ಟ್ರಕ್​​ನಲ್ಲಿ ಸಾಗಿಸುತ್ತಿದ್ದ ಗಾಂಜಾ ವಶ, ಅದರ ಬೆಲೆ ಎಷ್ಟು ಗೊತ್ತಾ..?

ganja pic
Published on

ಭೂಪಾಲ್: ಟ್ರಕ್​​ನಲ್ಲಿ ಸಾಗಿಸುತ್ತಿದ್ದ ಸುಮಾರು 1.5 ಕೋಟಿ ರೂಪಾಯಿ ಮೌಲ್ಯದ 952 ಕೆಜಿ ಗಾಂಜಾವನ್ನು ಭೂಪಾಲ್ ಪೊಲೀಸರು ವಶಪಡಿಸಿಕೊಂಡಿರುವ ಘಟನೆ ಮಧ್ಯಪ್ರದೇಶದ ರೆವಾ ಜಿಲ್ಲೆಯಲ್ಲಿ ನಡೆದಿದೆ.

ಅಪಾರ ಪ್ರಮಾಣದ ಗಾಂಜಾವನ್ನು ಉತ್ತರಪ್ರದೇಶದಿಂದ ಟ್ರಕ್ ಮೂಲಕ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ಬೆನ್ನತ್ತಿದ್ದಾರೆ. ನಂತರ ರೆವಾ ಜಿಲ್ಲೆಯಿಂದ 60 ಕಿ.ಮೀ ದೂರದಲ್ಲಿರುವ ಚಾಕ್ ಕ್ರಾಸ್ ಬಳಿ ಟ್ರಕ್​​ಅನ್ನು ಅಡಗಟ್ಟಿ ತಪಾಸಣೆ ನಡೆಸಿದ್ದಾರೆ.

ಈ ವೇಳೆ 53 ಚೀಲಗಳಲ್ಲಿ ಗಾಂಜಾ ತುಂಬಿರುವುದು ಪತ್ತೆಯಾಗಿದೆ. ಇದಕ್ಕೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ 1.5 ಕೋಟಿ ರೂ. ಬೆಲೆ ಇದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಟ್ರಕ್​ನಲ್ಲಿದ್ದ ಇಬ್ಬರು ಮತ್ತು ಬೈಕ್​​ನಲ್ಲಿ ಹಿಂಬಾಲಿಸುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 6 ಮೊಬೈಲ್, ಒಂದು ಟ್ರಕ್, ಒಂದು ಬೈಕ್ ವಶಪಡಿಸಿಕೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net