Police Training: 10 ರಿಂದ 12 ತಿಂಗಳಿಗೆ ಏರಿಕೆ ಎಡಿಜಿಪಿ ಅಲೋಕ ಕುಮಾರ್‌ ಮಾಹಿತಿ

Police Training
Published on

ಕಾರವಾರ: ಪ್ರಸ್ತುತ ವಿದ್ಯಮಾನಗಳಿಗೆ ತಕ್ಕಂತೆ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯ ತರಬೇತಿ (Police Training) ಯಲ್ಲಿ ಆಮೂಲಾಗ್ರ ಬದಲಾವಣೆಗಳನ್ನು ತರಲಾಗುತ್ತಿದೆ ಎಂದು ಕರ್ನಾಟಕ ಪೊಲೀಸ್ ತರಬೇತಿ ವಿಭಾಗದ ಎಡಿಜಿಪಿ ಅಲೋಕ ಕುಮಾರ್ ತಿಳಿಸಿದರು.

ಕಾರವಾರದಲ್ಲಿ ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆ ವೀಕ್ಷಿಸಿದ ನಂತರ ಅವರು ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದರು. ಕಾಯ್ದೆಗಳು ಬದಲಾಗಿವೆ. ಅಪರಾಧದ ಸ್ವರೂಪಗಳೂ ಬದಲಾಗಿವೆ. ವಿಧಿ ವಿಜ್ಞಾನ ತಂತ್ರಜ್ಞಾನಗಳು ವೇಗವಾಗಿ ಅಭಿವೃದ್ಧಿ ಹೊಂದುತ್ತಿವೆ. ಅದಕ್ಕೆ ಅನುಕೂಲವಾಗುವಂತೆ ಅಪ್‌ಡೇಟ್ ಆಗಲು ನಾವು ವಿವಿಧ ಕ್ರಮ ವಹಿಸಿದ್ದೇವೆ ಎಂದರು.

ಜರ್ಮನಿ ಮಾದರಿಯಲ್ಲಿ ಪರಿಸ್ಥಿತಿ ಆಧಾರಿತ ತರಬೇತಿಯನ್ನು (Police Training) ನೀಡಲಾಗುತ್ತಿದೆ. ತರಬೇತಿ ಅವಧಿಯಲ್ಲಿ ಕೇವಲ ಪಾಠದ ಬದಲು ಗುಂಪು ಚರ್ಚೆ, ಪ್ರಾಯೋಗಿಕ ತರಬೇತಿ ಹೆಚ್ಚಿಸಿದ್ದೇವೆ. ಪ್ರತಿ ಹುದ್ದೆಗಳ ಜವಾಬ್ದಾರಿಯನ್ನು ತಿಳಿಸಿಕೊಡಲಾಗುತ್ತಿದೆ. ಡಿಎಸ್‌ಪಿಗಳ ತರಬೇತಿ ಅವಽಯನ್ನು 10 ತಿಂಗಳಿಂದ 1 ವರ್ಷಕ್ಕೆ, ಕಾನ್ಸ್ಟೇಬಲ್‌ಗಳ ತರಬೇತಿಯ ಅವಧಿಯನ್ನು 9 ರಿಂದ 10 ತಿಂಗಳಿಗೆ ಹೆಚ್ಚಿಸಲಾಗಿದೆ. ಡಿಎಸ್‌ಪಿ ತರಬೇತಿಯಲ್ಲಿ ಮಾತ್ರ ನೀಡಲಾಗುತ್ತಿದ್ದ ಸ್ಯಾಂಡ್‌ವಿಚ್ ಕೋರ್ಸ್ನ್ನು ಈಗ ಪಿಎಸ್‌ಐ ಹಾಗೂ ಕಾನ್ಸ್ಟೇಬಲ್ ತರಬೇತಿಗಳಲ್ಲೂ ಅಳವಡಿಸಿಕೊಳ್ಳಲಾಗಿದೆ. ಶಿಬಿರಾರ್ಥಿಗಳು ಅರ್ಧ ತರಬೇತಿಯ ನಂತರ ತಾವು ಕಾರ್ಯ ನಿರ್ವಹಿಸುವ ಘಟಕಗಳಿಗೆ ತೆರಳಿ ತರಬೇತಿಯಲ್ಲಿ ಹೇಳಿಕೊಡುವ ಅಂಶಗಳ ಪ್ರಾಯೋಗಿಕವಾಗಿ ವೀಕ್ಷಿಸಲು ಅನುವು ಮಾಡಿಕೊಡಲಾಗುತ್ತಿದೆ ಎಂದರು.

