ನಟ ಶಾರುಖ್​ ರೀಲ್​ನಲ್ಲಿ ದೇವದಾಸ, ರಾಹುಲ್ ಗಾಂಧಿ ನಿಜ ಜೀವನದ ದೇವದಾಸ: ಬಿಜೆಪಿ ಲೇವಡಿ

rahul gandhi
Published on

ಪಾಟ್ನಾ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ನಿಜ ಜೀವನದ ದೇವದಾಸ್ ಎಂದು ಲೇವಡಿ ಮಾಡುವ ಮಾಡುವ ಮೂಲಕ ಬಿಹಾರದ ಪಾಟ್ನಾದಲ್ಲಿ ಪೋಸ್ಟರ್‌ಗಳನ್ನು ಹಾಕಲಾಗಿದೆ.

ಪ್ರತಿಪಕ್ಷಗಳ ಸಭೆಗೂ ಮುನ್ನ ಇಲ್ಲಿನ ಬಿಜೆಪಿ ಕಚೇರಿಯ ಹೊರಗೆ ಈ ಪೊಸ್ಟರ್​ಗಳನ್ನು ಹಾಕಲಾಗಿದ್ದು, ಬಾಲಿವುಡ್​ ನಟ ಶಾರುಖ್​ ಖಾನ್​ ರೀಲ್​ ದೇವದಾಸ್​ರಾದರೆ, ರಾಹುಲ್​ ಗಾಂಧಿ ನಿಜ ಜೀವನದಲ್ಲಿ ದೇವದಾಸ್​ರಾಗಿದ್ದಾರೆ ಎಂದು ಬರೆಯಲಾಗಿದೆ. 

ಇದನ್ನೂ ಓದಿ: ಬಸ್​​ಗಳು ರಶ್ ಆಗಿ ಸ್ವಲ್ಪ ಸಮಸ್ಯೆಯಾಗಿದೆ, ತಿಂಗಳೊಳಗೆ ಇದೆಲ್ಲಾ ಸರಿಹೋಗಲಿದೆ: ಸಚಿವ ರಾಮಲಿಂಗಾ ರೆಡ್ಡಿ

ಅಲ್ಲದೇ, ಮಮತಾ ದೀದಿ ಬಂಗಾಳ ತೊರೆಯುವಂತೆ, ಕೇಜ್ರಿವಾಲ್​ ದೆಹಲಿ ಮತ್ತು ಪಂಜಾಬ್ ತೊರೆಯುವಂತೆ, ಲಾಲು ಮತ್ತು ನಿತೀಶ್ ಕುಮಾರ್​ ಬಿಹಾರ ತೊರೆಯುವಂತೆ, ಅಖಿಲೇಶ್ ಯಾದವ್​​ ಉತ್ತರ ಪ್ರದೇಶವನ್ನು ತೊರೆಯುವಂತೆ ಮತ್ತು ಸ್ಟಾಲಿನ್ ತಮಿಳುನಾಡನ್ನು ತೊರೆಯುವಂತೆ ರಾಹುಲ್​ ಗಾಂಧಿಗೆ ಹೇಳಿದ್ದಾರೆ. ರಾಹುಲ್​ರಾಜಕೀಯವನ್ನು ತೊರೆಯಲಿ ಎಂದು ಹೇಳುವ ದಿನಗಳು ದೂರವಿಲ್ಲ ಎಂದು ಪೋಸ್ಟರ್‌​​ನಲ್ಲಿ ಉಲ್ಲೇಖಿಸಲಾಗಿದೆ.

ಬಿಜೆಪಿಯನ್ನು ಎದುರಿಸಲು ಒಮ್ಮತಕ್ಕೆ ಬರುವ ಉದ್ದೇಶದಿಂದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಆಯೋಜಿಸಿರುವ ಪ್ರತಿಪಕ್ಷ ನಾಯಕರ ಸಭೆಯಲ್ಲಿ ಭಾಗವಹಿಸಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶುಕ್ರವಾರ ಪಾಟ್ನಾಕ್ಕೆ ಆಗಮಿಸಿದ್ದ ವೇಳೆ ಈ ಪೋಸ್ಟರ್‌ಗಳನ್ನು ಅಳವಡಿಸಲಾಗಿದೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net