ಚೆನ್ನೈ: ಇನ್ನೂ ಬಾಳಿ ಬದುಕಿ, ಹಲವು ಸಿನಿಮಾಗಳಲ್ಲಿ ನಟಿಸಬೇಕಿದ್ದ ನಟ ಚಿಕಿತ್ಸೆ ಫಲಕಾರಿಯಾಗದೇ ಮಾರಕ ಕ್ಯಾನ್ಸರ್ ರೋಗಕ್ಕೆ ಬಲಿಯಾಗಿದ್ದಾರೆ.
ಅಸ್ಸಾಂನ ಖ್ಯಾತ ನಟ ಕಿಶೋರ್ ದಾಸ್ ತಮ್ಮ 30ನೇ ವಯಸ್ಸಿಗೆ ಸಾವನ್ನಪ್ಪಿರುವುದು ದುರಂತವೇ ಸರಿ. ಚೆನ್ನೈನ ಆಸ್ಪತ್ರೆಯೊಂದರಲ್ಲಿ ಹಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಕಿಶೋರ್ ಶನಿವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ.
ಅಸ್ಸಾಂನ ಖ್ಯಾತ ನಟನಾಗಿದ್ದ ಕಿಶೋರ್ಗೆ ಸಾಕಷ್ಟು ಸಿನಿಮಾಗಳ ಅವಕಾಶವಿತ್ತು. ಇತ್ತಿಚೆಗೆ ತಾನು ಚೇತರಿಸಿಕೊಳ್ಳುತ್ತಿದ್ದೇನೆ ಎಂದು ತಮ್ಮ ಫೋಟೋ ಸಹಿತ ಪೋಸ್ಟ್ ಮಾಡಿಕೊಂಡಿದ್ದರು. ಆದರೆ ವಿಧಿಯಾಟ ಬೇರೆಯೇ ಆಗಿದೆ.
ನಿಮಗಾಗಿ ಕಾದು ಕುಳಿತಿದ್ದೇವೆ ಎಂಬ ಅಸ್ಸಾಂ ಜನರು ಕಿಶೋರ್ ಸಂಪೂರ್ಣ ಗುಣಮುಖರಾಗಿ ವಾಪಸ್ಸಾಗುತ್ತಾರೆ. ತಮ್ಮ ನೆಚ್ಚಿನ ನಟನನ್ನು ಮತ್ತೆ ಕಣ್ತುಂಬಿಕೊಳ್ಳುತ್ತೇವೆ ಅಂದುಕೊಂಡಿದ್ದರು. ಆದರೆ ಮಹಾಮಾರಿ ಕ್ಯಾನ್ಸರ್ ಅವರನ್ನು ಬಲಿ ಪಡೆದಿದೆ. (ಏಜೆನ್ಸೀಸ್)
ಸಿಬ್ಬಂದಿ ಕೊರತೆಯಿಂದ ಅಂತಾರಾಷ್ಟ್ರೀಯ ವಿಮಾನ ಸಂಚಾರದಲ್ಲಿ ವಿಳಂಬ: ಇಂಡಿಗೋ ವಿಮಾನಯಾನ ಸಂಸ್ಥೆಯಿಂದ ಮಾಹಿತಿ