ಹುಲಿ ಮರಿ ರಸ್ತೆ ದಾಟಲಿ ಅಂತ ಟ್ರಾಫಿಕ್ ಜಾಮ್ ಮಾಡಿದ ಅರಣ್ಯ ಇಲಾಖೆ!

tiger
Published on

ಮಹಾರಾಷ್ಟ್ರ: ಮೀಸಲು ಅರಣ್ಯದ ರಸ್ತೆಗಳಲ್ಲಿ ಸಂಚರಿಸುವಾಗ ಬಹಳ ಜಾಗರೂಕರಾಗಿ ಇರಬೇಕು. ಸ್ವಲ್ಪ ಎಚ್ಚರ ತಪ್ಪಿದರೂ ವನ್ಯಜೀವಿಗಳು ಮತ್ತು ಮನುಷ್ಯರ ಜೀವಕ್ಕೆ ಅಪಾಯ ಉಂಟಾಗಬಹುದು. ಇದೀಗ ತಡೋಬಾ ರಾಷ್ಟ್ರೀಯ ಉದ್ಯಾನವನದಲ್ಲಿ ಹುಲಿಗಳು ರಸ್ತೆ ದಾಟುತ್ತಿರುವಾಗ ಮಹಾರಾಷ್ಟ್ರ ಅರಣ್ಯ ಇಲಾಖೆ ಟ್ರಾಫಿಕ್​ ಜಾಮ್​ ಮಾಡಿರುವ ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ.

ಟ್ವಿಟರ್ ಬಳಕೆದಾರ ಮಿಲಿಂದ್ ಪರಿವಾಕಂ ಹಂಚಿಕೊಂಡಿರುವ ಕ್ಲಿಪ್‌ನಲ್ಲಿ ಹುಲಿಗಳು ರಸ್ತೆ ದಾಟಲು ಸಹಾಯ ಮಾಡುತ್ತಿರುವ ಅಧಿಕಾರಿಗಳು ಅನೇಕ ವಾಹನಗಳನ್ನು ಹಾಗೂ ಜನರನನ್ನು ತಡೆದು ನಿಲ್ಲಿಸಿದ್ದನ್ನು ಕಾಣಬಹುದು. ವಿಡಿಯೋದಲ್ಲಿ ರಸ್ತೆಯಲ್ಲಿ ಜನರು ಕಾಯುತ್ತಿರುವಾಗ ವಯಸ್ಕ ಹುಲಿಯೊಂದು ತನ್ನ ಮರಿಯನ್ನು ಕರೆದುಕೊಂಡು ರಸ್ತೆ ದಾಟುತ್ತಿರುವುದು ಕಂಡುಬರುತ್ತದೆ. ಕಾಮೆಂಟ್‌ ವಿಭಾಗದಲ್ಲಿ ಜನ ಹಂಚಿಕೊಂಡಿರುವ ಮತ್ತೊಂದು ವಿಡಿಯೋದಲ್ಲಿ, ಹುಲಿಗಳು ಶಾಂತವಾಗಿ ಹಾದುಹೋಗಲು ಮೌನವಾಗಿರಲು ವ್ಯಕ್ತಿಯೊಬ್ಬರು ಇತರರಿಗೆ ಹೇಳುತ್ತಿರುವುದು ಕಾಣಬಹುದು.

ಕಳೆದ ವರ್ಷ ಜುಲೈನಲ್ಲಿ, ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಹುಲಿ ಹೆದ್ದಾರಿ ದಾಟಲು ಹಸಿರು ಕಾರಿಡಾರ್ ಅನ್ನು ರಚಿಸುವ ವೀಡಿಯೊ ಆನ್‌ಲೈನ್‌ನಲ್ಲಿ ಮೆಚ್ಚುಗೆಯನ್ನು ಗಳಿಸಿತ್ತು. ಮಹಾರಾಷ್ಟ್ರದ ವಿಡಿಯೋದಲ್ಲಿ ಪ್ರಯಾಣಿಕರನ್ನು ರಸ್ತೆಯ ಎರಡೂ ಬದಿಗಳಲ್ಲಿನ ಸಿಗ್ನಲ್‌ನಲ್ಲಿ ನಿಲ್ಲಿಸಲಾಗಿದೆ. ಅಷ್ಟರಲ್ಲಿ ದೊಡ್ಡ ಹುಲಿಯೊಂದು ಕಾಡಿನಿಂದ ಹೊರಬಂದು ನಿಧಾನವಾಗಿ ರಸ್ತೆ ದಾಟಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net