ಮನೋಭಾವ ಬದಲಾಗಬೇಕು: ಹೊಸದಾಗಿ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಗಳು ಜಾರಿಯಾಗಿವೆ. ಹೊಸ ಕಾಯ್ದೆಯಲ್ಲಿ ದಂಡಕ್ಕಿAತ ನ್ಯಾಯಕ್ಕೆ ಒತ್ತು ನೀಡಲಾಗಿದೆ. ಕ್ರಿಮಿನಲ್ ಪ್ರೊಸೀಜರ್ ಕೋಡ್ ಬದಲು ಈಗ ನಾಗರಿಕರ ಸುರಕ್ಷತೆಗೆ ಮಹತ್ವ ನೀಡಲಾಗಿದೆ. ಕೇವಲ ಕಾಯ್ದೆ ಬದಲಾದರೆ ಸಾಧ್ಯವಿಲ್ಲ. ನಮ್ಮ ಮನೋಭಾವನೆ ಬದಲು ಮಾಡಿದಲ್ಲಿ ಮಾತ್ರ ಜನರಿಗೆ ನ್ಯಾಯ ಸಿಗಲು ಸಾಧ್ಯ. ಹಾಗಾಗಿ ಎಲ್ಲ ಅಽಕಾರಿ, ಸಿಬ್ಬಂದಿಗೆ ಈಗಾಗಲೇ ತರಬೇತಿ ನೀಡಲಾಗಿದೆ. ಆದರೆ, ಇನ್ನಷ್ಟು ತರಬೇತಿ ಬೇಕಾಗಿದ್ದು, ಕಾಲ ಕಾಲಕ್ಕೆ ನೀಡಲು ಯೋಜಿಸಲಾಗಿದೆ. ಭಡ್ತಿ ಹೊಂದಿದ ಪ್ರತಿಯೊಬ್ಬರಿಗೂ ತರಬೇತಿ ನೀಡಲು ಯೋಜಿಸಲಾಗಿದೆ. ಅಲ್ಲದೇ, ಆಗಾಗ ಪುನರುಜ್ಜೀವ ತರಬೇತಿಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ. ನಾಗರಿಕರಿಗೂ ಹೊಸ ಕಾಯ್ದೆಗಳ ಬಗ್ಗೆ ಅರಿವು ಬೇಕಿದೆ ಎಂದರು. ಎಸ್‌ಪಿ ಎಂ.ನಾರಾಯಣ, ಡಿವೈಎಸ್‌ಪಿ ಗಿರೀಶ ಎಸ್.ವಿ. ಇದ್ದರು.

Police Training ಗಾಗಿ ಇನೋಸಿಸ್ ನೆರವಿನಲ್ಲಿ ಸೈಬರ್ ಲ್ಯಾಬ್

ಆಧುನಿಕ ತಂತ್ರಜ್ಞಾನಗಳಿರುವ ಸುಸಜ್ಜಿತ ಸೈಬರ್ ಲ್ಯಾಬ್ ನಿರ್ಮಾಣಕ್ಕೆ ಇನೋಸಿಸ್ ಸಂಸ್ಥೆಗೆ ಮನವಿ ಮಾಡಲಾಗಿದೆ ಎಂದು ಅಲೋಕ ಕುಮಾರ್ ತಿಳಿಸಿದರು. ಇನೋಸಿಸ್ ಸಿಐಡಿಗೆ ಸುಸಜ್ಜಿತ ಲ್ಯಾಬ್ ಒದಗಿಸಿಕೊಟ್ಟಿದೆ. ಅದೇ ಮಾದರಿಯಲ್ಲಿ ಮೈಸೂರಿನ ಕರ್ನಾಟಕ ಪೊಲೀಸ್ ಅಕಾಡೆಮಿಯಲ್ಲಿ ಸೈಬರ್ ಲ್ಯಾಬ್‌ನ್ನು ಸಿಎಸ್‌ಆರ್ ನಿಽಯಲ್ಲಿ ಸಿದ್ಧಪಡಿಸಿಕೊಡುವಂತೆ ಮನವಿ ಮಾಡಿದ್ದೇನೆ. ಕಳೆದ ತಿಂಗಳು ಇನೋಸಿಸ್ ಮೈಸೂರು ಮುಖ್ಯಸ್ಥ ವಿನಾಯಕ ಹೆಗಡೆ ಅವರನ್ನು ಸ್ವತಃ ಭೇಟಿಯಾಗಿ ಚರ್ಚಿಸಿದ್ದೇನೆ. ಕಲಬುರಗಿಯಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ನಮಗೆ ಸೈಬರ್ ಲ್ಯಾಬ್ ನಿರ್ಮಾಣ ಮಾಡಿಕೊಟ್ಟಿದೆ. ಬೆಂಗಳೂರು ಹೊತರುಪಸಿಸಿ ಮೊದಲ ಸೈಬರ್ ಲ್ಯಾಬ್ ಈಗಲೇ ನಿರ್ಮಾಣವಾಗಿದೆ ಎಂದು ಮಾಹಿತಿ ನೀಡಿದರು.

ಕಾರವಾರದಲ್ಲಿ Police Training

ಈ ವರ್ಷ 50 ಸಾವಿರಕ್ಕೂ ಅಧಿಕ ಸಶಸ್ತ್ರ ಪೊಲೀಸ್ ಸಿಬ್ಬಂದಿ ನೇಮಕವಾಗಿದೆ. 1300 ಸಿವಿಲ್ ಕಾನ್ಸಟೇಬಲ್‌ಗಳ ನೇಮಕಾತಿಯಾಗಿದೆ. 500 ಪಿಎಸ್‌ಐಗಳ ನೇಮಕವಾಗಿದೆ. ಈಗಾಗಲೇ ಪೊಲೀಸ್ ತರಬೇತಿ ಶಾಲೆಗಳಲ್ಲಿ ತರಬೇತಿ ನಿರತರ ಸಂಖ್ಯೆ ಭರ್ತಿಯಾಗಿದೆ. ಹಾಗಾಗಿ ಕಾರವಾರದಲ್ಲಿರುವ ತಾತ್ಕಾಲಿಕ ತರಬೇತಿ ಶಾಲೆಯಲ್ಲಿ ಒಂದು ಬ್ಯಾಚ್‌ಗೆ ತರಬೇತಿ ಪ್ರಾರಂಭಿಸುವ ಯೋಜನೆ ಹೊಂದಿದ್ದು, ಹಾಗಾಗಿ ಮೂಲ ಸೌಕರ್ಯ ಪರಿಶೀಲಿಸುವ ಸಲುವಾಗಿ ಆಗಮಿಸಿದ್ದೇನೆ ಎಂದು ಅಲೋಕ್ ಕುಮಾರ್ ತಿಳಿಸಿದರು.ಇದನ್ನೂ ಓದಿ: https://www.vijayavani.net/wild-animals-at-amadallihttps://www.facebook.com/share/p/19gPQ59VPM/

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net