ಒಳ್ಳೇ ಸ್ಕ್ರಿಪ್ಟ್ ಸಿಕ್ಕರೆ ಕನ್ನಡಕ್ಕೂ ಬರ್ತೀನಿ!: ನಟಿ ಪೂಜಾ ಹೆಗ್ಡೆ ಉತ್ತರ

Pooja
Published on

ಬೆಂಗಳೂರು: ನಟಿ ಪೂಜಾ ಹೆಗ್ಡೆ ಸೌತ್ ಸಿನಿಮಾರಂಗದಲ್ಲಿ ಮೋಡಿ ಮಾಡುತ್ತಿದ್ದಾರೆ. ಬಾಲಿವುಡ್​ನಲ್ಲಿಯೂ ಬಗೆಬಗೆ ಸಿನಿಮಾಗಳ ಭಾಗವಾಗಿದ್ದಾರೆ. ಆದರೆ, ಕನ್ನಡಕ್ಕೆ ಮಾತ್ರ ಈವರೆಗೂ ಅವರ ಎಂಟ್ರಿಯಾಗಿಲ್ಲ. ಹಾಗಾದರೆ ಪೂಜಾ ಕನ್ನಡಕ್ಕೆ ಬರೋದು ಯಾವಾಗ? ಹೀಗೊಂದು ಪ್ರಶ್ನೆಗೆ ಅವರೇ ಉತ್ತರ ನೀಡಿದ್ದಾರೆ.

ಇತ್ತೀಚೆಗಷ್ಟೇ ಕಮರ್ ಫಿಲಂ ಫ್ಯಾಕ್ಟರಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಪೂಜಾ ಹೆಗ್ಡೆ ಭಾಗವಹಿಸಿದ್ದರು. ಸಿನಿಮಾ ಸೇರಿ ಹಲವು ವಿಚಾರಗಳನ್ನು ಹಂಚಿಕೊಂಡರು. ಈ ವೇಳೆ ಕನ್ನಡಕ್ಕೆ ನಿಮ್ಮ ಆಗಮನ ಯಾವತ್ತು ಎಂಬ ಪ್ರಶ್ನೆಯೂ ತೂರಿ ಬಂತು. ಅದಕ್ಕೆ ಅಷ್ಟೇ ನಯವಾಗಿ ಉತ್ತರಿಸಿದ ಪೂಜಾ, ‘ಒಳ್ಳೇ ಕಥೆ, ಟೀಮ್ ಸಿಕ್ಕರೆ ಈಗಲೇ ಕನ್ನಡಕ್ಕೆ ಬರುವೆ’ ಎನ್ನುವ ಮೂಲಕ ಅಡ್ಡ ಗೋಡೆಯ ಮೇಲೆ ದೀಪವಿಟ್ಟಂತೆ ಉತ್ತರಿಸಿದ್ದಾರೆ. ಅಷ್ಟೇ ಅಲ್ಲ ಕರ್ನಾಟಕದ ಬಗ್ಗೆಯೂ ಪೂಜಾ ಮಾತನಾಡಿದ್ದಾರೆ.

‘ನಾನು ಹುಟ್ಟಿ , ಬೆಳೆದಿದ್ದು ಮುಂಬೈನಲ್ಲಾದರೂ. ನನಗೆ ಕರ್ನಾಟಕದ ನಂಟಿದೆ. ನಮ್ಮ ತಂದೆ, ತಾಯಿ ಉಡುಪಿಯವರು. ಕರ್ನಾಟಕದ ಮೇಲೆ ಯಾವತ್ತಿದ್ದರೂ ಒಂದು ಸೆಳೆತ ಇದ್ದೇ ಇರುತ್ತದೆ’ ಎನ್ನುತ್ತಾರೆ. ಸದ್ಯ ಪ್ರಭಾಸ್ ಜತೆಗಿನ ‘ರಾಧೆ ಶ್ಯಾಮ್ ಸಿನಿಮಾ ಜನವರಿಗೆ ಬಿಡುಗಡೆಗೆ ಸಿದ್ಧವಾಗಿದೆ. ‘ಆಚಾರ್ಯ’ ಸಹ ರಿಲೀಸ್​ಗೆ ರೆಡಿಯಾಗಿದೆ. ಇನ್ನುಳಿ ದಂತೆ ವಿಜಯ್ ಜತೆಗಿನ ‘ಬೀಸ್ಟ್’, ರಣವೀರ್ ಸಿಂಗ್ ‘ಸರ್ಕಸ್’ ಚಿತ್ರದ ಶೂಟಿಂಗ್ ಸಹ ಶುರುವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net