More

    ಬಾಲಕಿಗೆ ಹಿಗ್ಗಾಮುಗ್ಗಾ ಥಳಿಸಿದ ಪಾಪಿ; ಹುಡುಗಿ ನೋವಿನಲ್ಲಿ ನರಳುತ್ತಿದ್ದರೂ ದೆವ್ವದ ಭಯದಿಂದ ದೂರ ನಿಂತ ಜನ

    ಮಾಟ, ಮಂತ್ರ, ದೆವ್ವ ಬಿಡಿಸುವುದು ಸೇರಿ ಈ ತರಹದ ಮೂಢನಂಬಿಕೆಗಳಿಂದ ಅದೆಷ್ಟೋ ಅವಾಂತರಗಳು ಆಗಿದ್ದರೂ ಅದಿನ್ನೂ ಸಮಾಜದಿಂದ ಪೂರ್ತಿ ತೊಲಗಿಲ್ಲ. ಈಗಲೂ ಅನೇಕರು ಅಂಥ ನಂಬಿಕೆಗಳನ್ನು ಆಚರಿಸಿಕೊಂಡು ಬರುತ್ತಿದ್ದಾರೆ.

    ಇದೀಗ ಮಧ್ಯಪ್ರದೇಶದ ಭೋಪಾಲ್​​ನಿಂದ ಇನ್ನೊಂದು ಅಂಥದ್ದೇ ಘಟನೆ ಬೆಳಕಿಗೆ ಬಂದಿದೆ. ಅದರ ವಿಡಿಯೋ ಸಿಕ್ಕಾಪಟೆ ವೈರಲ್​ ಆಗಿದೆ. ವ್ಯಕ್ತಿಯೋರ್ವ ಬಾಲಕಿಗೆ ದೆವ್ವ ಬಿಡಿಸುವ ನೆಪದಲ್ಲಿ ಹಿಗ್ಗಾಮುಗ್ಗಾ ಥಳಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್​ ಆಗುತ್ತಿದ್ದಂತೆ ರಾಷ್ಟ್ರೀಯ ಮಹಿಳಾ ಆಯೋಗ (ಎನ್​ಸಿಡಬ್ಲ್ಯೂ) ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದೆ.

    ಮಧ್ಯಪ್ರದೇಶದ ಸಾಟ್ನಾ ಜಿಲ್ಲೆಯಲ್ಲಿರುವ ನಾಡೋ ಗ್ರಾಮದಲ್ಲಿ ಹಾಕಲಾಗಿದ್ದ ದುರ್ಗಾ ಪೂಜೆ ಪೆಂಡಾಲ್​​ನಲ್ಲಿ ವ್ಯಕ್ತಿಯೋರ್ವ ಅಪ್ರಾಪ್ತೆಗೆ ಮನಸಿಗೆ ಬಂದಂತೆ ಹೊಡೆದಿದ್ದಾಗಿ ಭೀಮ್ ಆರ್ಮಿ ಸದಸ್ಯ ಸುನಿಲ್​ ಅಸ್ಟೇ ತಿಳಿಸಿದ್ದಾರೆ. ‘ನೀನು ಯಾರು ಹೇಳು?’ ಎನ್ನುತ್ತ ಪುಟ್ಟ ಹುಡುಗಿಗೆ ಆತ ಹೊಡೆಯುತ್ತಿದ್ದರೆ ಆಕೆ ನೋವಿನಲ್ಲಿ ನರಳುವುದು ವಿಡಿಯೋದಲ್ಲಿ ಕಾಣಿಸುತ್ತದೆ. ಬಾಲಕಿಗೆ ದೆವ್ವ ಮೆಟ್ಟಿಕೊಂಡಿದೆ. ಅದನ್ನು ಬಿಡಿಸುವುದಕ್ಕೋಸ್ಕರ ಹೀಗೆ ಹೊಡೆಯಲಾಗುತ್ತಿದೆ ಎಂದು ವರದಿಯಾಗಿದೆ. ಸುತ್ತಲಿದ್ದವರೂ ನೋಡಿಕೊಂಡು ಸುಮ್ಮನೆ ನಿಂತಿದ್ದಾರೆ ಬಿಟ್ಟರೆ ಯಾರೂ ಆಕೆಯ ಸಹಾಯಕ್ಕೆ ಹೋಗಲಿಲ್ಲ. ಇದನ್ನೂ ಓದಿ: ಹೆಣ್ಣುಮಕ್ಕಳ ಬಳಿ ಬಂದು ಪ್ಯಾಂಟ್​ ಬಿಚ್ಚುತ್ತಿದ್ದ ಯುವಕನ ಬೆನ್ನತ್ತಿ ಹೋದ ಪೊಲೀಸರೇ ತಬ್ಬಿಬ್ಬು!

    ಘಟನೆ ಬಗ್ಗೆ ರಾಷ್ಟ್ರೀಯ ಮಹಿಳಾ ಆಯೋಗ, ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್​ಸಿಪಿಸಿಆರ್​)ಕ್ಕೆ ದೂರು ನೀಡಿದ್ದು, ಕಠಿಣ ಕ್ರಮಕ್ಕೆ ಒತ್ತಾಯಿಸಿದೆ. (ಏಜೆನ್ಸೀಸ್​)

    ಜಮ್ಮುಕಾಶ್ಮೀರದಲ್ಲಿ ಕಿಡಿ ಹೊತ್ತಿಸಿದ ಮೆಹಬೂಬಾ ಮುಫ್ತಿ; ಪ್ರತಿಭಟನಾ ನಿರತ ಮಹಿಳೆಯ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts