Poor Lady... ರಾಷ್ಟ್ರಪತಿ ಭಾಷಣವನ್ನು ಟೀಕಿಸುವ ಭರದಲ್ಲಿ ವಿವಾದದ ಕಿಡಿ ಹೊತ್ತಿಸಿದ Sonia Gandhi

Sonia Gandhi
Published on

ನವದೆಹಲಿ: ಫೆಬ್ರವರಿ 01ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಆಯವ್ಯಯ ಮಂಡಿಸಲಿದ್ದು, ಬಜೆಟ್ ಹಿನ್ನೆಲೆಯಲ್ಲಿ ಇಂದಿನಿಂದ ಸಂಸತ್ತಿನಲ್ಲಿ ಬಜೆಟ್​ ಅಧಿವೇಶನ ಆರಂಭವಾಗಿದೆ. ಅಧಿವೇಶನ ಆರಂಭಕ್ಕೂ ಮುನ್ನ ಉಭಯ ಸದನವನ್ನು ಉದ್ಧೇಶಿಸಿ ಮಾತನಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣ ಮಾಡಿದ್ದು, ಇದರ ಬಗ್ಗೆ ಪ್ರತಿಕ್ರಿಯಿಸಲು ಹೋಗಿ ಕಾಂಗ್ರೆಸ್​ ಅಧಿನಾಯಕಿ ಸೋನಿಯಾ ಗಾಂಧಿ (Sonia Gandhi) ವಿವಾದದ ಕಿಡಿಯನ್ನು ಹೊತ್ತಿಸಿದ್ದಾರೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭಾಷಣದ ಕುರಿತು ಸೋನಿಯಾ ಗಾಂಧಿ (Sonia Gandhi) ಅವರಿಗೆ ಸಂಸತ್ತಿನ ಹೊರಗಡೆ ಪ್ರಶ್ನೆ ಕೇಳಿದಾಗ, ಪೂರ್ ಲೇಡಿ, ರಾಷ್ಟ್ರಪತಿ ತುಂಬಾ ದಣಿದಿದ್ದರು. ಭಾಷಣದೂದ್ದಕ್ಕೂ ಸುಳ್ಳು ಭರವಸೆಗಳೇ ತುಂಬಿದ್ದವು ಎಂದು ಹೇಳಿದ್ದಾರೆ. ಇದಲ್ಲದೆ ರಾಹುಲ್ ಸೋನಿಯಾ ಗಾಂಧಿಗೆ ಹೇಳಿಕೊಡುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

ಸೋನಿಯಾ ಗಾಂಧಿ (Sonia Gandhi) ಹೇಳಿಕೆ ನೀಡಿದಾಗ ಸಂಸದರಾದ ರಾಹುಲ್ ಹಾಗೂ ಪ್ರಿಯಾಂಕ ವಾದ್ರಾ ಕೂಡ ಜತೆಯಲ್ಲಿದ್ದರು. ಇತ್ತ ಸೋನಿಯಾ ಗಾಂಧಿ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ ಕಾಂಗ್ರೆಸ್ ನಾಯಕರ ಹೇಳಿಕೆಗೆ ಕಿಡಿಕಾರಿದೆ.

ರಾಷ್ಟ್ರಪತಿಗಳ ಬಗ್ಗೆ ಸೋನಿಯಾ ಹಾಗೂ ರಾಹುಲ್ ಗಾಂಧಿ ನೀಡಿರುವ ಹೇಳಿಕೆ ಅವಹೇಳನಕಾರಿಯಾಗಿದ್ದು, ಆದಿವಾಸಿ ಸಮುದಾಯಕ್ಕೆ ದೇಶದ ಪ್ರಥಮ ಪ್ರಜೆ ಬಗ್ಗೆ ಈ ರೀತಿ ಮಾತನಾಡುವುದು ಸರಿಯಲ್ಲ. ಕಾಂಗ್ರೆಸ್​ ವಂಶಾಡಳಿತ ರಾಜಕಾರಣವೇ ಈ ರೀತಿಯ ಹೇಳಿಕೆ ನೀಡಲು ಸಾಧ್ಯ ಎಂದು ಬಿಜೆಪಿ ಸಂಸದ ಸುಕಾಂತ ಮಜುಂದಾರ್ ಕಿಡಿಕಾರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net