'ಮೋನಿಕಾ' ಹಿಟ್​ ಆದ್ರೂ 'ಸೌತ್​ ಬ್ಯೂಟಿ'ಗಿಲ್ಲ ಕೋಟಿ ರೂ. ಸಂಭಾವನೆ! ಡಿಮಾಂಡ್​ ಇಲ್ಲದ ಒಪ್ಪಿಗೆ ಏಕೆ? | Pooja Hegde

ವಿಜಯವಾಣಿ (23)
Published on

Pooja Hegde: ತಮಿಳು ಚಿತ್ರರಂಗದ ಸೂಪರ್​ಸ್ಟಾರ್​ ರಜಿನಿಕಾಂತ್ ಅಭಿನಯದ ಬಹುನಿರೀಕ್ಷಿತ ‘ಕೂಲಿ’ ಚಿತ್ರದ ಬಗ್ಗೆ ಸಿನಿಪ್ರಿಯರು ಹಾಗೂ ಚಿತ್ರಪ್ರೇಮಿಗಳಲ್ಲಿ ಭಾರೀ ಕುತೂಹಲ ಮೂಡಿದೆ. ಇತ್ತೀಚೆಗಷ್ಟೇ ಚಿತ್ರದ ಮೋನಿಕಾ ಹಾಡು ರಿಲೀಸ್​ ಆಗಿದ್ದು, ಯೂಟ್ಯೂಬ್​ನಲ್ಲಿ ಸಖತ್​ ಸದ್ದು ಮಾಡುತ್ತಿದೆ. ಈ ಹಾಡಿನಲ್ಲಿ ಸೌತ್​ ಬ್ಯೂಟಿ ಪೂಜಾ ಹೆಗ್ಡೆ ಕಾಣಿಸಿಕೊಂಡಿರುವುದೇ ನೋಡುಗರ ಮನಗೆದ್ದಿದೆ. ಪೂರ ಸಾಂಗ್​ನಲ್ಲಿ ಭರ್ಜರಿಯಾಗಿ ಕುಣಿದು ಕುಪ್ಪಳಿಸಿರುವ ಪೂಜಾ, ಮೋನಿಕಾ ಮಿಲಿಯನ್​ ವೀಕ್ಷಣೆಗೆ ಪ್ರಮುಖ ಕಾರಣರಾಗಿದ್ದಾರೆ. ಪ್ರಸ್ತುತ ಈ ಹಾಡು 6.5 ಮಿಲಿಯನ್​ಗೂ ಹೆಚ್ಚು ವೀಕ್ಷಣೆಯನ್ನು ಪಡೆದುಕೊಂಡಿದೆ.

ಸದ್ಯ ಯೂಟ್ಯೂಬ್​ನಲ್ಲಿ ಟ್ರೆಂಡಿಂಗ್ ಪಟ್ಟಿಯಲ್ಲಿರುವ ಮೋನಿಕಾ ಹಾಡು, ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಕೆಂಪು ಬಣ್ಣದ ಉಡುಗೆಯಲ್ಲಿ ಮಿರ ಮಿರ ಮಿಂಚಿರುವ ಪೂಜಾ, ಮೈಚಳಿ ಬಿಟ್ಟು ಕುಣಿದಿರುವುದು ಹಾಡಿನ ವೀಕ್ಷಣೆಯನ್ನು ನಿರೀಕ್ಷೆಗಿಂತ ಹೆಚ್ಚಿಸಿದೆ. ಒಂದೆಡೆ, ಮೋನಿಕಾ ಸಾಂಗ್ ಜಾಲತಾಣಗಳಲ್ಲಿ ವೈರಲ್ ಆಗಿ ಟ್ರೆಂಡಿಂಗ್​ ಪಟ್ಟಿಗೆ ಸೇರಿದ್ದರೆ, ಮತ್ತೊಂದೆಡೆ ನಟಿಯ ಜೊತೆಗೆ ಮಲಯಾಳಂ ನಟ ಸೌಬಿನ್ ಶಾಹಿರ್ ಜಬರ್ದಸ್ತ್​ ಆಗಿ ಕುಣಿದಿರುವುದು ಸಹ ನೋಡುಗರ ಗಮನವನ್ನು ಸೆಳೆದಿದೆ.

