ಈ ಕಾರಣಕ್ಕಾಗಿಯೇ ಮೋದಿ ಗೆಲುವಿಗೆ ಅಭಿನಂದನೆ ಹೇಳಲಾಗ್ತಿಲ್ಲವೆಂದ ಪಾಕ್ : ಆ ಕಾರಣ ಏನು ಗೊತ್ತಾ?

1 Min Read
ಈ ಕಾರಣಕ್ಕಾಗಿಯೇ ಮೋದಿ ಗೆಲುವಿಗೆ ಅಭಿನಂದನೆ ಹೇಳಲಾಗ್ತಿಲ್ಲವೆಂದ ಪಾಕ್ : ಆ ಕಾರಣ ಏನು ಗೊತ್ತಾ?

ಇಸ್ಲಾಮಾಬಾದ್​​: ಎನ್‌ಡಿಎ ಸಂಸದೀಯ ಪಕ್ಷದ ನಾಯಕರಾಗಿ ಆಯ್ಕೆಯಾದ ನಂತರ ನರೇಂದ್ರ ಮೋದಿ ಅವರು ಜೂನ್ 9 ರಂದು ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಮೋದಿ ಅವರ ಈ ಸಾಧನೆಗೆ ವಿಶ್ವದ ಬಹುತೇಕ ದೇಶಗಳು ಅಭಿನಂದನಾ ಸಂದೇಶಗಳನ್ನು ಕಳುಹಿಸಿವೆ. ಆದರೆ ನೆರೆಯ ರಾಷ್ಟ್ರವಾದ ಪಾಕಿಸ್ತಾನ ಮಾತ್ರ ಇದರಿಂದ ಹೊರತಾಗಿದೆ. ಇದೀಗ ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ಮೋದಿ ಅವರಿಗೆ ಅಭಿನಂದಿಸದಿರುವುದರ ಹಿಂದಿನ ತನ್ನ ಕಾರಣವನ್ನು ತಿಳಿಸಿದೆ.

ಇದನ್ನು ಓದಿ: ಬೇಳೆಕಾಳುಗಳನ್ನು ಅತಿಯಾಗಿ ಬೇಯಿಸುವುದನ್ನು ತಪ್ಪಿಸಬೇಕು: ಐಸಿಎಂಆರ್ ಸೂಚನೆ

ಮೋದಿ ಅವರು ಸತತ ಮೂರನೇ ಅವಧಿಗೆ ಪ್ರಮಾಣ ವಚನ ಸ್ವೀಕರಿಸುವ ಒಂದು ದಿನ ಮುಂಚಿತವಾಗಿ ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ಹೇಳಿಕೆ ಹೊರಬಿದ್ದಿದೆ. ವಿದೇಶಾಂಗ ಸಚಿವಾಲಯದ ವಕ್ತಾರರಾದ ಮುಮ್ತಾಜ್ ಜಹ್ರಾ ಬಲೂಚ್ ಅವರನ್ನು ಚುನಾವಣೆಯಲ್ಲಿ ಗೆದ್ದಿರುವ ಪ್ರಧಾನಿ ಮೋದಿಗೆ ಪಾಕಿಸ್ತಾನ ಅಭಿನಂದನೆ ಸಲ್ಲಿಸಿದೆಯೇ ಎಂದು ಕೇಳಿದಾಗ, ಅವರ ನಾಯಕತ್ವದ ಬಗ್ಗೆ ನಿರ್ಧರಿಸುವುದು ಭಾರತೀಯ ನಾಗರಿಕರ ಹಕ್ಕು ಎಂದು ಹೇಳಿದರು.

ಅವರ ಚುನಾವಣಾ ಪ್ರಕ್ರಿಯೆಯ ಬಗ್ಗೆ ನಮಗೆ ಯಾವುದೇ ಪ್ರತಿಕ್ರಿಯೆ ಇಲ್ಲ. ಹೊಸ ಸರ್ಕಾರವು ಅಧಿಕೃತವಾಗಿ ಪ್ರಮಾಣವಚನ ಸ್ವೀಕರಿಸದ ಕಾರಣ, ಭಾರತದ ಪ್ರಧಾನಮಂತ್ರಿಯನ್ನು ಅಭಿನಂದಿಸುವ ಬಗ್ಗೆ ಮಾತನಾಡುವುದು ಮಾನ್ಯವಲ್ಲ ಎಂದು ಹೇಳಿದ್ದಾರೆ.

ಭಾರತದೊಂದಿಗಿನ ಸಂಬಂಧಗಳ ಬಗ್ಗೆ ವಿವರಿಸಿದ ಮುಮ್ತಾಜ್ ಬಲೂಚ್, ಪಾಕಿಸ್ತಾನ ಯಾವಾಗಲೂ ತನ್ನ ನೆರೆಹೊರೆಯವರೊಂದಿಗಿನ ಎಲ್ಲ ವಿವಾದಗಳನ್ನು ಮಾತುಕತೆಯ ಮೂಲಕ ಪರಿಹರಿಸಲು ಪ್ರಯತ್ನಿಸುತ್ತಿದೆ. ಹಾಗೂ ಭಾರತ ಸೇರಿದಂತೆ ಎಲ್ಲ ನೆರೆಹೊರೆಯವರೊಂದಿಗೆ ಪಾಕಿಸ್ತಾನ ಯಾವಾಗಲೂ ಸಹಕಾರ ಸಂಬಂಧವನ್ನು ಬಯಸುತ್ತದೆ ಎಂದು ಹೇಳಿದರು. (ಏಜೆನ್ಸೀಸ್​​)

ಭಾರತ-ತೈವಾನ್​ ಉಭಯ ನಾಯಕರ ಮಾತುಕತೆ : ವಿರೋಧ ವ್ಯಕ್ತಪಡಿಸಿದ ಚೀನಾಕ್ಕೆ ತೈವಾನ್​ ಉತ್ತರಿಸಿದ್ದು ಹೀಗೆ

See also  ಉದ್ದ ಕೂದಲು ಬಿಟ್ಟಿದ್ದಕ್ಕೇ ಅರೆಸ್ಟ್! ಪಾಕಿಸ್ತಾನದಲ್ಲಿ ರಂಗಭೂಮಿ ಕಲಾವಿದನಿಗೆ ಕೊಟ್ಟ ಶಿಕ್ಷೆ ಹೇಗಿದೆ ನೋಡಿ...
Share This Article