2024ರ ಚುನಾವಣಾ ಫಲಿತಾಂಶ ಮೋದಿಯವರ ನೈತಿಕ, ರಾಜಕೀಯ, ವೈಯಕ್ತಿಕ ಸೋಲು : ಜೈರಾಮ್​ ರಮೇಶ್​​

Untitled-design-38-1
Published on

ನವದಹೆಲಿ: ಲೋಕಸಭಾ ಚುನಾವಣೆ 2024ರ ಜನಾದೇಶವು ಪ್ರಧಾನಿ ನರೇಂದ್ರ ಮೋದಿಯವರ ನೈತಿಕ, ರಾಜಕೀಯ ಮತ್ತು ವೈಯಕ್ತಿಕ ಸೋಲು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್​ ರಮೇಶ್​ ಟೀಕಿಸಿದ್ದಾರೆ. ಅವರು ಈಗ ತಮ್ಮ ಕರುಣಾಜನಕ ಚುನಾವಣಾ ಸಾಧನೆಯನ್ನು ಸಮರ್ಥಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ದೇಶದಲ್ಲಿ ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ನಡೆದಿದ್ದು, ಜೂನ್ 4ರಂದು ಚುನಾವಣಾ ಆಯೋಗ ಫಲಿತಾಂಶ ಪ್ರಕಟಿಸಿದೆ. 543 ಸ್ಥಾನಗಳಿಗೆ ಲೋಕಸಭೆ ಚುನಾವಣೆ ನಡೆದಿದೆ. ಈ ಚುನಾವಣೆಯಲ್ಲಿ ಬಿಜೆಪಿ 240 ಸ್ಥಾನಗಳನ್ನು ಗೆದ್ದಿದೆ. 543 ಸದಸ್ಯ ಬಲದ ಸದನದಲ್ಲಿ ಅರ್ಧದಷ್ಟು ಕಡಿಮೆಯಾಗಿದೆ, ಆದರೆ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಒಟ್ಟಾಗಿ 293 ಸ್ಥಾನಗಳನ್ನು ಗೆದ್ದಿದೆ ಎಂದಿದ್ದಾರೆ.

ಅಲ್ಲದೆ ಜವಾಹರಲಾಲ್ ನೆಹರು ನಂತರ ಸತತ ಮೂರನೇ ಬಾರಿಗೆ ಜನಾದೇಶ ಪಡೆದ ಮೊದಲ ವ್ಯಕ್ತಿ ಪ್ರಧಾನಿ ನರೇಂದ್ರ ಮೋದಿ ಎಂದು ಪ್ರಚಾರ ಮಾಡಲಾಗುತ್ತಿದೆ. ಆದರೆ ಒಂದು ಪಕ್ಷ 240 ಸ್ಥಾನಗಳನ್ನು ಗೆದ್ದು ಮೂರನೇ ಒಂದು ಭಾಗದಷ್ಟು ಸ್ಥಾನಗಳಲ್ಲಿ ಪ್ರಧಾನಿಯಾಗುತ್ತಿದೆ. ಈ ಜನಾದೇಶ ಹೇಗೆ ಎಂದು ವಿವರಿಸಲಿಲ್ಲವೇ? ಎಂದರು.

ಜವಾಹರಲಾಲ್ ನೆಹರು ಅವರಿಗೆ 1952ರಲ್ಲಿ 364, 1957ರಲ್ಲಿ 371 ಹಾಗೂ 1962ರಲ್ಲಿ 361 ಸ್ಥಾನಗಳು ಸಿಕ್ಕಿವೆ. ಆದರೂ ಅವರು ಕಟ್ಟಾ ಪ್ರಜಾಪ್ರಭುತ್ವವಾದಿಯಾಗಿಯೇ ಉಳಿದರು. ತಮ್ಮ ನಿರಂತರ ಉಪಸ್ಥಿತಿಯಿಂದ ಸಂಸತ್ತನ್ನು ಬಹಳ ಎಚ್ಚರಿಕೆಯಿಂದ ಪೋಷಿಸಿದರು ಎಂದು ಜೈರಾಮ್​ ರಮೇಶ್​ ಹೇಳಿದ್ದಾರೆ.

ನೆಹರು ನಂತರ ಸತತವಾಗಿ ಮೂರು ಬಾರಿ ಪ್ರಮಾಣ ವಚನ ಸ್ವೀಕರಿಸಿದ ಏಕೈಕ ವ್ಯಕ್ತಿ ಮೋದಿಯಲ್ಲ ಎಂದು ಹೇಳಿದ ಅವರು, ಅಟಲ್ ಬಿಹಾರಿ ವಾಜಪೇಯಿ ಅವರು 1996, 1998 ಮತ್ತು 1999ರಲ್ಲಿ ಮೂರು ಬಾರಿ ಪ್ರಮಾಣ ವಚನ ಸ್ವೀಕರಿಸಿದ್ದರು. ಅಷ್ಟೇ ಅಲ್ಲ ಇಂದಿರಾಗಾಂಧಿ ಅವರು 1966, 1967, 1971 ಮತ್ತು 1980ರಲ್ಲಿ 4 ಬಾರಿ ಪ್ರಮಾಣವಚನ ಸ್ವೀಕರಿಸಿದ್ದಾರೆ ಎಂದಿದ್ದಾರೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net