ಪೂಜಾ ಸಂಭಾವನೆ ಲಕ್ಷದಲ್ಲೇ...

ಸ್ಟಾರ್​ ನಟಿಯರು ಆಯಾ ಚಿತ್ರಗಳ ವಿಶೇಷ ಹಾಡಿನಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದರೆ ದುಬಾರಿ ಮೊತ್ತದ ಸಂಭಾವನೆಯ ಬೇಡಿಕೆ ಮುಂದಿಡುತ್ತಾರೆ. ಇದು ಚಿತ್ರದ ನಿರ್ದೇಶಕರು ಹಾಗೂ ನಿರ್ಮಾಪಕರಿಗೆ ಸವಾಲಿನ ಪರಿಸ್ಥಿತಿ ಆಗಿರುತ್ತದೆ. ಆದರೂ, ಈ ಹಾಡಿಗೆ ಇವರೇ ಸೂಕ್ತ ಎಂದರೆ ಬೇಡಿಕೆಗೆ ತಕ್ಕ ಸಂಭಾವನೆಯನ್ನು ಕೊಡಲು ಒಪ್ಪುತ್ತಾರೆ. ಈ ಹಿಂದೆ ಪುಷ್ಪ 1ರಲ್ಲಿ ಉ ಅಂಟಾವ..ಊಹು ಅಂಟಾವ ಹಾಡಿನಲ್ಲಿ ಸಖತ್​ ಹಾಟ್​ ಆಗಿ ಕಾಣಿಸಿಕೊಂಡಿದ್ದ ನಟಿ ಸಮಂತಾ, ಕೇವಲ ಇದೊಂದು ಹಾಡಿಗೆ ಬರೋಬ್ಬರಿ 3 ಕೋಟಿ ರೂ. ಪಡೆದಿದ್ದರು. ಇನ್ನು ನಟಿ ಶ್ರೀಲೀಲಾ ಕೂಡ ಒಂದು ಹಾಡಿಗೆ 2 ಕೋಟಿ ರೂ. ಸ್ವೀಕರಿಸಿದ್ದಾರೆ. ಆದರೆ, ಪೂಜಾ ವಿಷಯದಲ್ಲಿ ಹಾಗಾಗಿಲ್ಲ ಎಂದು ಸಿನಿ ಮೂಲಗಳು ತಿಳಿಸಿವೆ.

ಕೋಟಿ ರೂ. ಸಂಭಾವನೆ ಇಲ್ಲ!

ಮಿಲಿಯನ್​ಗಟ್ಟಲೇ ವೀಕ್ಷಣೆ ಪಡೆದಿರುವ ಮೋನಿಕಾ ಹಾಡು, ಇಂದಿಗೂ ಯೂಟ್ಯೂಬ್​ನಲ್ಲಿ ಟ್ರೆಂಡಿಂಗ್​ನಲ್ಲಿದೆ. ಸಾಂಗ್​ನಲ್ಲಿ ನೋಡುಗರ ಹುಬ್ಬೇರಿಸುವಂತೆ ಕುಣಿದು ಕುಪ್ಪಳಿಸಿರುವ ಪೂಜಾ ಹೆಗ್ಡೆ, ಯಾವುದೇ ಬೇಡಿಕೆ ಮುಂದಿಡದೆ ನಿರ್ದೇಶಕರು ಹೇಳಿದ ಸಂಭಾವನೆಯನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಈ ಹಾಡಿಗೆ ನಿರ್ದೇಶಕ ಲೋಕೇಶ್ ಕನಕರಾಜ್​ 70 ಲಕ್ಷ ರೂ. ಕೊಡುವುದಾಗಿ ಪೂಜಾಗೆ ಹೇಳಿದ್ದರು. ಇದಕ್ಕೆ ಯಾವುದೇ ಡಿಮಾಂಡ್ ಮಾಡದ ಸೌತ್ ಬ್ಯೂಟಿ, ಹೆಚ್ಚು ಸಮಯ ವ್ಯರ್ಥ ಮಾಡದೆ ಒಪ್ಪಿಗೆ ಸೂಚಿಸಿರುವುದು ಸದ್ಯ ಹಲವರ ಅಚ್ಚರಿಗೆ ಕಾರಣವಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net