಸೆಳೆದಿದೆ.

ಈ ಸಿನಿಮಾವನ್ನು ಅನ್​ಫಾರ್ಮುಲಾ ಫಿಲ್ಮ್ಸ್​ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ಈ ಸಿನಿಮಾ ಬಗ್ಗೆ ಹಾಗೂ ನಿರ್ಮಾಣ ಸಂಸ್ಥೆ ಬಗ್ಗೆ ಹೆಚ್ಚಿನ ಮಾಹಿತಿ ಬಿಡುಗಡೆಯಾಗಿಲ್ಲ. ಚಿತ್ರದ ಟೈಟಲ್ ಜೊತೆ ಈ ವಿಚಾರವೂ ರಿವೀಲ್ ಆಗುವ ಸಾಧ್ಯತೆ ಇದೆ.

ಪೋಸ್ಟರ್​ನಲ್ಲಿ ಕಾಡಿನ ಮಧ್ಯೆ ರಶ್ಮಿಕಾ ನಿಂತಿದ್ದು, ಅವರು ವಾರಿಯರ್ ರೀತಿ ಕಾಣಿಸಿದ್ದಾರೆ. ಅವರ ಕೈಯಲ್ಲಿ ಯಾವುದೋ ಆಯುಧ ರೀತಿಯ ವಸ್ತುವಿದೆ. ಈ ಸಿನಿಮಾದ ಪೋಸ್ಟರ್ ಹಾಗೂ ಟೈಟಲ್ ಜೂನ್ 27ರ ಮುಂಜಾನೆ 10:08 ಕ್ಕೆ ರಿಲೀಸ್ ಆಗಲಿದೆ.

(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net